• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು ಲಾಕ್ ಡೌನ್; ಅಂಗಡಿಗಳಿಗೆ ಮಾರ್ಗಸೂಚಿಗಳು

|

ಬೆಂಗಳೂರು, ಜುಲೈ 13 : ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಂಗಳವಾರದಿಂದ ಲಾಕ್ ಡೌನ್ ಜಾರಿಗೆ ಬರಲಿದೆ. ಕರ್ನಾಟಕ ಸರ್ಕಾರ ಲಾಕ್ ಡೌನ್ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

   Rameshwaram - A Spiritual Journey To The Divine Site Of Tamil Nadu | Oneindia Kannada

   ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

   ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಎರಡೂ ಜಿಲ್ಲೆಗಳಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಸೋಮವಾರವೂ ಬೆಂಗಳೂರು ನಗರದಲ್ಲಿ 1315 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ.

   ಬೆಂಗಳೂರು ಲಾಕ್ ಡೌನ್; ಮಾರ್ಗಸೂಚಿ ಪ್ರಕಟ

   ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಜುಲೈ 14ರ ಮಂಗಳವಾರ ರಾತ್ರಿ 8 ಗಂಟೆಯಿಂದ ಜುಲೈ 22ರ ಸಂಜೆ 5 ಗಂಟೆ ತನಕ ಲಾಕ್ ಡೌನ್ ಜಾರಿಯಲ್ಲಿರುತ್ತದೆ ಎಂದು ಸರ್ಕಾರ ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ.

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ಬೆಂಗಳೂರು ಲಾಕ್ ಡೌನ್; ಯಡಿಯೂರಪ್ಪ ಮಹತ್ವದ ಟ್ವೀಟ್

   ಅಂಗಡಿಗಳಿಗೆ ನೀಡಿರುವ ವಿನಾಯಿತಿಗಳ ವಿವರ ಇಲ್ಲಿದೆ...

   ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?

   * ಪಡಿತರ ಅಂಗಡಿಗಳು, ದಿನಸಿ ಅಂಗಡಿಗಳು ಸೇರಿದಂತೆ ಆಹಾರ, ಧವಸ ಧಾನ್ಯ, ಹಣ್ಣು ಹಾಗೂ ತರಕಾರಿ, ಹೈನು, ಕ್ಷೀರ, ಮಾಂಸ, ಮೀನು, ಪ್ರಾಣಿಯ ಆಹಾರ, ಪ್ರತ್ಯೇಕ ಲಿಕ್ಕರ್ (ಪಾರ್ಸೆಲ್ ಮಾತ್ರ) ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯ ತನಕ ಬಾಗಿಲು ತೆರೆಯಬಹುದು.

   ಚಿತ್ರಗಳು; ಬೆಂಗಳೂರಲ್ಲಿ ಲಾಕ್ ಡೌನ್, ನಗರ ಬಿಟ್ಟು ಹೊರಟ ಜನ

   * ಜನರು ಮನೆಯಿಂದ ಹೊರ ಬರುವುದನ್ನು ಕಡಿಮೆ ಮಾಡಲು ಅತ್ಯಾವಶ್ಯಕ ವಸ್ತುಗಳನ್ನು ಮನೆಗಳಿಗೆ ತಲುಪಿಸುವ ವ್ಯವಸ್ಥೆಗೆ ಪ್ರೋತ್ಸಾಹ ನೀಡಬೇಕು.

   * ಸ್ಥಳೀಯ ಮಳಿಗೆ, ಬೃಹತ್ ಇಟ್ಟಿಗೆ ಮತ್ತು ಗಾರೆ ಅಥವ ಇ-ಕಾಮರ್ಸ್ ಕಂಪನಿಗಳ ಮುಖಾಂತರ ಅತ್ಯಾವಶ್ಯಕ ವಸ್ತುಗಳ ಉತ್ಪಾದನೆ, ಸಗಟು ಅಥವ ಚಿಲ್ಲರೆ ಮಾರಾಟ ಯಾವುದೇ ಆಗಿರಲಿ ಕೋವಿಡ್ - 19 ನಿರ್ವಹಣೆಗಾಗಿ ಇರುವ ರಾಷ್ಟ್ರೀಯ ನಿರ್ದೇಶನಗಳನ್ನು ಪಾಲಿಸಬೇಕು.

   * ಎಲ್ಲಾ ಆಹಾರ ಸಂಸ್ಕರಣೆ ಮತ್ತು ಸಂಬಂಧಿತ ಕೈಗಾರಿಕೆಗಳು, ಬ್ಯಾಂಕು, ವಿಮಾ ಕಚೇರಿ, ಎಟಿಎಂ, ಪತ್ರಿಕಾ ಮತ್ತು ವಿದ್ಯುನ್ಮಾನ ಮಾಧ್ಯಮಗಳಿಗೆ ವಿನಾಯಿತಿ. ಐಟಿ ಮತ್ತು ಬಿಟಿ ಕಂಪನಿಗಳು ಮನೆಯಿಂದಲೇ ಕೆಲಸ ಮಾಡಲು ಪ್ರೋತ್ಸಾಹ ನೀಡಬೇಕು.

   * ಇ-ಕಾಮರ್ಸ್ ಮೂಲಕ ಆಹಾರ, ಔಷಧಿ, ಔಷಧ ವಸ್ತುಗಳು ವೈದ್ಯಕೀಯ ಸಲಕರಣೆಗಳು ಸರಬರಾಜು ಮಾಡಬಹುದು.

   * ಖಾಸಗಿ ಭದ್ರತಾ ಸೇವೆಗಳು ಸಾಧ್ಯವಾದರೆ ಇತರೆ ಎಲ್ಲಾ ಸಂಸ್ಥೆಗಳು ಮನೆಯಿಂದಲೇ ಕಾರ್ಯ ನಿರ್ವಹಣೆ ಮಾಡಲು ಪ್ರೋತ್ಸಾಹಿಸಬೇಕು.

   English summary
   Karnataka government guidelines for one week long lock down in Bengaluru Urban and Rural district. Here are directions for grocery shops.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X