ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಲಾಕ್ ಡೌನ್; ಕಾರ್ಖಾನೆಗಳಿಗೆ ಮಾರ್ಗಸೂಚಿ

|
Google Oneindia Kannada News

ಬೆಂಗಳೂರು, ಜುಲೈ 13 : ಕರ್ನಾಟಕ ಸರ್ಕಾರ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಂಗಳವಾರದಿಂದ ಲಾಕ್ ಡೌನ್ ಜಾರಿಗೆ ತರಲಿದೆ. ಸರ್ಕಾರ ಲಾಕ್ ಡೌನ್ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಕಾರ್ಖಾನೆಗಳಿಗೆ ಮಾರ್ಗಸೂಚಿ ಇಲ್ಲಿದೆ.

Recommended Video

Rameshwaram - A Spiritual Journey To The Divine Site Of Tamil Nadu | Oneindia Kannada

ಬೆಂಗಳೂರು ನಗರದಲ್ಲಿ ಸೋಮವಾರ 1,315 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. ನಗರದಲ್ಲಿನ ಸೋಂಕಿತರ ಸಂಖ್ಯೆ 19,702ಕ್ಕೆ ಏರಿಕೆಯಾಗಿದೆ. ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.

ಬೆಂಗಳೂರು ಲಾಕ್ ಡೌನ್; ಮಾರ್ಗಸೂಚಿ ಪ್ರಕಟ ಬೆಂಗಳೂರು ಲಾಕ್ ಡೌನ್; ಮಾರ್ಗಸೂಚಿ ಪ್ರಕಟ

Bengaluru Lockdown Guidelines For Industry

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ 8 ಗಂಟೆಯಿಂದ ಜುಲೈ 22ರ ಸಂಜೆ 5 ಗಂಟೆ ತನಕ ಲಾಕ್ ಡೌನ್ ಜಾರಿಯಲ್ಲಿರುತ್ತದೆ.

ಬೆಂಗಳೂರು ಲಾಕ್ ಡೌನ್; ಅಂಗಡಿಗಳಿಗೆ ಮಾರ್ಗಸೂಚಿಗಳು ಬೆಂಗಳೂರು ಲಾಕ್ ಡೌನ್; ಅಂಗಡಿಗಳಿಗೆ ಮಾರ್ಗಸೂಚಿಗಳು

ಕೈಗಾರಿಕೆಗಳು/ ಕೈಗಾರಿಕಾ ಸಂಸ್ಥೆಗಳು (ಸರ್ಕಾರಿ ಮತ್ತು ಖಾಸಗಿ ಎರಡೂ) ಕಾರ್ಯಚರಿಸಲು ಅವಕಾಶವಿರತಕ್ಕದ್ದು. ಆದರೆ, ಕಂಟೈನ್ಮೆಂಟ್ ಝೋನ್‌ಗಳಿಗೆ ಇದು ಅನ್ವಯವಾಗುವುದಿಲ್ಲ.

* ನಿರಂತರ ಕಾರ್ಯ ಪ್ರಕ್ರಿಯೆ ಮತ್ತು ಅದರ ಪೂರೈಕೆಗೆ ಅಗತ್ಯವಿರುವ ಉತ್ಪಾದನಾ ಘಟಕಗಳು.

ಚಿತ್ರಗಳು; ಬೆಂಗಳೂರಲ್ಲಿ ಲಾಕ್ ಡೌನ್, ನಗರ ಬಿಟ್ಟು ಹೊರಟ ಜನಚಿತ್ರಗಳು; ಬೆಂಗಳೂರಲ್ಲಿ ಲಾಕ್ ಡೌನ್, ನಗರ ಬಿಟ್ಟು ಹೊರಟ ಜನ

* ಆಹಾರ ಸಂಸ್ಕಾರಣಾ ಕೈಗಾರಿಕೆಗಳು, ಔಷಧಗಳು, ಔಷಧ ವಸ್ತುಗಳು, ವೈದ್ಯಕೀಯ ಉಪಕರಣಗಳು, ಅವುಗಳ ಕಚ್ಚಾ ಹಾಗೂ ಅವಶ್ಯಕ ಪದಾರ್ಥಗಳನ್ನು ಒಳಗೊಂಡಂತೆ ಅತ್ಯಾವಶ್ಯಕ ವಸ್ತುಗಳ ಉತ್ಪಾದನೆ.

* ಪ್ಯಾಕಿಂಗ್ ಸಾಮಾಗ್ರಿಗಳ ಉತ್ಪಾದನೆ

* ಕೋವಿಡ್ - 19 ನಿರ್ವಹಣೆಗಾಗಿ ಇರುವ ರಾಷ್ಟ್ರೀಯ ನಿರ್ದೇಶನಗಳನ್ನು ಪಾಲಿಸುವ ಷರತ್ತಿಗೊಳಪಟ್ಟು ವಿಶೇಷ ಆರ್ಥಿಕ ವಲಯಗಳು ಮತ್ತು ರಫ್ತು ಆಧಾರಿತ ಘಟಕಗಳು ಕೈಗಾರಿಕಾ ಟೌನ್ ಗಳಲ್ಲಿ ನಿಯಂತ್ರಣಾವಕಾಶ ಹೊಂದಿರುವ ಉತ್ಪಾದನಾ ಮತ್ತು ಇತರ ಔಧ್ಯಮಿಕ ಸಂಸ್ಥೆ.

* ರಫ್ತು ಚಟುವಟಿಕೆ ಒಳಗೊಂಡ ಎಲ್ಲಾ ಕೈಗಾರಿಕೆಗಳು ಶೇ 50ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಣೆ ಮಾಡಲು ಅನುಮತಿ ನೀಡಲಾಗಿದೆ.

* ಬಿಬಿಎಂಪಿ ವ್ಯಾಪ್ತಿಯೊಳಗೆ ಹೊರಗಿನಿಂದ ಕಾರ್ಮಿಕರನ್ನು ಕರೆತರದೆ ಸ್ಥಳೀಯವಾಗಿಯೇ ಇರುವ ಕಾರ್ಮಿಕರನ್ನು ಬಳಸಿಕೊಂಡು ನಿರ್ಮಾಣ ಯೋಜನೆಗಳ ಕಾಮಗಾರಿ ಮುಂದುವರಿಕೆ.

English summary
Karnataka government guidelines for one week long lock down in Bengaluru Urban and Rural district. Here are directions for industry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X