ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರಾಚಿ ಬೇಕರಿ ಮಾಲೀಕರಿಗೆ ಭೂಗತ ಪಾತಕಿ ಹೆಸರಿನಲ್ಲಿ ಬೆದರಿಕೆ ಕರೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 28: ಕರಾಚಿ ಬೇಕರಿಗೆ ಮಾಲೀಕರಿಗೆ ಭೂಗತ ಪಾತಕಿ ಹೆಸರಲ್ಲಿ ಬೆದರಿಕೆ ಕರೆ ಎಂದು ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇತ್ತೀಚೆಗಷ್ಟೇ ಕರಾಚಿ ಬೇಕರಿ ಮೇಲೆ ದಾಳಿ ಮಾಡಿದ್ದ 9 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಪಿ.ಸುಕುಮಾರ್‌ ಅವರಿಗೆ ಇಂಟರ್‌ನೆಟ್‌ ಕರೆ ಬಂದಿತ್ತು. ಅವರು ಕರೆ ಸ್ವೀಕರಿಸಿದ ನಂತರ, 'ನೀನೇನಾ ಕರಾಚಿ ಬೇಕರಿ ಮಾಲೀಕ ?' ಎಂದು ಮಾತನಾಡಿದ ವ್ಯಕ್ತಿ ತನ್ನನ್ನು ಭೂಗತಪಾತಕಿ ವಿಕ್ಕಿ ಶೆಟ್ಟಿ ಎಂದು ಪರಿಚಯಿಸಿಕೊಂಡಿದ್ದ. ಅದಕ್ಕೆ ಉತ್ತರಿಸಿದ ಸುಕುಮಾರ್‌ ನಾನು ಮಾಲೀಕನಲ್ಲ.

ಇಂದಿರಾನಗರದ ಕರಾಚಿ ಬೇಕರಿ ಪ್ರಕರಣ, 9 ಮಂದಿ ಬಂಧನ ಇಂದಿರಾನಗರದ ಕರಾಚಿ ಬೇಕರಿ ಪ್ರಕರಣ, 9 ಮಂದಿ ಬಂಧನ

ಮ್ಯಾನೇಜರ್‌ ಎಂದು ಉತ್ತರಿಸಿದ್ದ. ಏನಾದರೂ ಆಗಿರು ಮೊದಲು ಕರಾಚಿ ಹೆಸರು ಬದಲಾಯಿಸಬೇಕು. ನಿನಗೆ 24 ಗಂಟೆ ಕಾಲಾವಕಾಶ ಕೊಡುತ್ತೇನೆ. ಅಷ್ಟರಲ್ಲಿ ಹೆಸರು ಬದಲಾಯಿಸು, ಇಲ್ಲದಿದ್ದರೆ ಬೇಕರಿ ದ್ವಂಸ ಗೊಳಿಸಿ ಗುಂಡಿನ ದಾಳಿ ನಡೆಯುತ್ತದೆ ಎಂದು ಧಮ್ಕಿ ಹಾಕಿದ್ದಾನೆ.

Bengaluru: Karachi Bakery manager gets bomb threat call

ಭೂಗತಪಾತಕಿ ವಿಕ್ಕಿಶೆಟ್ಟಿ ಹೆಸರಿನಲ್ಲಿ ಬೇಕರಿ ವ್ಯವಸ್ಥಾಪಕ ಪಿ.ಸುಕುಮಾರ್‌ ಅವರಿಗೆ ಕರೆ ಮಾಡಿರುವ ವ್ಯಕ್ತಿ 24 ಗಂಟೆಯಲ್ಲಿ ಕರಾಚಿ ಬೋರ್ಡ್‌ ತೆಗೆಯದಿದ್ದರೆ ಬೇಕರಿ ಧ್ವಂಸ ಮಾಡಿ ಗುಂಡಿನ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದಾನೆ.

ವಿಕ್ಕಿ ಶೆಟ್ಟಿಯ ಧ್ವನಿಯನ್ನು ಖಾತ್ರಿಪಡಿಸುವಂತೆ ಕೋರಿ ಇಂದಿರಾನಗರ ಠಾಣೆ ಪೊಲೀಸರು ಸಿಐಡಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

English summary
The manager of Karachi Bakery's Bengaluru outlet claimed to have received a call threatening to 'blast the store' if the word 'Karachi' was not removed from the name board.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X