ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಲಾಕ್ ಡೌನ್; ಬಿಎಂಟಿಸಿಯ ಸೂಚನೆಗಳು

|
Google Oneindia Kannada News

ಬೆಂಗಳೂರು, ಜುಲೈ 14 : ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಇಂದು ರಾತ್ರಿ 8 ಗಂಟೆಯಿಂದ ಒಂದು ವಾರದ ಲಾಕ್ ಡೌನ್ ಜಾರಿಗೆ ಬರಲಿದೆ. ಈ ಹಿನ್ನಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಗರದ ಜನರಿಗೆ ಹಲವು ಸೂಚನೆಗಳನ್ನು ನೀಡಿದೆ.

ಲಾಕ್ ಡೌನ್ ಘೋಷಣೆ ಮಾಡಿರುವ ಹಿನ್ನಲೆಯಲ್ಲಿ 15/7/2020 ರಿಂದ 21/7/2020ರ ತನಕ ಬಿಎಂಟಿಸಿ ಬಸ್‌ಗಳಲ್ಲಿ ಸಾರ್ವಜನಿಕರ ಪ್ರಯಾಣವನ್ನು ನಿರ್ಬಂಧಿಸಲಾಗಿದೆ. ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಅಗತ್ಯ ಸಾರಿಗೆಗಳನ್ನು ಒದಗಿಸಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

ಬೆಂಗಳೂರು ಲಾಕ್ ಡೌನ್; ಮಾರ್ಗಸೂಚಿ ಪ್ರಕಟ ಬೆಂಗಳೂರು ಲಾಕ್ ಡೌನ್; ಮಾರ್ಗಸೂಚಿ ಪ್ರಕಟ

ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್ ವಲಯಗಳನ್ನು ಹೊರತುಪಡಿಸಿ 134 ಅಗತ್ಯ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ. ಈ ಬಸ್‌ಗಳು ಬೆಳಗ್ಗೆ 7 ಗಂಟೆಯಿಂದ 19 ಗಂಟೆಯ ತನಕ ಸಂಚಾರ ನಡೆಸಲಿವೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರು ಲಾಕ್ ಡೌನ್; ಅಂಗಡಿಗಳಿಗೆ ಮಾರ್ಗಸೂಚಿಗಳು ಬೆಂಗಳೂರು ಲಾಕ್ ಡೌನ್; ಅಂಗಡಿಗಳಿಗೆ ಮಾರ್ಗಸೂಚಿಗಳು

ಬಸ್‌ನಲ್ಲಿ ಸಂಚಾರ ನಡೆಸುವ ಜನರು ಮೂಗು ಮತ್ತು ಬಾಯಿ ಮುಚ್ಚುವಂತೆ ಬಟ್ಟೆ ಅಥವ ಮಾಸ್ಕ್ ಧರಿಸಬೇಕು. ಮಾಸ್ಕ್ ಧರಿಸದ ವ್ಯಕ್ತಿಗಳು ಬಸ್‌ಗಳಲ್ಲಿ ಸಂಚಾರ ನಡೆಸಲು ಅವಕಾಶ ನೀಡಬಾರದು ಎಂದು ಬಿಎಂಟಿಸಿ ತಿಳಿಸಿದೆ.

ಬೆಂಗಳೂರು ಲಾಕ್ ಡೌನ್; ಯಡಿಯೂರಪ್ಪ ಮಹತ್ವದ ಟ್ವೀಟ್ ಬೆಂಗಳೂರು ಲಾಕ್ ಡೌನ್; ಯಡಿಯೂರಪ್ಪ ಮಹತ್ವದ ಟ್ವೀಟ್

ಯಾರು ಸಂಚಾರ ನಡೆಸಬಹುದು?

ಯಾರು ಸಂಚಾರ ನಡೆಸಬಹುದು?

* ಬಿಎಂಟಿಸಿ ಬಸ್‌ಗಳಲ್ಲಿ ಕೇಂದ್ರ/ರಾಜ್ಯ ಸರ್ಕಾರ/ಅರೆ ಸರ್ಕಾರದ ಎಲ್ಲಾ ಇಲಾಖೆಗಳ ಅಧಿಕಾರಿ/ನೌಕರರು. ಸಾರ್ವಜನಿಕ ಉದ್ದಿಮೆ/ನಿಗಮ/ಮಂಡಳಿ ಹಾಗೂ ನ್ಯಾಯಾಲಯಗಳಲ್ಲಿ ಕಾರ್ಯ ನಿರ್ವಹಣೆ ಮಾಡುವ ಅಧಿಕಾರಿ/ನೌಕರರು ಸಂಚಾರ ನಡೆಸಬಹುದು.

* ಪೊಲೀಸ್, ಗೃಹ ರಕ್ಷಕದಳ, ನಾಗರಿಕ ರಕ್ಷಣೆ, ಅರಣ್ಯ ಇಲಾಖೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಭಂದಿಗಳು ಪ್ರಯಾಣ ಬೆಳೆಸಬಹುದು.

* ರೈಲು/ವಿಮಾನಯಾನ ಮಾಡುವ ಪ್ರಯಾಣಿಕರು ರೈಲು/ವಿಮಾನ ಟಿಕೆಟ್ ಮತ್ತು ಗುರುತಿನ ಚೀಟಿಯೊಂದಿಗೆ ಪ್ರಯಾಣಿಸಲು ಅನುಮತಿ ನೀಡಲಾಗಿದೆ.

ಟಿಕೆಟ್ ವ್ಯವಸ್ಥೆ ಹೇಗೆ?

ಟಿಕೆಟ್ ವ್ಯವಸ್ಥೆ ಹೇಗೆ?

* ಪ್ರಯಾಣಿಕರು ಮಾಸಿಕ ಪಾಸು/ ವಾರದ ಪಾಸು/ ದೈನಂದಿನ ಪಾಸುಗಳನ್ನು ಪಡೆದು ಅಗತ್ಯ ಸಾರಿಗೆಗಳಲ್ಲಿ ಪ್ರಯಾಣಿಸಲು ಅವಕಾಶವನ್ನು ನೀಡಲಾಗಿದೆ.

* ಮೇಲ್ಕಂಡ ಸಿಬ್ಬಂದಿಗಳು ಜುಲೈ 2020 ಮಾಹೆಯ ಮಾಸಿಕ ಪಾಸನ್ನು ಹೊಂದಿದ್ದಲ್ಲಿ ಪ್ರಯಾಣಿಸಲು ಮಾನ್ಯ ಮಾಡಲಾಗುತ್ತದೆ.

* ರೂ. 300 ಮುಖ ಬೆಲೆಯ ವಾರದ ಪಾಸುಗಳನ್ನು ಮತ್ತು ರೂ. 70ರ ದಿನದ ಪಾಸುಗಳನ್ನು ನಿರ್ವಾಹಕರ ಮೂಲಕ ಬಸ್ಸುಗಳಲ್ಲಿ ವಿತರಣೆ ಮಾಡಲಾಗುತ್ತದೆ.

ಚಾಲಕ/ನಿರ್ವಾಹಕರಿಗೆ ಸೂಚನೆ

ಚಾಲಕ/ನಿರ್ವಾಹಕರಿಗೆ ಸೂಚನೆ

* ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.

* ಚಾಲನಾ ಸಿಬ್ಭಂದಿಗಳು ಸ್ಯಾನಿಟೈಸರ್ ಬಳಸಿ ಶುಚಿತ್ವವನ್ನು ಕಾಪಾಡುವುದು.

* ಪ್ರಯಾಣಿಕರನ್ನು ಬಸ್ಸಿನಲ್ಲಿ ಆಸನಗಳು ಖಾಲಿ ಇದ್ದಾಗ ಮಾತ್ರ ಪ್ರಯಾಣಿಸಲು ಅನುಮತಿಸುವುದು.

* ನಿಗದಿತ ನಿಲುಗಡೆಗಳಲ್ಲಿ ಮಾತ್ರ ಪ್ರಯಾಣಿಕರನ್ನು ಹತ್ತಿಸುವುದು/ಇಳಿಸುವುದು

* ಪ್ರಯಾಣಿಕರ ಗುರುತಿನ ಚೀಟಿಯನ್ನು ಪರಿಶೀಲಿಸುವುದು

ಪ್ರಯಾಣಿಕರಿಗೆ ಸೂಚನೆಗಳು

ಪ್ರಯಾಣಿಕರಿಗೆ ಸೂಚನೆಗಳು

* ಪ್ರಯಾಣಿಕರು ಮೂಗು ಮತ್ತು ಬಾಯಿ ಮುಚ್ಚಿಕೊಳ್ಳುವಂತೆ ಬಟ್ಟೆ ಅಥವ ಮುಖಗವಸು ಧರಿಸಬೇಕು.

* ಮಾಸ್ಕ್ ಧರಿಸದ ಸಿಬ್ಬಂದಿಗೆ ಬಸ್‌ಗಳಲ್ಲಿ ಪ್ರಯಾಣ ಮಾಡಲು ಅವಕಾಶ ನೀಡುವುದಿಲ್ಲ.

* ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸರತಿ ಸಾಲಿನಲ್ಲಿ ಬಸ್ಸನ್ನು ಹತ್ತುವುದು/ಇಳಿಯುವುದು

* ಪ್ರಯಾಣಿಕರ ಆಸನಗಳು ಭರ್ತಿಯಾಗಿದ್ದಲ್ಲಿ, ಬಸ್ಸನ್ನು ಹತ್ತಬಾರದು, ಮುಂದಿನ ಬಸ್‌ಗಾಗಿ ಕಾಯಬೇಕು.

* ಜ್ವರ ಹಾಗೂ ಇತರೆ ಖಾಯಿಲೆಗಳಿಂದ ಬಳಲುತ್ತಿರುವ ಪ್ರಯಾಣಿಕರು ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸಬಾರದು.

English summary
Karnataka government announced one week long lock down in Bengaluru Urban and Rural district from July 14 night. Here are directions for people form BMTC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X