Bengaluru Airport: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಕರೆ
ಬೆಂಗಳೂರು, ಮೇ20: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಕರೆಬಂದಿದ್ದು ಏರ್ ಪೋರ್ಟ್ ಪೊಲಸರು ತೀವ್ರ ತಪಾಸಣೆಯನ್ನು ನಡೆಸಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಾಂಬ್ ಇಡಲಾಗಿದೆ ಎಂದು ಕರೆ ಮಾಡಿ, ಕಾಲ್ ಕಟ್ ಮಾಡಿದ್ದ. ಇದರಿಂದಾಗಿ ಅಲರ್ಟ್ ಆಗಿರುವ ಪೊಲೀಸರು ವಿಮಾನ ನಿಲ್ದಾಣದಲ್ಲಿ ತೀವ್ರ ತಪಾಸಣೆಯನ್ನು ಮಾಡುತ್ತಿದ್ದಾರೆ.
ನಗರದ ಕಂಟ್ರೋಲ್ ರೂಮ್ಗೆ ಅಪರಿಚಿತ ವ್ಯಕ್ತಿ ಬೆಳಗಿನ ಜಾವ 3 ಗಂಟೆಗೆ ಕರೆಯನ್ನು ಮಾಡಿದ್ದ. ಈ ವಿಚಾರವನ್ನು ಏರ್ ಪೋರ್ಟ್ ಪೊಲೀಸರಿಗೆ ರವಾನಿಸಲಾಗಿತ್ತು. ಬಾಂಬ್ ನಿಷ್ಟ್ರಿಯ ದಳದೊಂದಿಗೆ ಪೊಲೀಸರು ಸತತ ಎರಡು ಗಂಟೆಗಳಿಂದ ತಪಾಸಣೆಯನ್ನು ನಡೆಸಿದ್ದಾರೆ. ಈ ವರೆಗೂ ಯಾವುದೇ ಬಾಂಬ್ ಪತ್ತೆಯಾಗಿಲ್ಲ.
ಬಹುಶಃ ಹುಸಿಬಾಂಬ್ ಕರೆ ಇರಬಹುದು ಎನ್ನಲಾಗಿದೆ. ಆದರೂ ಎಚ್ಚರ ತಪ್ಪದೇ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಚಿಂಚು ತಪಾಸಣೆಯನ್ನು ಮಾಡುತ್ತಿದ್ದಾರೆ.
ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿಯವರು "ಬಾಂಬ್ ಕರೆ ಬಂದಿದೆ ಇದರಿಂದಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆಯನ್ನು ಮಾಡುತ್ತಿದ್ದೇವೆ'' ಎಂದು ತಿಳಿಸಿದ್ದಾರೆ.