ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ KIA ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಏರ್ ಪೋರ್ಟ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 19: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಮಾನ ನಿಲ್ದಾಣ ಎಂಬ ಕೀರ್ತಿಗೆ ಪಾತ್ರವಾಗಿದೆ. 2018ರಲ್ಲಿ ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್ ಪೋರ್ಟ್ ನ ಮೂಲಕ 3.2 ಕೋಟಿ ಪ್ರಯಾಣಿಕರು ಸಂಚರಿಸಿದ್ದಾರೆ. ಏರ್ ಪೋರ್ಟ್ ಕೌನ್ಸಿಲ್ ಇಂಟರ್ ನ್ಯಾಷನಲ್ ಪ್ರಕಟಿಸಿರುವ ಈಚಿನ ವರ್ಲ್ದ್ ಟ್ರಾಫಿಕ್ ವರದಿಯಲ್ಲಿ ಈ ಅಂಶ ಬಹಿರಂಗವಾಗಿದೆ.

ಪ್ರಯಾಣಿಕರ ದಟ್ಟಣೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್ ಪೋರ್ಟ್ ನಲ್ಲಿ 29% ಪ್ರಗತಿ ದಾಖಲಾಗಿದೆ. ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಹೊರತುಪಡಿಸಿದರೆ ಹೈದರಾಬಾದ್ ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಏರ್ ಪೋರ್ಟ್ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಐದು ವಿಮಾನ ನಿಲ್ದಾಣದಲ್ಲಿ ಒಂದಾಗಿದೆ.

ಕೆಂಪೇಗೌಡ ಏರ್‌ಪೋರ್ಟ್ ಬಳಿ ರೈಲ್ವೆ ಹಾಲ್ಟ್ ಸ್ಟೇಷನ್, ಉಪಯೋಗವೇನು?ಕೆಂಪೇಗೌಡ ಏರ್‌ಪೋರ್ಟ್ ಬಳಿ ರೈಲ್ವೆ ಹಾಲ್ಟ್ ಸ್ಟೇಷನ್, ಉಪಯೋಗವೇನು?

ಹೈದರಾಬಾದ್ ಮೂರನೇ ಸ್ಥಾನದಲ್ಲಿದೆ. ಅದಕ್ಕೂ ಮುನ್ನ ಟರ್ಕಿ ದೇಶದ ಅಂತಾಲಯ ಏರ್ ಪೋರ್ಟ್ ಇದೆ. ರಷ್ಯನ್ ಫೆಡರೇಷನ್ ನ ನುಕೋವೋ ವಿಮಾನ ನಿಲ್ದಾಣದ ಮುಂಚಿನ ಸ್ಥಾನದಲ್ಲಿ ಹೈದರಾಬಾದ್ ಇದೆ. ವರದಿ ಪ್ರಕಾರ, ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಏರ್ ಪೋರ್ಟ್ ಗಳಲ್ಲಿ ಏಷ್ಯಾ ಪೆಸಿಫಿಕ್ ಪ್ರಾದೇಶಿಕ ಭಾಗದ್ದೇ ಹೆಚ್ಚಿವೆ.

Bengaluru KIA In worlds Fastest Growing Airport List

2018ರಲ್ಲಿ 30 ವೇಗವಾಗಿ ಬೆಳೆಯುತ್ತಿರುವ ಏರ್ ಪೋರ್ಟ್ ನಲ್ಲಿ 12 ಏರ್ ಪೋರ್ಟ್ ಚೀನಾ ಅಥವಾ ಭಾರತದಲ್ಲಿ ಇವೆ. ಒಟ್ಟು ಪ್ರಯಾಣಿಕರು ಹಾಗೂ ವಿಮಾನಗಳ ಹಾರಾಟ ಸಂಖ್ಯೆಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಟಾಪ್ 20 ಪಟ್ಟಿಯಲ್ಲಿ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣವು ಪ್ರಯಾಣಿಕರ ಸಂಖ್ಯೆಯಲ್ಲಿ 12ನೇ ಸ್ಥಾನದಲ್ಲಿದೆ (ಹತ್ತಿರ ಹತ್ತಿರ 7 ಕೋಟಿ ಪ್ರಯಾಣಿಕರು). ಇದು 2018ರ ಲೆಕ್ಕ.

ಏರ್‌ಪೋರ್ಟ್‌ ರಸ್ತೆ ಇನ್ಮುಂದೆ ಪ್ಲಾಸ್ಟಿಕ್ ರಸ್ತೆ, ಹೊಸತೇನಿದೆ?ಏರ್‌ಪೋರ್ಟ್‌ ರಸ್ತೆ ಇನ್ಮುಂದೆ ಪ್ಲಾಸ್ಟಿಕ್ ರಸ್ತೆ, ಹೊಸತೇನಿದೆ?

ಈ ವಿಮಾನ ನಿಲ್ದಾಣವು ಪ್ರಯಾಣಿಕರ ಲೆಕ್ಕದಲ್ಲಿ 2017ರಲ್ಲಿ 16ನೇ ಸ್ಥಾನದಲ್ಲಿ ಇತ್ತು. 2018ರಲ್ಲಿ ವಿಮಾನ ಹಾರಾಟ ಸಂಖ್ಯೆಯಲ್ಲಿ 13ನೇ ಸ್ಥಾನದಲ್ಲಿ ಇತ್ತು (4.8 ಲಕ್ಷ). 2017ರಲ್ಲಿ 21ನೇ ಸ್ಥಾನದಲ್ಲಿ ಇತ್ತು.

English summary
Kempegowda International Airport (KIA), Bengaluru got place in world's fastest growing airport list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X