ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏಪ್ರಿಲ್ 11ರಿಂದ ಬೆಂಗಳೂರು ಕರಗ ಉತ್ಸವ, ಭರದ ಸಿದ್ಧತೆ

|
Google Oneindia Kannada News

ಬೆಂಗಳೂರು, ಮಾರ್ಚ್ 20: ಕರಗದ ಸಂಭ್ರಮಕ್ಕೆ ಇನ್ನೊಂದೇ ತಿಂಗಳು ಬಾಕಿ ಇದೆ. ಚಂದ್ರಮಾನ ಯುಗಾದಿ, ಶ್ರೀರಾಮ ನವಮಿಗಳ ಬೆನ್ನಲೇ ಮಲ್ಲಿಗೆಯ ಕಂಪು ಬೀರುವ ಕರಗ ಉತ್ಸವ ಆರಂಭವಾಗಲಿದೆ.

ಏಪ್ರಿಲ್ 11ರಿಂದ 21ರವರೆಗೆ ಕರಗ ನಡೆಯಲಿದೆ. ದೇವಾಲಯಕ್ಕೆ ಸುಣ್ಣಬಣ್ಣ ಬಳಿಯುವುದು ಸೇರಿದಂತೆ ಆಚರಣೆಗೆ ಪೂರಕವಾದ ಎಲ್ಲಾ ಸಿದ್ಧತೆಗಳು ಭರದಿಂದ ಸಾಗಿದೆ.

ಬೆಂಗಳೂರು ಕರಗ ಎಷ್ಟೊಂದು ಸುಂದರ, ಮಲ್ಲಿಗೆ ಹೂಗಳ ಉತ್ಸವಬೆಂಗಳೂರು ಕರಗ ಎಷ್ಟೊಂದು ಸುಂದರ, ಮಲ್ಲಿಗೆ ಹೂಗಳ ಉತ್ಸವ

ಕರಗ ಉತ್ಸವದ ಕೇಂದ್ರ ಬಿಂದು ಕರಗ ಶಕ್ತ್ಯೋತ್ಸವ ಹಾಗೂ ಶ್ರೀ ಧರ್ಮರಾಯಸ್ವಾಮಿ ರಥೋತ್ಸವ ಏ.19ರಂದು ಧರ್ಮ ರಾಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ, ಮಹಾಮಂಗಳಾರತಿ ನಡೆಯಲಿದೆ.

Bengaluru Karaga 2019 will be start from April 11

ಮಧ್ಯರಾತ್ರಿ 12ರ ವೇಳೆಗೆ ಧರ್ಮರಾಯಸ್ವಾಮಿ ದೇವಾಲಯದಿಂದ ಹೊರಡುವ ಕರಗ ಹಳೆ ಬೆಂಗಳೂರಿನ ಪೇಟೆ ರಸ್ತೆಗಳಲ್ಲಿ ಸಂಚರಿಸಿ, ಕುಲಪುರೋಹಿತ ಮನೆಯಲ್ಲಿಪೂಜೆ ಸ್ವೀಕರಿಸಿ, ಸೂರ್ಯೋದಯದ ವೇಳೆಗೆ ದೇವಾಲಯ ಸೇರಲಿದೆ.

ಕರಗ ಮಹೋತ್ಸವ 11 ದಿನಗಳ ಧಾರ್ಮಿಕ ಆಚರಣೆ, ಚೈತ್ರ ಶುಕ್ರ ಸಪ್ತಮಿಯಿಂದ ಬಹುಳ ಬಿದಿಗೆವರೆಗೆ ನಡೆಯುಲಿರುವ ಉತ್ಸವ , ರಥೋತ್ಸವ ಹಾಗೂ ಧ್ವಜಾರೋಹಣದೊಂದಿಗೆ ಚಾಲನೆ ಪಡೆಯಲಿದೆ. ದ್ವಾದಶಿಯಂದು ಆರತಿ, ತ್ರಯೋದಶಿಯಂದು ಹಸಿ ಕರಗ, ಚತುರ್ದಶಿಯಂದು ಪೊಂಗಲ್ ಸೇವೆ ನಡೆಯಲಿದೆ.

English summary
Bengaluru Karaga is going to start from April 11 continue till april 21 This year . All preparations are undergoing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X