ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ನಡ ಕಲಿಸುವ ಗುರು ನಿಮ್ಮ ಮೊಬೈಲ್‌ನಲ್ಲಿ ಬರಲಿದ್ದಾರೆ!

By Vanitha
|
Google Oneindia Kannada News

ಬೆಂಗಳೂರು, ಆಗಸ್ಟ್, 06 : ಪರ ರಾಜ್ಯ, ದೇಶದಿಂದ ಕನ್ನಡ ನಾಡಿಗೆ ಬಂದಾಗ ಕೆಲವರಿಗೆ ಕನ್ನಡ ಭಾಷೆ ಕಲಿಯೋದೇ ತ್ರಾಸದಾಯಕ ವಿಚಾರ..ಕನ್ನಡ ನಾಡಲ್ಲಿದ್ದು, ಕನ್ನಡ ಕಲಿಯೋದಕ್ಕೆ ಆಗ್ತಾ ಇಲ್ವಲ್ಲಾ..ಕನ್ನಡ ಕಲಿಯೋದು ಹೇಗೆ? ಎಂದೆಲ್ಲಾ ಯೋಚಿಸುವವರಿಗೊಂದು ಸಂತಸದ ಸುದ್ದಿ.

ಹೌದು..ನೀವು ಕನ್ನಡ ಭಾಷೆ ಕಲಿಯಲು ಯಾರ ಬಳಿಯೂ ಹೋಗಬೇಕಿಲ್ಲ. ನಿಮ್ಮ ಕೈಯಲ್ಲೊಂದು ಮೊಬೈಲ್ ಇದ್ದರೆ ಸಾಕು. ಕನ್ನಡ ಕಲಿಯೋದು ಸರಳ ಮತ್ತು ಸುಲಭ. ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು ಕನ್ನಡವನ್ನು ಕರಗತ ಮಾಡಿಕೊಳ್ಳಬಹುದು.[ರಾಯಚೂರು : 82ನೇ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ?]

Bengaluru Kannada Development Authority will soon launches App for learning Kannada

ಕನ್ನಡ ಅಭಿವೃದ್ಧಿ ಪ್ರಾಧಿಕಾರವು (KDA) ಕನ್ನಡ ಕಲಿಯುವ ಮೊಬೈಲ್ ಅಪ್ಲಿಕೇಶನ್ ಸಿದ್ದಪಡಿಸಿ ಅತಿ ಶೀಘ್ರದಲ್ಲಿ ನಿಮ್ಮ ಮುಂದಿಡಲು ಚಿಂತನೆ ನಡೆಸಿದ್ದು, ಎಲ್ಲರಿಗೂ ಕನ್ನಡ ಕಲಿಸುವ ಕೆಲಸಕ್ಕೆ ಮುಂದಾಗಿದೆ.

ಕನ್ನಡ ಪ್ರೇಮಿಗಳು ಪ್ರತಿನಿತ್ಯ ಈ ಅಪ್ಲಿಕೇಶನ್ ಜೊತೆ ನಿರಂತರ ಸಂವಹನ ಏರ್ಪಡಿಸಿಕೊಂಡು ತಮ್ಮ ಕನ್ನಡ ಕಲಿಯುವ ಕನಸನ್ನು ನನಸು ಮಾಡಿಕೊಳ್ಳಬಹುದು. ಇದಕ್ಕೆ ಸುಮಾರು 2 ಕೋಟಿ ವೆಚ್ಚ ತಗುಲಲಿದ್ದು, ಶಾಸ್ತ್ರೀಯ ಸ್ಥಾನ ಪಡೆದಿರುವ ಕನ್ನಡ ಭಾಷೆ ಸದ್ಯದಲ್ಲಿ ಎಲ್ಲರನ್ನು ತಲುಪಲಿದೆ ಎಂದು ಕೆಡಿಎ ಮುಖ್ಯಸ್ಥರಾದ ಎಲ್.ಹನುಮಂತಯ್ಯ ತಿಳಿಸಿದ್ದಾರೆ.

English summary
Bengaluru The Kannada Development Authority will soon launches App for learning Kannada.It is especially would be benefit for those from outside of karnataka people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X