ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈ ಬಾರಿಯ ಬಸವನಗುಡಿ ಕಡ್ಲೆಕಾಯಿ ಪರಿಷೆಯಲ್ಲಿ ಏನೇನಿದೆ?

|
Google Oneindia Kannada News

ಬೆಂಗಳೂರು, ಡಿಸೆಂಬರ್, 06: ಬಸವನಗುಡಿಯಲ್ಲಿ ಕಡ್ಲೆಕಾಯಿ ಕಲರವ ಆರಂಭವಾಗಿದೆ. ಡಿಸೆಂಬರ್ 7 ರಂದು ಪ್ರಸಿದ್ಧ ಕಡ್ಲೆಕಾಯಿ ಪರಿಷೆಗೆ ವಿಧ್ಯುಕ್ತ ಚಾಲನೆ ಸಿಗಲಿದೆ.
ಸೋಮವಾರದಿಂದ ಮೂರು ದಿನಗಳ ಕಾಲ ಪರಿಷೆಗೆ ತೆರಳಿ ಬಸವಣ್ಣನ ಅನುಗ್ರಹ ಪಡೆದುಕೊಳ್ಳಬಹುದು.|

ರಾಮಕೃಷ್ಣ ಆಶ್ರಮ ಸರ್ಕಲ್‌ನಿಂದ ಬಿಎಂಎಸ್ ಕಾಲೇಜುವರೆಗೂ ಕಡಲೆಕಾಯಿ, ಕಳ್ಳೆಪುರಿ, ತಿಂಡಿ-ತಿನಿಸು ಆಟಿಕೆ ಸಾಮಾನುಗಳು, ಗೃಹಾಲಂಕಾರ ವಸ್ತುಗಳು, ಬಲೂನ್ ಅಂಗಡಿಗಳು ತಲೆ ಎತ್ತವ. ಈಗಾಗಲೇ ಹಬ್ಬದ ವಾತಾವರಣ ಮನೆ ಮಾಡಿದೆ.[ಕಡ್ಲೆಕಾಯಿ ಪರಿಷೆ ಉದ್ಘಾಟನೆ ವಿಶೇಷವೇನು?]

ಪ್ಲಾಸ್ಟಿಕ್ ಮುಕ್ತ ಪರಿಷೆ, ಕಸ ಮುಕ್ತ ಪರಿಷೆ ಈ ಬಾರಿಯ ಸವಾಲು. ಆಡಳಿತದೊಂದಿಗೆ ನಾಗರಿಕರು ಸಹಕರಿಸಿದರೆ ಸ್ವಚ್ಛ ಭಾರತದ ಕಲ್ಪನೆಯ ಪರಿಷೆ ನಡೆಯಲು ಸಾಧ್ಯವಿದೆ. ಶನಿವಾರವೇ ಸಾಕಷ್ಟು ಜನ ಆಗಮಿಸಿದ್ದು ಕಂಡುಬಂತು. ಹಬ್ಬದ ಸಂಭ್ರಮ ಸವಿಯಲು ವರುಣನ ಕೃಪೆಯೂ ಬೇಕಾಗಿದೆ.

ಬಿಎಂಎಸ್ ಕಾಲೇಜಿಂದ ಬಟ್ಟೆ ಬ್ಯಾಗ್

ಬಿಎಂಎಸ್ ಕಾಲೇಜಿಂದ ಬಟ್ಟೆ ಬ್ಯಾಗ್

ಕಡಲೆ ಕಾಯಿ ವ್ಯಾಪಾರಸ್ಥರಿಗೆ ಅಂಗಡಿ ಸಂಖ್ಯೆ ಮತ್ತು ಬಟ್ಟೆ ಬ್ಯಾಗ್ ಗಳನ್ನು ಕಾಲೇಜು ನೀಡಿದೆ. 100 ಬ್ಯಾಗ್ ಗೆ 50 ರು. ನೀಡಬೇಕಿದ್ದು ಪ್ಲಾಸ್ಟಿಕ್ ಗೆ ಹೊಲೀಸಿದರೆ ಇದು ದುಬಾರಿ ಎಂಬುದು ವ್ಯಾಪಾರಸ್ಥರ ಅಳಲು.

ಮಕ್ಕಳಿಗೆ ಹಬ್ಬ

ಮಕ್ಕಳಿಗೆ ಹಬ್ಬ

ಹಸಿ ಕಡಲೆಕಾಯಿ, ಹುರಿದ, ಬೇಯಿಸಿದ ಕಡಲೆಕಾಯಿ, ಖಾರ- ಮಂಡಕ್ಕಿ, ಬಾಂಬೆ ಮಿಠಾಯಿ ತಿನಿಸುಗಳು ರಸ್ತೆ ಆಕ್ರಮಿಸಿಕೊಂಡಿವೆ. ಕೊಲಂಬಸ್, ಬ್ರೇಕ್ ಡಾನ್ಸ್, ಜಾಯಿಂಟ್ ವ್ಹೀಲ್, ಮಕ್ಕಳಿಗಾಗಿ ಜೋಕಾಲಿ, ಪುಟಾಣಿ ರೈಲು ಮನರಂಜನೆ ನೀಡುತ್ತಿವೆ. ಬೆಂಗಳೂರಿನ ಹೃದಯ ಭಾಗದಲ್ಲಿ ಹಳ್ಳಿ ಸೊಗಡು ತಲೆ ಎತ್ತಿದೆ.

ಕ್ಯಾಮರಾ ಕಣ್ಣು

ಕ್ಯಾಮರಾ ಕಣ್ಣು

ಭದ್ರತೆ ದೃಷ್ಟಿಯಿಂದ ಪ್ರಮುಖ ಸ್ಥಳಗಳಲ್ಲಿ ಹಾಗೂ ದೇವಸ್ಥಾನದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದೆ. ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ ಸಿದ್ಧವಾಗಿದ್ದು ಭದ್ರತೆಯೊಂದಿಗೆ ಟ್ರಾಫಿಕ್ ಕಂಟ್ರೊಲ್ ಗೂ ಕ್ರಮ ತೆಗೆದುಕೊಂಡಿದೆ. ಜತೆಗೆ 108 ಆಂಬುಲೆನ್ಸ್ ಗಳನ್ನು ನಿಯೋಜನೆ ಮಾಡಲಾಗಿದೆ.

ಉದ್ಘಾಟನೆ ಇಲ್ಲ

ಉದ್ಘಾಟನೆ ಇಲ್ಲ

ವಿಧಾನಪರಿಷತ್ ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದಿರುವುದರಿಂದ ಸರಳ ಕಾರ್ಯಕ್ರಮ ನಡೆಯಲಿದೆ. ಸೋಮವಾರ ದೊಡ್ಡ ಬಸವಣ್ಣ, ಗಣಪತಿಗೆ ವಿಶೇಷ ಪೂಜೆ, ಅಭಿಷೇಕದ ಮೂಲಕ ಹಬ್ಬ ಆರಂಭಗೊಳ್ಳಲಿದೆ.

ಸಂಚಾರ ಬದಲು

ಸಂಚಾರ ಬದಲು

ತಾತ್ಕಾಲಿಕವಾಗಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದ್ದು ಲಾಲ್‌ಬಾಗ್ ಪಶ್ಚಿಮ ದ್ವಾರದಿಂದ ವಾಣಿವಿಲಾಸ್ ರಸ್ತೆ, ಚಾಮರಾಜಪೇಟೆ 5ನೇ ಮುಖ್ಯರಸ್ತೆ ಹಾಗೂ ಗಾಂಧಿಬಜಾರ್ ಮುಖ್ಯರಸ್ತೆ ಕಡೆಯಿಂದ ಹನುಮಂತನಗರಕ್ಕೆ ಹೋಗುವ ವಾಹನಗಳು ರಾಮಕೃಷ್ಣ ಆಶ್ರಮ ವೃತ್ತದಲ್ಲಿ ಬಲತಿರುವು ಪಡೆಯಬೇಕು.

 ವಾಹನ ನಿಲುಗಡೆಗೆ ವ್ಯವಸ್ಥೆ

ವಾಹನ ನಿಲುಗಡೆಗೆ ವ್ಯವಸ್ಥೆ

ಆಗಮಿಸುವ ಭಕ್ತರಿಗೆ ನ್ಯಾಷನಲ್ ಕಾಲೇಜು ಆಟದ ಮೈದಾನ, ಕೊಹಿನೂರು ಆಟದ ಮೈದಾನ, ಹಯವದನ ರಸ್ತೆ ಗವಿಪುರ, ಬಸವನಗುಡಿ ರಸ್ತೆ ಮತ್ತು ಸಾಯಿರಂಗ ಆಟದ ಮೈದಾನದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

English summary
The area around Doddabasavanagudi (Big Bull Temple) in Basavanagudi, Bengaluru is set to spring to life with the two-day groundnut fair, popularly known as Kadlekai Parishe, which will begin from December 7.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X