ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಂಗಾರು ಬರಮಾಡಿಕೊಳ್ಳಲು ಬೆಂಗಳೂರು ಸಿದ್ಧವಿಲ್ಲ: ಕಾರಣ ಇಲ್ಲಿದೆ

|
Google Oneindia Kannada News

Recommended Video

ಮುಂಗಾರು ಬರಮಾಡಿಕೊಳ್ಳಲು ಬೆಂಗಳೂರು ಈಗಲೇ ಸಿದ್ದವಿಲ್ಲ | ಕಾರಣ? | Oneindia Kannada

ಬೆಂಗಳೂರು, ಏ.20: ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯಕ್ಕೆ ಮುಂಗಾರು ಪ್ರವೇಶವಾಗುತ್ತೆ. ಆದರೆ ಬಿಬಿಎಂಪಿ, ಟ್ರಾಫಿಕ್ ಪೊಲೀಸರು ಮಾತ್ರ ಅಯ್ಯೋ ಇಷ್ಟು ಬೇಗ ಮುಂಗಾರು ಬೇಡ ಎಂದು ಹೇಳುತ್ತಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕಾದ ಬೆಂಗಳೂರಿಗೆ ಮಳೆ ಬರಲಿ ಎಂದು ಮಂದಿ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಆದರೆ ಮಳೆ ಬಂದರೆ ಏನೆಲ್ಲಾ ಆನಾಹುತಗಳು ಸಂಬವಿಸಬಲ್ಲದು ಎಂಬ ಅಂದಾಜು ಕೂಡ ಇರಲು ಸಾಧ್ಯವಿಲ್ಲ.

ಮಳೆ ಬಂದರೆ ನೀರು ಹರಿದುಹೋಗಲು ಜಾಗವಿಲ್ಲದೆ ಬಿಬಿಎಂಪಿ ಅಧಿಕಾರಿಗಳು, ಟ್ರಾಫಿಕ್ ಪೊಲೀಸರು ಪಚೀತಿಗೆ ಸಿಲುಕುತ್ತಾರೆ, ಎರಡು ಮೂರು ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ವಿವಿಧ ಇಲಾಖೆಗಳಿಗೆ ಹಿಡಿ ಶಾಪ ಹಾಕುತ್ತಾ ನಿಲ್ಲುವ ಪರಿಸ್ಥಿತಿ ಇದೆ.

ಇನ್ನು 2 ದಿನ ಬೆಂಗಳೂರು ಸೇರಿ ರಾಜ್ಯಾದ್ಯಂತ ಭಾರಿ ಮಳೆ ಮುನ್ಸೂಚನೆ ಇನ್ನು 2 ದಿನ ಬೆಂಗಳೂರು ಸೇರಿ ರಾಜ್ಯಾದ್ಯಂತ ಭಾರಿ ಮಳೆ ಮುನ್ಸೂಚನೆ

ಬೆಂಗಳೂರಲ್ಲಿ ಏಪ್ರಿಲ್‌ನಲ್ಲಿ ಕೇವಲ 2 ದಿನವಷ್ಟೇ ಮಳೆಯಾಗಿದೆ. ಆದರೆ ನಿಂತ ಮಳೆನೀರನ್ನು ಸುಲಭವಾಗಿ ಹರಿಯುವಂತೆ ಮಾಡಲು ವಾರವೇ ಬೇಕಾಗಬಹುದು ಅಂಥ ಪರಿಸ್ಥಿತಿ ಬೆಂಗಳೂರಿನಲ್ಲಿದೆ.

ಎಲ್ಲಾ ಒಳಚರಂಡಿಗಳಲ್ಲಿ ಪ್ಲಾಸ್ಟಿಕ್, ಥರ್ಮಾಕೋಲ್

ಎಲ್ಲಾ ಒಳಚರಂಡಿಗಳಲ್ಲಿ ಪ್ಲಾಸ್ಟಿಕ್, ಥರ್ಮಾಕೋಲ್

ಒಳಚರಂಡಿ, ರಸ್ತೆಬದಿಗಳಲ್ಲಿ ಪ್ಲಾಸ್ಟಿಕ್, ಥರ್ಮಾಕೋಲ್ ಇನ್ನಿತರೆ ತ್ಯಾಜ್ಯಗಳನ್ನು ಬಿಸಾಡುವುದರಿಂದ ಎಲ್ಲೆಂದರಲ್ಲಿ ಎಲ್ಲವೂ ಶೇಖರಣೆಗೊಂಡು ಮಳೆ ಬಂದಾಗ ನೀರು ಹರಿದುಹೋಗಲು ಜಾಗವಿಲ್ಲದಂತೆ ಮುಚ್ಚಿಬಿಡುತ್ತದೆ. ಹೀಗಿರುವಾಗ ಮುಂದಿನ ತಿಂಗಳೇ ಮಳೆ ಬಂದರೆ ಬೆಂಗಳೂರಿನ ವಾಹನಸವಾರರ ಗತಿಏನು ಎನ್ನುವುದನ್ನು ಒಮ್ಮೆ ಯೋಚನೆ ಮಾಡಬೇಕಿದೆ.

 ಮರಗಳ ಒಣಗಿದ ರೆಂಬೆಗಳನ್ನು ಇನ್ನೂ ಕತ್ತರಿಸಿಲ್ಲ

ಮರಗಳ ಒಣಗಿದ ರೆಂಬೆಗಳನ್ನು ಇನ್ನೂ ಕತ್ತರಿಸಿಲ್ಲ

ಮಳೆಗಾಲ ಆರಂಭಕ್ಕೂ ಮುನ್ನ ಬಿಬಿಎಂಪಿಯು ಇಡೀ ಬೆಂಗಳೂರಿನ ಸರ್ವೇ ನಡೆಸಿ ಮರಗಳ ಒಣಗಿದ ರೆಂಬೆಗಳನ್ನು ಕತ್ತರಿಸುವುದು ಅಥವಾ ವಯಸ್ಸಾದ ಮರಗಳನ್ನು ಕತ್ತರಿಸುವ ಕೆಲಸ ಮಾಡಬೇಕು ಆದರೆ ಬಿಬಿಎಂಪಿ ಇನ್ನೂ ಎಚ್ಚೆತ್ತುಕೊಂಡಿಲ್ಲ. ಮರಗಳು ಬಿದ್ದ ಮೇಲೆ ನೋಡೋಣ ಎನ್ನುವ ನಿರಾಸಕ್ತಿ ತೋರುತ್ತಿದೆ.

ಮಳೆಬಂದರೆ ಬೆಂಗಳೂರಿನ ರಸ್ತೆಗಳು ನದಿಯಾಗುತ್ತವೆ

ಮಳೆಬಂದರೆ ಬೆಂಗಳೂರಿನ ರಸ್ತೆಗಳು ನದಿಯಾಗುತ್ತವೆ

ಬೆಂಗಳೂರಲ್ಲಿ ಮಂಗಳವಾರ, ಬುಧವಾರ ಸುರಿದ ಮಳೆಗೆ ಹಲವು ಪ್ರದೇಶಗಳು ಜಲಾವೃತವಾಗಿದ್ದವು. ರಸ್ತೆಗಳು, ಫ್ಲೈಓವರ್‌ಗಳೆಲ್ಲ ನೀರು ನಿಂತು ಟ್ರಾಫಿಕ್ ಪೊಲೀಸರಿಗೆ ದೊಡ್ಡ ತಲೆನೋವು ಉಂಟು ಮಾಡಿತ್ತು. ಹಳೆ ಮದ್ರಾಸ್ ರಸ್ತೆ, ಏರ್‌ಪೋರ್ಟ್ ರಸ್ತೆ, ಔಟರ್ ರಿಂಗ್ ರೋಡ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಇಂತಹ ಕೆಟ್ಟ ವ್ಯವಸ್ಥೆ ಮುಂದುವರೆದಿದೆ.

ನಾವು ಬಯಸಿದ್ದು ಇಂಥ ಬೆಂಗಳೂರಲ್ಲ

ನಾವು ಬಯಸಿದ್ದು ಇಂಥ ಬೆಂಗಳೂರಲ್ಲ

ಬಿಬಿಎಂಪಿ ನಿರ್ಮಿಸಿರುವ ರಸ್ತೆಗಳ ಬಗ್ಗೆ ನಮ್ಮ ಆಕ್ಷೇಪವಿದೆ. ಮಳೆಗಾಲವನ್ನು ತಡೆದುಕೊಳ್ಳುವಂತಹ ರಸ್ತೆಗಳು ಇದಲ್ಲ, ಸ್ವಲ್ಪ ಮಳೆ ಬಂದರೂ ಪ್ರವಾಹದ ರೀತಿ ಭಾಸವಾಗುತ್ತದೆ. ಮಳೆಗಾಲದಲ್ಲಿ ಉಂಟಾಗುವ ಅನಾಹುತಗಳನ್ನು ತಡೆಯಲೂ ಇಲಾಖೆಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಿವಿಕ್ ಟ್ರಸ್ಟ್ಈ ಕಾತ್ಯಾಯಿನಿ ಚಾಮರಾಜ್ ಹೇಳುತ್ತಾರೆ.

ಒಳಚರಂಡಿ, ಕಾಲುವೆ ಹೂಳು, ಕಸ ತೆಗೆಯಲು 42 ಕೋಟಿ ವೆಚ್ಚ

ಒಳಚರಂಡಿ, ಕಾಲುವೆ ಹೂಳು, ಕಸ ತೆಗೆಯಲು 42 ಕೋಟಿ ವೆಚ್ಚ

ಬೆಂಗಳೂರಿನ 842 ಕಿ.ಮೀ ವ್ಯಾಪ್ತಿಯಲ್ಲಿನ ಒಳಚರಂಡಿಗಳಲ್ಲಿ ತುಂಬಿರುವ ಹೂಳು, ಕಸ ತೆಗೆಯಲು ಒಟ್ಟು 42 ಕೋಟಿ ರೂಗಳನ್ನು ವ್ಯಯಿಸುತ್ತಿರುವುದಾಗಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ. ಈಗಾಗಲೇ 440 ಕಿ,ಮೀ ವ್ಯಾಪ್ತಿಯಲ್ಲಿ ಬರುವ ಒಳಚರಂಡಿ, ಕಾಲುವೆಗಳಲ್ಲಿ ಸ್ವಚ್ಛತಾ ಕಾರ್ಯ ಪೂರ್ಣಗೊಂಡಿದೆ.

English summary
Here is the reasons behind Why Bengaluru is not Ready for rains. Plastic , thermocol and waste dumped in drains turned Thursdays showers into anightmare for commuters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X