ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೆನಿಜುವೆಲಾ ಮೊದಲು ಬೆಂಗಳೂರು ವಿಶ್ವದ 5ನೇ ಅಗ್ಗದ ನಗರ

|
Google Oneindia Kannada News

ಲಂಡನ್, ಜುಲೈ 30: ಪ್ರತಿ ವರ್ಷವೂ ವಿಶ್ವದ ಅತೀ ಅಗ್ಗ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಇದ್ದೇ ಇರುತ್ತದೆ.

ಬೆಂಗಳೂರು ಅಗ್ಗದ ನಗರ, ಸಿಂಗಪೂರ್ ಬಲು ದುಬಾರಿ: ಸಮೀಕ್ಷೆ ಬೆಂಗಳೂರು ಅಗ್ಗದ ನಗರ, ಸಿಂಗಪೂರ್ ಬಲು ದುಬಾರಿ: ಸಮೀಕ್ಷೆ

ಈ ಬಾರಿಯೂ ಕೂಡ ಬೆಂಗಳೂರು ಐದನೇ ಸ್ಥಾನ ಪಡೆದುಕೊಂಡಿದೆ. ವೆನಿಜುವೆಲಾದ ಕ್ಯಾರಕಾಸ್ ಮೊದಲ ಸ್ಥಾನ ಕಾಪಾಡಿಕೊಂಡಿದೆ. ನಂತರದ ಸ್ಥಾನವನ್ನು ಸಿರಿಯಾ ಪಡೆದುಕೊಂಡಿದೆ. ಬೆಂಗಳೂರು ಐದನೇ ಸ್ಥಾನವನ್ನು ಅಲಂಕರಿಸಿದೆ.

ಸಾಫ್ಟ್‌ವೇರ್ ಹಿಂದಿಕ್ಕಿದ ಹಾರ್ಡ್‌ವೇರ್‌ಗೆ ಹೆಚ್ಚು ಸಂಬಳ: ಬೆಂಗಳೂರೇ ಅಗ್ರಗಣ್ಯಸಾಫ್ಟ್‌ವೇರ್ ಹಿಂದಿಕ್ಕಿದ ಹಾರ್ಡ್‌ವೇರ್‌ಗೆ ಹೆಚ್ಚು ಸಂಬಳ: ಬೆಂಗಳೂರೇ ಅಗ್ರಗಣ್ಯ

ಬ್ರಿಟನ್‌ನ ಮೂಲದ ಎಕನಾಮಿಸ್ಟ್‌ ಇಂಟೆಲಿಜೆನ್ಸ್‌ ಯುನಿಟ್‌ ಬಿಡುಗಡೆ ಮಾಡಿರುವ ವಿಶ್ವದ ಅಗ್ಗದ ನಗರಗಳ ಪಟ್ಟಿಯಲ್ಲಿ ಕರ್ನಾಟಕ ರಾಜಧಾನಿ ಬೆಂಗಳೂರು 5ನೇ ಸ್ಥಾನ ಪಡೆದುಕೊಂಡಿದೆ. ಈ ಪಟ್ಟಿಯಲ್ಲಿ ಭಾರತದ ಮೂರು ನಗರಗಳು ಸ್ಥಾನ ಪಡೆದುಕೊಂಡಿದ್ದು, ಚೆನ್ನೈ ಹಾಗೂ ದೆಹಲಿ ಕ್ರಮವಾಗಿ 8 ಮತ್ತು 10ನೇ ಸ್ಥಾನ ಪಡೆದುಕೊಂಡಿವೆ.

Bengaluru is the 5th cheapest city in the world

ಉದಾಹರಣೆಗೆ ಒಂದು ಒಂದು ಕೆ.ಜಿ. ಬ್ರೆಡ್‌ನ ಪ್ಯಾಕಿಗೆ ಪಾಕಿಸ್ತಾನದ ಕರಾಚಿಯಲ್ಲಿ ಸುಮಾರು 100 ರೂ. ಇದ್ದರೆ, ಅದೇ ಬ್ರೆಡ್‌ಗೆ ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ನಲ್ಲಿ 390 ರೂ. ವೆಚ್ಚ ಮಾಡಬೇಕು.

ಇಡ್ಲಿ ವರ್ಲ್ಡ್ ಫೇಮಸ್; ತಿನ್ನುವವರ ಸಂಖ್ಯೆಯಲ್ಲಿ ದೇಶಕ್ಕೆ ಬೆಂಗಳೂರು ನಂಬರ್ 1 ಇಡ್ಲಿ ವರ್ಲ್ಡ್ ಫೇಮಸ್; ತಿನ್ನುವವರ ಸಂಖ್ಯೆಯಲ್ಲಿ ದೇಶಕ್ಕೆ ಬೆಂಗಳೂರು ನಂಬರ್ 1

ಹೀಗೆ ವಿವಿಧ ಮಾನದಂಡಗಳನ್ನು ಬಳಸಿ ವಿಶ್ವದ ಅಗ್ಗದ ನಗರಗಳ ಪಟ್ಟಿಯನ್ನು ಎಕನಾಮಿಸ್ಟ್‌ ಇಂಟೆಲಿಜೆನ್ಸ್‌ ಯುನಿಟ್‌ ಬಿಡುಗಡೆ ಮಾಡಿದೆ. ವಿಶ್ವದ ಅತಿ ದುಬಾರಿ ನಗರಗಳ ಪಟ್ಟಿಯಲ್ಲಿ ಸಿಂಗಾಪುರ, ಪ್ಯಾರಿಸ್‌ ಹಾಗೂ ಹಾಂಕಾಂಗ್‌ ಮೊದಲ ಸ್ಥಾನ ಪಡೆದುಕೊಂಡಿವೆ.

ಬೆಂಗಳೂರಿನ ಈ ವೃತ್ತಗಳಲ್ಲಿ ಅತಿ ಹೆಚ್ಚು ಮಾಲಿನ್ಯ, ಕಾರಣಗಳೇನು? ಬೆಂಗಳೂರಿನ ಈ ವೃತ್ತಗಳಲ್ಲಿ ಅತಿ ಹೆಚ್ಚು ಮಾಲಿನ್ಯ, ಕಾರಣಗಳೇನು?

ವಿಶ್ವದೆಲ್ಲೆಡೆಯ ಜೀವನ ವೆಚ್ಚ ಸಮೀಕ್ಷೆ -2019ರ ಪ್ರಕಾರ, ವೆನಿಜುವೆಲಾದ ಕ್ಯಾರಕಾಸ್‌ ವಿಶ್ವದ ಅತಿ ಅಗ್ಗದ ನಗರ ಎನಿಸಿಕೊಂಡಿದೆ. ಕಳೆದ 30 ವರ್ಷಗಳಿಂದ ಈ ಸಮೀಕ್ಷೆಯನ್ನು ಕೈಗೊಳ್ಳಲಾಗುತ್ತಿದ್ದು, ಮನೆಬಳಕೆಯ ಸಾಮಗ್ರಿಗಳು, ಆಹಾರ, ಬಟ್ಟೆ, ಪಾನಿಯಗಳು ಸೇರಿದಂತೆ 160 ಉತ್ಪನ್ನಗಳಿಗೆ ಬೇರೆ ಬೇರೆ ದೇಶಗಳ ನಗರಗಳಲ್ಲಿ ಇರುವ ದರಗಳನ್ನು ಆಧರಿಸಿ ವಿಶ್ವದ ಅಗ್ಗದ ಹಾಗೂ ದುಬಾರಿ ನಗರಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ವಿಶ್ವದ 10 ಅತಿ ಅಗ್ಗದ ನಗರಗಳು

1. ಕ್ಯಾರಕಾಸ್‌- ವೆನಿಜುವೆಲಾ

2. ಡಮಾಸ್ಕಸ್‌- ಸಿರಿಯಾ

3. ತಾಷ್ಕೆಂಟ್‌- ಉಜ್ಬೇಕಿಸ್ತಾನ

4. ಅಲ್ಮಾಟಿ- ಕಜಕಸ್ತಾನ

5. ಬೆಂಗಳೂರು- ಭಾರತ

6. ಕರಾಚಿ- ಪಾಕಿಸ್ತಾನ

7. ಲಾಗೋಸ್‌- ನೈಜೀರಿಯಾ

8. ಚೆನ್ನೈ- ಭಾರತ

9. ಬ್ಯೂನಸ್‌ ಐರಸ್‌ - ಅರ್ಜೆಂಟೀನಾ

10. ನವದೆಹಲಿ- ಭಾರತ

English summary
Bengaluru is the fifth cheapest city in the world, according to The Economist Intelligence Unit's recent Worldwide Cost of Living Survey for 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X