• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋವಿಡ್ ನಿಯಂತ್ರಣದಲ್ಲಿ ಬೆಂಗಳೂರು ನಂಬರ್ 1: ಕೇಂದ್ರ ಸಚಿವ

|

ಬೆಂಗಳೂರು, ಮೇ 25: 'ದೇಶದ ಎಲ್ಲ ಮಹಾನಗರಗಳಿಗೆ ಹೋಲಿಸಿದರೆ ಕೊರೊನಾ ನಿಯಂತ್ರಣ ಮಾಡುವಲ್ಲಿ ಬೆಂಗಳೂರು ಮೊದಲನೇ ಸ್ಥಾನದಲ್ಲಿ ಇದೆ' ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದರು.

   ರಕ್ತದಾನ ಮಾಡುವವರಿಗೆ ಎಲ್ಲಿದೆ ಒಂದು ಸುವರ್ಣ ಅವಕಾಶ, ದಯವಿಟ್ಟು ಬನ್ನಿ ರಕ್ತದಾನ ಮಾಡಿ | Krishna Byre Gowda

   ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

   ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ರಾಜ್ಯದಲ್ಲಿ ದಾಖಲಾಗಿರುವ 800 ರಿಂದ 900 ಪ್ರಕರಣಗಳು ಬೇರೆ ರಾಜ್ಯದಿಂದ ಇಲ್ಲಿಗೆ ಬಂದವರಿಗೆ ಸಂಬಂಧಿಸಿದ ಪ್ರಕರಣಗಳಾಗಿವೆ' ಎಂದರು.

   ರಾಜ್ಯದಲ್ಲಿಂದು 93 ಕೇಸ್ ಪತ್ತೆ, ಒಟ್ಟು ಸೋಂಕಿತರ ಸಂಖ್ಯೆ 2182ಕ್ಕೆ ಏರಿಕೆ

   'ರಾಜ್ಯದಲ್ಲಿ ಟೆಸ್ಟಿಂಗ್ ಲ್ಯಾಬ್ ಹೆಚ್ಚಾಗಿದೆ. ಕೊರೊನಾವೈರಸ್ ಪರೀಕ್ಷೆಗಳ ಪ್ರಮಾಣವೂ ಹೆಚ್ಚಿದೆ. ಹೈಡ್ರೊಕ್ಲೊರೋಫಿನ್, ಪ್ಯಾರಾಸಿಟಮಾಲ್ ಮಾತ್ರೆಗಳೂ ಅಗತ್ಯಕ್ಕಿಂತ ಹೆಚ್ಚಿದೆ. ಜನ ಆತಂಕ ಪಡುವ ಅವಶ್ಯಕತೆ ಇಲ್ಲ' ಎಂದು ಹೇಳಿದರು.

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ವಲಸಿಗರನ್ನು ಅವರ ರಾಜ್ಯಕ್ಕೆ ಕಳುಹಿಸಲು ರಾಜ್ಯ ಸಿದ್ದ ಇದೆ. ಆದ್ರೆ ಆಯಾ ರಾಜ್ಯಗಳೂ ಅವರನ್ನು ಬಿಟ್ಟುಕೊಳ್ಳಲು ಒಪ್ಪಬೇಕು. ಹೀಗಾಗಿ ಒಂದಷ್ಟು ಗೊಂದಲ ಇದೆ. ರಸಗೊಬ್ಬರದ ದಾಸ್ತಾನು ಸಹ ಅಗತ್ಯದ ಪ್ರಮಾಣದಲ್ಲಿ ಇದೆ. ಪಿಪಿಇ ಕಿಟ್ ಗಳು ಅಗತ್ಯ ಇದೆ ಅಂತ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಜತೆಗೆ ಹೋಟೆಲ್ ಗಳನ್ನು ತೆರೆಯಬೇಕು ಎಂಬ ಬೇಡಿಕೆಯೂ ಇದೆ. ಈ ಬಗ್ಗೆ ಕೇಂದ್ರದ ಜತೆ ಮಾತನಾಡಿ ಕೂಡಲೆ ವ್ಯವಸ್ಥೆ ಮಾಡಿಸುತ್ತೇನೆ' ಎಂದು ಸದಾನಂದ ಗೌಡ ಹೇಳಿದರು.

   ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?

   English summary
   Bengaluru Is The Best City For Controlling Coronavirus Says Union Minister Sadananda Gowda to media on Monday.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X