ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಿಂದ ಈ 14 ನಗರಗಳಿಗೆ ಅಂತರಾಷ್ಟ್ರೀಯ ವಿಮಾನ ಸೇವೆ ಆರಂಭ

|
Google Oneindia Kannada News

ಬೆಂಗಳೂರು, ಆ 19: ಕೊರೊನಾದಿಂದಾಗಿ ಸ್ಥಗಿತಗೊಂಡಿದ್ದ ಅಂತರಾಷ್ಟ್ರೀಯ ವಿಮಾನಯಾನ ಸೇವೆಗಳಿಗೆ ವಿಧಿಸಲಾಗಿದ್ದ ಷರತ್ತುಗಳು ಒಂದೊಂದಾಗಿ ಸಡಿಲಗೊಳ್ಳುತ್ತಿದೆ. ವಿದೇಶಗಳಲ್ಲಿ ಸಿಲುಕಿರುವವರನ್ನು ಸ್ವದೇಶಕ್ಕೆ ಕರೆತರಲು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸೇವೆ ಆರಂಭಿಸಲಿದೆ.

Recommended Video

ಪ್ಲಾಸ್ಮಾ ದಾನ ನೀಡಿ ಮಾದರಿಯಾದ ಶಾಸಕ ಡಾ.ರಂಗನಾಥ್ | Oneindia Kannada

ನಗರದಿಂದ ವಿಶ್ವದ ವಿವಿಧ ಹದಿನಾಲ್ಕು ನಗರಗಳಿಗೆ ಸೇವೆ ಆರಂಭಿಸಲು ನಿರ್ಧರಿಸಲಾಗಿದೆ. ಅದರಂತೆಯೇ, ಹದಿಮೂರು ವಿಮಾನಯಾನ ಸಂಸ್ಥೆಗಳು ಕಾರ್ಯಾಚರಣೆ ನಡೆಸಲಿದೆ. ವಂದೇ ಮಾತರಂ ಮಿಷನ್ ಮತ್ತು ಏರ್ ಬಬಲ್ ಯೋಜನೆಯಡಿ ಪ್ರಯಾಣಿಕರನ್ನು ಸ್ವದೇಶಕ್ಕೆ ಕರೆತರಲಾಗುವುದು ಎಂದು ಬಿಐಎಎಲ್ ಪ್ರಕಟಣೆ ಹೊರಡಿಸಿದೆ.

ಏಪ್ರಿಲ್‌ನಿಂದ ಜುಲೈವರೆಗೆ ಬೆಂಗಳೂರು ಏರ್‌ಪೋರ್ಟ್‌ಗೆ ಭೇಟಿಕೊಟ್ಟ ಪ್ರಯಾಣಿಕರೆಷ್ಟು?ಏಪ್ರಿಲ್‌ನಿಂದ ಜುಲೈವರೆಗೆ ಬೆಂಗಳೂರು ಏರ್‌ಪೋರ್ಟ್‌ಗೆ ಭೇಟಿಕೊಟ್ಟ ಪ್ರಯಾಣಿಕರೆಷ್ಟು?

ಇದುವರೆಗೆ, ಭಾರತದಿಂದ 174 ವಿಮಾನಗಳಲ್ಲಿ 14,857 ಪ್ರಯಾಣಿಕರನ್ನು ವಾಪಸ್ ಕಳುಹಿಸಲಾಗಿದ್ದು, 186 ವಿಮಾನಗಳು ವಂದೇ ಭಾರತ್ ಮಿಷನ್ ಅಡಿಯಲ್ಲಿ ಹಾರಾಟ ನಡೆಸಿದ್ದು, 24,039 ಸಾವಿರ ಮಂದಿ ಭಾರತಕ್ಕೆ ಬಂದಿದ್ದಾರೆ.

ಕರೊನವೈರಸ್ ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಮೇ 7ರಂದು ಸರ್ಕಾರ ವಂದೇ ಭಾರತ್ ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಐದು ಲಕ್ಷಕ್ಕೂ ಹೆಚ್ಚು ಭಾರತೀಯರು ಈವರೆಗೆ 137 ದೇಶಗಳಿಂದ ಮನೆಗೆ ಮರಳಿದ್ದಾರೆ. ಕಾರ್ಯಾಚರಣೆಯ ಹದಿನಾಲ್ಕು ನಗರಗಳು ಮತ್ತು ಏರ್ಲೈನ್ಸ್ ಮಾಹಿತಿ ಈ ರೀತಿಯಿದೆ:

ಏರ್ ಇಂಡಿಯಾ : ಅಬುಧಾಬಿ, ಆಮಸ್ಟರ್ ಡ್ಯಾಂ, ದುಬೈ

ಏರ್ ಇಂಡಿಯಾ : ಅಬುಧಾಬಿ, ಆಮಸ್ಟರ್ ಡ್ಯಾಂ, ದುಬೈ

ಬೆಂಗಳೂರು - ಅಬುಧಾಬಿ (ಏತಿಹದ್ ಏರ್‌ವೇಸ್, ಗೋ ಏರ್, ಏರ್ ಇಂಡಿಯಾ)
ಬೆಂಗಳೂರು - ಆಮಸ್ಟರ್ ಡ್ಯಾಂ (ಕೆಎಲ್ಎಮ್ ರಾಯಲ್ ಡಚ್)
ಬೆಂಗಳೂರು - ದುಬೈ (ಇಂಡಿಗೋ, ಗೋ ಏರ್, ಎಮಿರೇಟ್ಸ್, ಏರ್ ಇಂಡಿಯಾ, ವಿಸ್ತಾರ)

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ

ಇಂಡಿಗೋ: ದೋಹಾ, ಫ್ರಾಂಕ್ ಫರ್ಟ್, ಕುವೈತ್

ಇಂಡಿಗೋ: ದೋಹಾ, ಫ್ರಾಂಕ್ ಫರ್ಟ್, ಕುವೈತ್

ಬೆಂಗಳೂರು - ದೋಹಾ (ಇಂಡಿಗೋ, ಕತಾರ್ ಏರ್ವೇಸ್)
ಬೆಂಗಳೂರು - ಫ್ರಾಂಕ್ ಫರ್ಟ್ (ಲುಫ್ತಾನ್ಸ)
ಬೆಂಗಳೂರು - ಕುವೈತ್ (ಏರ್ ಇಂಡಿಯಾ, ಇಂಡಿಗೋ)

ಬ್ರಿಟಿಷ್ ಏರ್ವೇಸ್: ಕೌಲಾಲಂಪುರ, ಲಂಡನ್, ಮಸ್ಕತ್

ಬ್ರಿಟಿಷ್ ಏರ್ವೇಸ್: ಕೌಲಾಲಂಪುರ, ಲಂಡನ್, ಮಸ್ಕತ್

ಬೆಂಗಳೂರು - ಕೌಲಾಲಂಪುರ (ಏರ್ ಇಂಡಿಯಾ, ಮಲೇಶ್ಯನ್ ಏರ್ಲೈನ್ಸ್)
ಬೆಂಗಳೂರು - ಲಂಡನ್ (ಏರ್ ಇಂಡಿಯಾ, ಬ್ರಿಟಿಷ್ ಏರ್ವೇಸ್)
ಬೆಂಗಳೂರು - ಮಸ್ಕತ್ (ಏರ್ ಇಂಡಿಯಾ)
ಬೆಂಗಳೂರು - ನರಿತಾ (ಏರ್ ಇಂಡಿಯಾ)

ಕೆಎಲ್ಎಮ್: ಪ್ಯಾರಿಸ್, ರಿಯಾದ್ , ಸಿಂಗಾಪುರ, ಸ್ಯಾನ್ ಫ್ರಾನ್ಸಿಸ್ಕೋ

ಕೆಎಲ್ಎಮ್: ಪ್ಯಾರಿಸ್, ರಿಯಾದ್ , ಸಿಂಗಾಪುರ, ಸ್ಯಾನ್ ಫ್ರಾನ್ಸಿಸ್ಕೋ

ಬೆಂಗಳೂರು - ಪ್ಯಾರಿಸ್ ( ಕೆಎಲ್ಎಮ್ ರಾಯಲ್ ಡಚ್)
ಬೆಂಗಳೂರು - ರಿಯಾದ್ (ಇಂಡಿಗೋ)
ಬೆಂಗಳೂರು - ಸಿಂಗಾಪುರ (ಏರ್ ಇಂಡಿಯಾ)
ಬೆಂಗಳೂರು - ಸ್ಯಾನ್ ಫ್ರಾನ್ಸಿಸ್ಕೋ (ಏರ್ ಇಂಡಿಯಾ via ಕೊಚ್ಚಿನ್)

English summary
Bengaluru Kempe Gowda Airport Reconnects Karnataka Capital To 14 International Destinations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X