ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಮನೆ ಖರೀದಿ ಪ್ರಮಾಣ ದೇಶದಲ್ಲೇ ಹೆಚ್ಚು

By Kiran B Hegde
|
Google Oneindia Kannada News

ಬೆಂಗಳೂರು, ಡಿ. 8: ನಗರದಲ್ಲಿ ಮಾಲಿನ್ಯ ಹೆಚ್ಚಳದ ಕುರಿತು ಎಷ್ಟೇ ಆತಂಕ ವ್ಯಕ್ತವಾಗಿದ್ದರೂ ಇಲ್ಲಿಯೇ ವಾಸಿಸಬೇಕೆಂದು ಹಂಬಲಿಸುವ ವ್ಯಕ್ತಿಗಳ ಸಂಖ್ಯೆಯಲ್ಲಿ ಕಡಿಮೆಯಾಗಿಲ್ಲ.

ಅಂತಾರಾಷ್ಟ್ರೀಯ ಮಟ್ಟದ ಆಸ್ತಿ ಸಲಹಾ ಸಂಸ್ಥೆಯಾದ ನೈಟ್ ಫ್ರಾಂಕ್ ನಡೆಸಿದ ಸಮೀಕ್ಷೆ ಪ್ರಕಾರ 2014ರಲ್ಲಿ ಅತಿ ಹೆಚ್ಚು ಮನೆಗಳು ಮಾರಾಟವಾದ ಪ್ರಮುಖ ನಗರಗಳಲ್ಲಿ ಬೆಂಗಳೂರು ಪ್ರಥಮ ಸ್ಥಾನ ಪಡೆದಿದೆ. ನಂತರದ ಸ್ಥಾನಗಳನ್ನು ಮುಂಬಯಿ, ಪುಣೆ, ಚೆನ್ನೈ ಹಾಗೂ ಹೈದರಾಬಾದ್ ಹಂಚಿಕೊಂಡಿವೆ. ಈ ಎಲ್ಲ ನಗರಗಳಲ್ಲಿ ಖರೀದಿಯಾದ ಮನೆಗಳ ಸಂಖ್ಯೆಯು ದೇಶದ ಒಟ್ಟೂ ಖರೀದಿ ಸಂಖ್ಯೆಯ ಶೇ. 70ರಷ್ಟು.

town

ಇಲ್ಲಿ ಮಾತ್ರ ಖರೀದಿ ಪ್ರಮಾಣ ಹೆಚ್ಚು: ದೇಶದಲ್ಲಿ 2013ರಕ್ಕೆ ಹೋಲಿಸಿದರೆ 2014ರಲ್ಲಿ ಮನೆ ಖರೀದಿ ಪ್ರಮಾಣ ಶೇ. 10ರಷ್ಟು ಕುಸಿದಿದೆ ಎನ್ನುತ್ತದೆ ವರದಿ. ಆದರೆ, ಬೆಂಗಳೂರಿನಲ್ಲಿ ಮಾತ್ರ ಶೇ. 3.5ರಷ್ಟು ಹೆಚ್ಚಳವಾಗಿದೆ. ಉಳಿದೆಲ್ಲ ನಗರಗಳಲ್ಲಿ ಖರೀದಿ ಪ್ರಮಾಣ ಹಿಂದಿನ ವರ್ಷಕ್ಕಿಂತ ಕುಸಿದಿದೆ.

ಜೂನ್ ತಿಂಗಳಲ್ಲಿ ಮುಂಬಯಿ ನಗರವು ಶೇ. 8ರಷ್ಟು ಹೆಚ್ಚಳ ಕಂಡಿತ್ತು. ಆದರೆ, ನಂತರ ಖರೀದಿ ಪ್ರಕ್ರಿಯೆ ಒಮ್ಮೆಲೇ ಕುಸಿದ ಕಾರಣ ಡಿಸೆಂಬರ್ ಅಂತ್ಯದಲ್ಲಿ ಶೇ. 10ರಷ್ಟು ಕುಸಿತ ದಾಖಲಾಗುವ ನಿರೀಕ್ಷೆ ಹುಟ್ಟಿಸಿದೆ.

ನೈಟ್ ಫ್ರಾಂಕ್ ಸಂಸ್ಥೆಯಲ್ಲಿ ಮುಖ್ಯ ಆರ್ಥಿಕ ಸಲಹೆಗಾರ ಹಾಗೂ ಸಂಶೋಧನಾ ನಿರ್ದೇಶಕ ಶಮಂತಕ್ ದಾಸ್ ಪ್ರಕಾರ, "ಬೆಂಗಳೂರಿನಲ್ಲಿ ಚದರ ಅಡಿ ಜಾಗಕ್ಕೆ 4ರಿಂದ 6.5 ಸಾವಿರ ರೂ. ಇದ್ದರೆ ಗ್ರಾಹಕರು ಕೊಳ್ಳಲು ಇಚ್ಛಿಸುತ್ತಾರೆ. 6.5 ಸಾವಿರಕ್ಕಿಂತ ಹೆಚ್ಚಿದ್ದರೆ ಆಸಕ್ತಿ ತೋರುವುದಿಲ್ಲ" ಎಂದು ಅಭಿಪ್ರಾಯಪಟ್ಟಿದ್ದಾರೆ.

English summary
Bengaluru is the only major city in all over nation to see a growth in new residential sales in 2014. International property consultancy Knight Frank estimates that the real estate markets of NCR, Mumbai, Pune, Chennai, Hyderabad and Bengaluru, will collectively see more than 10% less sales compared to last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X