• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಐಎಂಎ ಹಗರಣ: 25 ಕೆಜಿ ಚಿನ್ನ, 13 ಕೋಟಿ ಲಂಚ ಪಡೆದಿದ್ದ ಐಪಿಎಸ್ ಅಧಿಕಾರಿ

|

ಬೆಂಗಳೂರು, ಸೆಪ್ಟೆಂಬರ್ 25: ಬೆಂಗಳೂರು ಪೂರ್ವ ವಲಯದ ಉಪ ಪೊಲೀಸ್ ಆಯುಕ್ತರಾಗಿದ್ದ ಐಪಿಎಸ್ ಅಜೆಯ್ ಲಾಹೊರಿ ಅವರಿಗೆ ಬರೋಬ್ಬರಿ 25 ಕೆಜಿ ಚಿನ್ನ ಮತ್ತು 13 ಕೋಟಿ ಲಂಚ (ಮಾಮೂಲಿ) ನೀಡಲಾಗಿತ್ತು ಎಂದು ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.

ಬೇರೆ-ಬೇರೆ ಅಧಿಕಾರಿಗಳಿಗೆ ಪಾಲು ಕೊಡಬೇಕು ಎಂದು ಹೇಳಿ ಅಜಯ್ ಹಿಲೋರಿ ಅವರು ಒಟ್ಟು 25 ಕೆಜಿ ಚಿನ್ನ ತೆಗೆದುಕೊಂಡು ಹೋಗಿದ್ದಾರೆ. ಜೊತೆಗೆ ತಿಂಗಳಿಗೆ ಒಂದು ಕೋಟಿಯಂತೆ 13 ಕೋಟಿ ರೂಪಾಯಿ ಲಂಚ ವಸೂಲಿ ಮಾಡಿದ್ದಾರೆ ಎಂದು ಐಎಂಎ ಸಂಸ್ಥಾಪಕ ಮನ್ಸೂರ್ ಖಾವ್ ಸಿಬಿಐ ಮತ್ತು ಕರ್ನಾಟಕ ಪೊಲೀಸ್ ವಿಶೇಷ ತನಿಖಾ ದಳದ ಮುಂದೆ ಬಾಯಿಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಐಎಂಎ ಹಗರಣ: ರೋಷನ್ ಬೇಗ್ ಗೆ ರಾಜ್ಯಪಾಲ ವಜುಭಾಯಿ ರಕ್ಷಣೆ?

ಮನ್ಸೂರ್ ಖಾನ್ ಅವರ ಹೇಳಿಕೆಗಳನ್ನು ವಿಡಿಯೋ ದಾಖಲು ಮಾಡಿಕೊಳ್ಳಲಾಗಿದ್ದು, ಚಾರ್ಜ್‌ಶೀಟ್‌ನಲ್ಲಿ ದೊಡ್ಡ ದೊಡ್ಡ ಅಧಿಕಾರಿಗಳಿಗೆ ಲಂಚದ ಹಣ ನೀಡಲಾಗಿದೆ ಎಂದು ಉಲ್ಲೇಖ ಮಾಡಲಾಗಿದೆ.

ಆದರೆ ಮನ್ಸೂರ್ ಖಾನ್ ತಪ್ಪೊಪ್ಪಿಗೆಯನ್ನು ಅಲ್ಲಗಳೆದಿರುವ ಅಜೆಯ್ ಹಿಲೋರಿ, 'ನಾನು ಮನ್ಸೂರ್ ಖಾನ್‌ ನನ್ನು ಹಲವು ಭಾರಿ ಭೇಟಿ ಆಗಿರುವುದು ನಿಜ ಆದರೆ ನಾನು ಚಿನ್ನವನ್ನಾಗಲಿ, ಹಣವನ್ನಾಗಲಿ ಪಡೆದಿಲ್ಲ' ಎಂದು ಎಸ್‌ಐಟಿ ವಿಚಾರಣೆ ವೇಳೆ ಅಜೆಯ್ ಹಿಲೋರಿ ಹೇಳಿದ್ದರು.

ತಿಂಗಳಿಗೆ ಒಂದು ಕೋಟಿ ಒಬ್ಬ ಅಧಿಕಾರಿಗೆ!

ತಿಂಗಳಿಗೆ ಒಂದು ಕೋಟಿ ಒಬ್ಬ ಅಧಿಕಾರಿಗೆ!

ಮನ್ಸೂರ್ ಖಾನ್ ಹಣ ಹಾಗೂ ಚಿನ್ನವನ್ನು ಹಿಲೋರಿಗೆ ಯಾವ ಸಮಯದಲ್ಲಿ ನೀಡಿದನೆಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದರೆ ಆಗಾಗ್ಗೆ ಸುಮಾರು ಒಂದು ವರ್ಷ ಅವಧಿಯಲ್ಲಿ ಚಿನ್ನ ಮತ್ತು ಹಣವನ್ನು ನೀಡಲಾಗಿದೆ. ತಿಂಗಳಿಗೆ ಒಂದು ಕೋಟಿ ಕೇವಲ ಒಬ್ಬ ಅಧಿಕಾರಿಗೆ ಕೊಟ್ಟಿದ್ದಾರೆ ಮನ್ಸೂರ್ ಖಾನ್.

25 ಕೆ.ಜಿ ಚಿನ್ನದ ಪ್ರಸ್ತುತ ಬೆಲೆ 94.77 ಕೋಟಿ

25 ಕೆ.ಜಿ ಚಿನ್ನದ ಪ್ರಸ್ತುತ ಬೆಲೆ 94.77 ಕೋಟಿ

25 ಕೆ.ಜಿಯ ಚಿನ್ನದ ಬೆಲೆ ಈಗಿನ ಮಾರುಕಟ್ಟೆ ದರದಲ್ಲಿ ಬರೋಬ್ಬರಿ 94.77 ಕೋಟಿ ಆಗುತ್ತದೆ. ಅದರ ಜೊತೆಗೆ ತಿಂಗಳಿಗೆ ಒಂದರಂತೆ 13 ಕೋಟಿ ಲಂಚದ ಹಣ ಪ್ರತ್ಯೇಕ ಅಲ್ಲಿಗೆ ಸುಮಾರು 108 ಕೋಟಿ ಹಣವನ್ನು ಒಬ್ಬನೇ ಐಪಿಎಸ್ ಅಧಿಕಾರಿಗೆ ಮನ್ಸೂರ್ ಖಾನ್ ನೀಡಿದ್ದಾನೆ.

ವಿಜಯ್ ಶಂಕರ್, ಎಸಿ ನಾಗರಾಜು ಬಂಧನ

ವಿಜಯ್ ಶಂಕರ್, ಎಸಿ ನಾಗರಾಜು ಬಂಧನ

ಐಎಂಎ ಪ್ರಕರಣದಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳು ಭಾರಿ ಮೊತ್ತದ ಲಂಚ ಪಡೆದಿದ್ದಾರೆ ಎಂಬುದು ಈಗಾಗಲೇ ತನಿಖೆಯಿಂದ ಬಹಿರಂಗಗೊಂಡಿದೆ. ಐಎಎಸ್ ಅಧಿಕಾರಿ ಬಿ.ಎಂ.ವಿಜಯ್‌ಶಂಕರ್ ಅವರಿಗೆ 1 ಕೋಟಿ, ಉಪವಿಭಾಗಾಧಿಕಾರಿ ಎಲ್‌.ಸಿ ನಾಗರಾಜುಗೆ ನಾಲ್ಕು ಕೋಟಿ ಲಂಚ ನೀಡಿದ್ದಾಗ ಈ ಹಿಂದೆಯೇ ಮನ್ಸೂರ್ ಖಾನ್ ಹೇಳಿದ್ದ. ಅವರಿಬ್ಬರನ್ನೂ ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ.

ಜಮೀರ್, ರೋಶನ್ ಬೇಗ್ ವಿಚಾರಣೆ

ಜಮೀರ್, ರೋಶನ್ ಬೇಗ್ ವಿಚಾರಣೆ

ಇದರ ಜೊತೆಗೆ ಮತ್ತೊಬ್ಬ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರನ್ನು ಇದೇ ಪ್ರಕರಣದಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ. ಬಿಡಿಎಯ ಪ್ರಮುಖ ಅಧಿಕಾರಿಯೂ ಒಬ್ಬರನ್ನು ವಿಚಾರಣೆ ಮಾಡಲಾಗಿದೆ. ಇದನ್ನು ಹೊರತುಪಡಿಸಿ ಇನ್ನೂ ಹಲವು ಅಧಿಕಾರಿಗಳು ಪ್ರಕರಣದಲ್ಲಿ ಭಾಗಿ ಆಗಿರುವ ಶಂಕೆ ವ್ಯಕ್ತಪಡಿಸಲಾಗಿದೆ. ರಾಜಕಾರಣಿಗಳೂ ಪ್ರಕರಣದಲ್ಲಿ ಶಾಮೀಲಾಗಿರುವ ಅನುಮಾನವಿದ್ದು ರೋಷನ್ ಬೇಗ್, ಜಮೀರ್ ಅಹ್ಮದ್ ಅವರಂತಹಾ ರಾಜಕಾರಣಿಗಳನ್ನು ವಿಚಾರಣೆ ನಡೆಸಲಾಗಿದೆ.

ತನಿಖೆ ನಡೆಸುತ್ತಿರುವ ಸಿಬಿಐ

ತನಿಖೆ ನಡೆಸುತ್ತಿರುವ ಸಿಬಿಐ

ಹಲವು ರಾಜಕಾರಣಿಗಳು, ದೊಡ್ಡ ಅಧಿಕಾರಿಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಸೂಕ್ತ ದಾಖಲೆ ಕಲೆ ಹಾಕಿದ ನಂತರ ಎಲ್ಲರನ್ನೂ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಐಎಂಎ ಪ್ರಕರಣವನ್ನು ಪ್ರಸ್ತುತ ಸಿಬಿಐ ತನಿಖೆ ನಡೆಸುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
IMA case accused Mansoor Khan said in CBI custody that IPS officer Ajay Lihori took 25 KG gold and 13 crore rupees as bribe from him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more