• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪುಟ್ಟ ಮಕ್ಕಳಿಗೆ ಸ್ತನ್ಯಪಾನ ಮಾಡಿಸಿದ ದಿಟ್ಟ ತಾಯಂದಿರು

By Prasad
|

ಬೆಂಗಳೂರು, ಆಗಸ್ಟ್ 06 : ಮಗುವಿನ ಆರೈಕೆಗೆ ಸಂಬಂಧಿಸಿದಂತೆ ಬೆಂಗಳೂರಿನ ತಾಯಂದಿರು ಶನಿವಾರದಂದು ದೊಡ್ಡ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಬಹಿರಂಗವಾಗಿ ಸ್ತನ್ಯಪಾನ ಮಾಡಿಸುವ ಮೂಲಕ ಮಗುವಿಗೆ ಹಾಲು ಕುಡಿಸಲು ಹಿಂಜರಿಯುವ ಅಮ್ಮಂದಿರಿಗೆ ಸ್ಪಷ್ಟ ಸಂದೇಶ ಸಾರಿದ್ದಾರೆ.

ಆಗಸ್ಟ್ 1ರಿಂದ 7ನ್ನು ಸ್ತನ್ಯಪಾನ ವಾರವನ್ನಾಗಿ ಜಾಗತಿಕವಾಗಿ ಆಚರಿಸಲಾಗುತ್ತದೆ. ಹಸುಗೂಸುಗಳ ಆರೋಗ್ಯದ ದೃಷ್ಟಿಯಿಂದ ಅಮೃತಸಮಾನವಾಗಿರುವ ತಾಯಿಯ ಹಾಲು ಎಷ್ಟು ಮುಖ್ಯ ಎಂಬ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಸ್ತನ್ಯಪಾನ ಮಾಡಿಸುವುದು ಮುಜುಗರದ ಸಂಗತಿಯಲ್ಲ, ಇದು ಎಲ್ಲ ಕೆಲಸಗಳಂತೆ ಸಹಜ. [ಹುಟ್ಟಿದ ಮಗುವಿಗೆ ತಾಯಿಯ ಹಾಲೇ ಸರ್ವಶ್ರೇಷ್ಠ]

ಇದರ ಭಾಗವಾಗಿ ಬನ್ನೇರುಘಟ್ಟ ರಸ್ತೆಯಲ್ಲಿರುವ ರೈನ್‌ಬೋ ಮಕ್ಕಳ ಆಸ್ಪತ್ರೆಯಲ್ಲಿ 'Big Latch On' ಎಂಬ ಮುಕ್ತ ಸ್ತನ್ಯಪಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಹಲವಾರು ತಾಯಂದಿರು ತಮ್ಮ ಸಂಕೋಚವನ್ನು ಬದಿಗಿಟ್ಟು, ತಮ್ಮ ಕೂಸುಗಳಿಗೆ ಬಹಿರಂಗವಾಗಿ ಸ್ತನ್ಯಪಾನ ಮಾಡಿಸಿದರು.

ಬಿಗ್ ಲ್ಯಾಚ್ ಆನ್ ಮೊದಲು ಆರಂಭವಾದದ್ದು ನ್ಯೂಜಿಲೆಂಡಿನಲ್ಲಿ 2005ರಲ್ಲಿ. ನಂತರದ ವರ್ಷಗಳಲ್ಲಿ ಅಮೆರಿಕದಲ್ಲಿ ಮತ್ತಿತರ ರಾಷ್ಟ್ರಗಳಲ್ಲಿ ಜನಪ್ರಿಯತೆ ಗಳಿಸುತ್ತಾ ಸಾಗಿತು. ಇದೀಗ ಬೆಂಗಳೂರಿನಲ್ಲಿ ಶನಿವಾರ ತನ್ನ ಅಭಿಯಾನ ಆರಂಭಿಸಿತು. [ಹೀಗೊಂದು ಎದೆಹಾಲಿನ ಸ್ವಗತ!]

ಹುಟ್ಟಿದ ಒಂದು ಗಂಟೆಯಲ್ಲಿ ಮಗುವಿಗೆ ಸ್ತನ್ಯಪಾನ

ಹುಟ್ಟಿದ ಒಂದು ಗಂಟೆಯಲ್ಲಿ ಮಗುವಿಗೆ ಸ್ತನ್ಯಪಾನ

ಮಗು ಹುಟ್ಟಿದ ಒಂದು ಗಂಟೆಯಲ್ಲಿಯೇ ಮಗುವಿಗೆ ಸ್ತಸ್ಯಪಾನ ಮಾಡಿಸಬೇಕು ಮತ್ತು ಕನಿಷ್ಠ 6 ತಿಂಗಳಾಗುವವರೆಗೆ ಸ್ತನ್ಯಪಾನವನ್ನು ಮುಂದುವರಿಸಬೇಕು. ಇದರಿಂದಾಗಿ ಮಗುವಿಗೆ ಸರ್ವ ಪೌಷ್ಟಿಕಾಂಶಗಳು ಸಿಗುತ್ತವೆ ಮತ್ತು ರೋಗನಿರೋಧಕ ಶಕ್ತಿ ವರ್ಧಿಸುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಸಾರುತ್ತಿದೆ.

ಯಾವುದೇ ಸ್ಥಳದಲ್ಲಿ, ಯಾವುದೇ ಸಮಯದಲ್ಲಿ

ಯಾವುದೇ ಸ್ಥಳದಲ್ಲಿ, ಯಾವುದೇ ಸಮಯದಲ್ಲಿ

ಅಷ್ಟು ಮಾತ್ರವಲ್ಲ ಕನಿಷ್ಠ ಎರಡು ವರ್ಷಗಳವರೆಗೆ, ಇತರ ಆಹಾರದೊಡನೆ ಮಗುವಿಗೆ ತಾಯಿಯ ಹಾಲು ನೀಡಬೇಕು. ಈ ದೃಷ್ಟಿಯಿಂದ ಯಾವುದೇ ಸ್ಥಳದಲ್ಲಿ, ಯಾವುದೇ ಸಮಯದಲ್ಲಿ ತಾಯಂದಿರು ಮಗುವಿಗೆ ಹಾಲು ಕುಡಿಸುತ್ತಿದ್ದರೆ ಬೆಂಬಲಿಸಿ ಎಂಬ ಸಂದೇಶವನ್ನೂ ಸಾರಿದೆ.

ಶೇ.13ರಷ್ಟು ಮಕ್ಕಳನ್ನು ಬದುಕಿಸುವ ಸಾಧ್ಯತೆ

ಶೇ.13ರಷ್ಟು ಮಕ್ಕಳನ್ನು ಬದುಕಿಸುವ ಸಾಧ್ಯತೆ

ಮಗು ಹುಟ್ಟಿದ ಮೊದಲ ಗಂಟೆ ತುಂಬಾ ಕ್ಲಿಷ್ಟಕರವಾದದ್ದು. ಈ ಸಮಯದಲ್ಲಿ ಮಗುವಿಗೆ ಉಸಿರಾಟದ ಮತ್ತು ಇತರ ಸಂಕಷ್ಟಗಳು ಬರುವ ಸಾಧ್ಯತೆ ಇರುತ್ತದೆ. ಈ ಸಮಯದಲ್ಲಿ ಹಾಲು ಕುಡಿಸಿದರೆ ಶೇ.13ರಷ್ಟು ಮಕ್ಕಳನ್ನು ಬದುಕಿಸುವ ಸಾಧ್ಯತೆ ಹೆಚ್ಚಿರುತ್ತದೆ. ಮಗುವಿಗೆ ಹಾಲು ಕುಡಿಸಲು ಹಿಂದೇಟು ಹಾಕುವವರು ಮತ್ತೆ ಚಿಂತಿಸಬೇಕು ಎಂದು ಮಕ್ಕಳತಜ್ಞೆ ಡಾ. ಅಂಬಿಕಾ ಎಚ್ಚರಿಸಿದರು.

ಬೆಂಗಳೂರಿನಲ್ಲಿ ಶೇ.47ರಷ್ಟು ಮಾತ್ರ ಅರಿವು

ಬೆಂಗಳೂರಿನಲ್ಲಿ ಶೇ.47ರಷ್ಟು ಮಾತ್ರ ಅರಿವು

ಇತ್ತೀಚೆಗೆ ನಡೆಸಿರುವ ಅಧ್ಯಯನದ ಪ್ರಕಾರ, ಬೆಂಗಳೂರಿನಲ್ಲಿ ಕೇವಲ ಶೇ.47ರಷ್ಟು ಅಮ್ಮಂದಿರು ಮಾತ್ರ, ಮಗು ಹುಟ್ಟಿದ 1 ಗಂಟೆಯೊಳಗೆ ಸ್ತನ್ಯಪಾನ ಮಾಡಿಸುತ್ತಾರೆ. ಇದಕ್ಕೆ ಸ್ತನ್ಯಪಾನದ ಮಹತ್ವದ ಬಗ್ಗೆ ಕಾಳಜಿ ಮತ್ತು ಜಾಗೃತಿ ಇಲ್ಲದಿರುವುದೇ ಕಾರಣ ಎಂಬುದು ತಿಳಿದುಬಂದಿದೆ.

ಸ್ತನ್ಯಪಾನ ಮಾಡಿಸುವುದು ಕೂಡ ಒಂದು ಕಲೆ

ಸ್ತನ್ಯಪಾನ ಮಾಡಿಸುವುದು ಕೂಡ ಒಂದು ಕಲೆ

ಮಗುವಿಗೆ ಸ್ತನ್ಯಪಾನ ಮಾಡಿಸುವುದು ಕೂಡ ಒಂದು ಕಲೆ. ಯಾವ ಭಂಗಿಯಲ್ಲಿ ಕುಳಿತುಕೊಳ್ಳಬೇಕು, ಎಷ್ಟು ಹೊತ್ತು ಮಾಡಿಸಬೇಕು ಎಂಬಿತ್ಯಾದಿ ಉಪಯುಕ್ತ ಮಾಹಿತಿಯುಳ್ಳ, ಡಾ. ಪ್ರತಾಪ್ ಚಂದ್ರ ಅವರು ಬರೆದಿರುವ 'ರೈಟ್ ಸ್ಟಾರ್ಟ್' ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಇದರಲ್ಲಿ ಸ್ತನ್ಯಪಾನದ ಕುರಿತು ಸಮಗ್ರ ಮಾಹಿತಿಯಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru became the ONLY city in INDIA on Saturday to organise the BIG LATCH ON event thereby joining a list of privileged global cities where open breast feeding events have become a norm. The BIG LATCH ON kicked off at the Rainbow Children's Hospital, Banneraghatta Road on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more