ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗ್ರಾಹಕರ ಅನುಕೂಲಕ್ಕೆ ಜನಸ್ನೇಹಿ ವಿದ್ಯುತ್ ಸೇವೆ ಆರಂಭಿಸಲು ಮುಂದಾದ ಬೆಸ್ಕಾಂ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 27: ಸಿಲಿಕಾನ್ ಸಿಟಿಯಲ್ಲಿ ವಿದ್ಯುತ್ ಸಂಪರ್ಕ ಮತ್ತು ಸಮಸ್ಯೆಗಳ ಕ್ಷಿಪ್ರ ಪರಿಹಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಸ್ಕಾಂ ಹೊಸ ಯೋಜನೆ ಹಾಕಿಕೊಂಡಿದೆ. ಗ್ರಾಹಕರ ಸಂಪರ್ಕಕ್ಕೆ ಸೂಕ್ತ ಹಾಗೂ ವೇಗವಾದ ರೀತಿಯಲ್ಲಿ ಸೇವೆಗಳನ್ನು ಒದಗಿಸುವುದಕ್ಕಾಗಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಶೀಘ್ರದಲ್ಲೇ ಜನ ಸ್ನೇಹಿ ವಿದ್ಯುತ್ ಸೇವೆಗಳನ್ನು ಪ್ರಾರಂಭಿಸಲು ಮುಂದಾಗಿದೆ.

ಬೆಸ್ಕಾಂ ಅಧಿಕಾರಿಗಳ ಪ್ರಕಾರ, "ವಿದ್ಯುತ್ ಸರಬರಾಜನ್ನು ಪಡೆಯುವ ವಿಧಾನವನ್ನು ಸರಳಗೊಳಿಸುವುದು. ಮಾನವ ಸಂಪರ್ಕ ಸಾಧನವನ್ನು ಕಡಿಮೆ ಮಾಡುವುದು ಉದ್ದೇಶವಾಗಿದೆ. ಈ ಸೇವೆ ಪ್ರಾರಂಭಿಸುವ ಮೊದಲು ಅಂತಿಮ ಹಾಗೂ ಸೂಕ್ಷ್ಮ ವ್ಯತ್ಯಾಸಗಳನ್ನು ಒಳಗೊಂಡಿದೆ," ಎಂದು ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಪದೇ ಪದೇ ವಿದ್ಯುತ್ ವ್ಯತ್ಯಯಕ್ಕೆ ಕಾರಣವೇನು?ಬೆಂಗಳೂರಿನಲ್ಲಿ ಪದೇ ಪದೇ ವಿದ್ಯುತ್ ವ್ಯತ್ಯಯಕ್ಕೆ ಕಾರಣವೇನು?

ಈ ಸೇವೆಯು ತೆರಿಗೆ ಬದಲಾವಣೆಯ ಬಗ್ಗೆ ಗ್ರಾಹಕರಿಗೆ ತಿಳಿಸುತ್ತದೆ. ಹೆಸರು ಬದಲಾವಣೆ, ಹೊಸ ಹೆಸರು ಸೇರ್ಪಡೆ ಮತ್ತು ವಿದ್ಯುತ್ ಬಳಕೆ ಕಡಿತದಂತಹ ಇತರ ಸೇವೆಗಳಲ್ಲಿ ಸಹಕಾರಿಯಾಗಿದೆ. ಎಲ್ಲೆಲ್ಲಿ ಹೆಚ್ಚುವರಿ 24 ಗಂಟೆಗಳ ಒಳಗೆ ಮೂಲಸೌಕರ್ಯ ಮತ್ತು ಲೈನ್ ವಿಸ್ತರಣೆ ಅಗತ್ಯವಿಲ್ಲವೋ ಅಂಥ ಪ್ರದೇಶಗಳಲ್ಲಿ ದೇಶೀಯ ಮತ್ತು ವಾಣಿಜ್ಯ ಗ್ರಾಹಕರಿಗೆ (ಏಕ ಅಥವಾ ಬಹು ಸಂಪರ್ಕಗಳು) 18 KW ವರೆಗೆ ಲೋಡ್ ಮಾಡಲು ಅವಕಾಶ ನೀಡಲಾಗುತ್ತದೆ.

Bengaluru: Jana Snehi Vidyuth Services to be launched soon by Bescom

ರಾಜ್ಯಾದ್ಯಂತ 10 ಲಕ್ಷ ಗ್ರಾಹಕರನ್ನು ತಲುಪುವ ಗುರಿ:

ಜನ ಸ್ನೇಹಿ ವಿದ್ಯುತ್ ಸೇವೆಗಳನ್ನು ಆರಂಭಿಸಿದ ನಂತರ ಕನಿಷ್ಠ ದಾಖಲೆಗಳೊಂದಿಗೆ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುತ್ತದೆ. ಈ ವೇಳೆ ಪಾರದರ್ಶಕತೆಯನ್ನು ದೃಢಪಡಿಸಿಕೊಳ್ಳುವುದರ ಜೊತೆಗೆ ಅರ್ಜಿದಾರರಿಗೆ ಎಸ್ಎಂಎಸ್ ಹಾಗೂ ಈ-ಮೇಲ್ ಮೂಲಕ ಸಂದೇಶವನ್ನು ರವಾನಿಸಲಾಗುತ್ತದೆ. ರಾಜ್ಯದ ಎಲ್ಲಾ ವಲಯವಾರು ವಿದ್ಯುತ್ ಸರಬರಾಜು ನಿಗಮಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಾಗುತ್ತದೆ. ರಾಜ್ಯಾದ್ಯಂತ ಒಟ್ಟು 10 ಲಕ್ಷಕ್ಕೂ ಅಧಿಕ ಗ್ರಾಹಕರನ್ನು ತಲುಪುವ ಗುರಿಯನ್ನು ಹೊಂದಲಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕೃತ ದಿನಾಂಕದ ನಿರೀಕ್ಷೆ:

Recommended Video

ಟೀಂ ಇಂಡಿಯಾ ಆಟಗಾರರಿಗೆ ಖಡಕ್ ಅಭ್ಯಾಸ ಮಾಡಿಸಿದ MS ಧೋನಿ | Oneindia Kannada

ಜನ ಸ್ನೇಹಿ ವಿದ್ಯುತ್ ಸೇವೆಗಳನ್ನು ಪ್ರಾರಂಭಿಸುವುದಕ್ಕಾಗಿ ಅಧಿಕೃತ ದಿನಾಂಕಕ್ಕಾಗಿ ಎದುರು ನೋಡಲಾಗುತ್ತಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ತಿಳಿಸಿದ್ದಾರೆ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ಈ ಮಧ್ಯೆ ಸೇವೆ ಆರಂಭಿಸುವುದಕ್ಕೆ ಸಂಬಂಧಿಸಿದಂತೆ ಪ್ರಯೋಗಗಳನ್ನು ಪೂರ್ಣಗೊಳಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

English summary
Bengaluru: Jana Snehi Vidyuth Services to be launched soon by Bescom.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X