ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಳೆಯಿಂದ ಬೆಂಗಳೂರಿನ ಪರಂಪರೆ ಸಾರುವ 'ಕರಗ' ಆರಂಭ

|
Google Oneindia Kannada News

ಬೆಂಗಳೂರು, ಏ.10: ಬೆಂಗಳೂರು ಕರಗ ಮಹೋತ್ಸವ ನಾಳೆ(ಏ.10)ರಿಂದ ಆರಂಭಗೊಳ್ಳಲಿದೆ.

ಬೆಂಗಳೂರಿನ ಪಾರಂಪರಿಕ ಮಹತ್ವವನ್ನು ಸಾರುವ ಮಹೋತ್ಸವ ಇದಾಗಿದೆ. ಏ.11ರಿಂದ 21ರವರೆಗೆ ಹನ್ನೊಂದು ದಿನಗಳ ಕಾಲ ನಡೆಯಲಿದೆ.

ಬೆಂಗಳೂರು ಕರಗ ಎಷ್ಟೊಂದು ಸುಂದರ, ಮಲ್ಲಿಗೆ ಹೂಗಳ ಉತ್ಸವ ಬೆಂಗಳೂರು ಕರಗ ಎಷ್ಟೊಂದು ಸುಂದರ, ಮಲ್ಲಿಗೆ ಹೂಗಳ ಉತ್ಸವ

ಬೆಳಗ್ಗೆ ಕಬ್ಬನ್‌ ಪಾರ್ಕ್‌ನ ಕರಗದ ಕುಂಟೆಯಲ್ಲಿ ದೇವಿಗೆ ಗಂಗೆ ಪೂಜೆ ಮಾಡಿ ಅಲ್ಲಿಂದ ಹಸಿಕರಗವನ್ನು ಮಂಟಪಕ್ಕೆ ಕರೆತರಲಾಗುತ್ತದೆ.ಕರಗ ಮಹೋತ್ಸವ ಚೈತ್ರ ಶುಕ್ರ ಸಪ್ತಮಿಯಿಂದ ಬಹುಳ ಬಿದಿಗೆಯವರೆಗೆ ನಡೆಯಲಿದೆ.

Bengaluru Karaga starts from tomorrow

ರಥೋತ್ಸವ ಹಾಗೂ ಧ್ವಜಾರೋಹಣದೊಂದಿಗೆ ಚಾಲನೆ ಪಡೆಯುತ್ತದೆ. ದ್ವಾದಶಿಯಂದು ದೀಪಗಳ ಆರತಿ, ತ್ರಯೋದಶಿಯಂದು ಹಸಿ ಕರಗ, ಚತುರ್ದಶಿಯಂದು ಪೊಂಗಲ್‌ ಸೇವೆ ನಡೆಯಲಿದ್ದು, ಚೈತ್ರ ಪೂರ್ಣಿಮೆಯಂದು ಕರಗಶಕ್ತ್ಯೋತ್ಸವ ಮತ್ತು ಶ್ರೀ ಧರ್ಮರಾಯಸ್ವಾಮಿ ಮಹಾ ರಥೋತ್ಸವ, ಪಾಡ್ಯಮಿಯಂದು ಶಕ್ತಿಸ್ಥಳ ಏಳು ಸುತ್ತಿನ ಕೋಟೆ ದೇವಸ್ಥಾನದಲ್ಲಿ ಪುರಾಣ ಪ್ರವಚನ ನಡೆಯಲಿದೆ.

ಮಧ್ಯರಾತ್ರಿ 12 ಗಂಟೆ ಸಮಯದಲ್ಲಿ ಧರ್ಮರಾಯಸ್ವಾಮಿ ದೇವಾಲಯದಿಂದ ಪ್ರಾರಂಭಗೊಂಡು ಹಲಸೂರು ಪೇಟೆಯ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿ, ನಗರ್ತಪೇಟೆ ಮಾರ್ಗವಾಗಿ ಕಬ್ಬನ್‌ ಪೇಟೆ, ಗಾಣಿಗರ ಪೇಟೆ, ಅವೆನ್ಯೂ ರಸ್ತೆ, ದೊಡ್ಡಪೇಟೆ, ಶ್ರೀಕೃಷ್ಣರಾಜ ಮಾರುಕಟ್ಟೆ ಮೂಲಕ ಅಕ್ಕಿಪೇಟೆ, ಅರಳೇಪೇಟೆ, ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರಪೇಟೆ, ಕಬ್ಬನ್‌ಪೇಟೆ, ಸುಣ್ಣಕಲ್‌ಪೇಟೆಗಳಲ್ಲಿ ಕರಗ ಸಂಚರಿಸಲಿದೆ.

English summary
Bengaluru historical Karaga is going to start from Tomorrow(April 10 2019) continue till April 21 this year. All preparations are undergoing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X