ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಮಕ್ಕಳಲ್ಲಿ ಹೆಚ್ಚಾದ ಉಸಿರಾಟ ತೊಂದರೆ, ಇದಕ್ಕೆ ಕಾರಣವೇನು?

|
Google Oneindia Kannada News

ಬೆಂಗಳೂರು, ಆಗಸ್ಟ್‌ 19: ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಮಳೆಗಾಲದಲ್ಲಿ ಮಕ್ಕಳು ಸಾಮಾನ್ಯವಾಗಿ ಉಸಿರಾಟದ ಸೋಂಕುಗಳಿಗೆ ಒಳಗಾಗುತ್ತಾರೆ. ಆದರೆ ಈ ವರ್ಷ ಸಂಖ್ಯೆಯು ತುಂಬಾ ಹೆಚ್ಚಾಗಿದೆ ಎಂದು ಬೆಂಗಳೂರು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಜ್ವರ, ಶೀತ, ಕೆಮ್ಮು ಮತ್ತು ಮೈ ಕೈ ನೋವಿನಿಂದ ಅನೇಕ ಮಕ್ಕಳು ಇದೇ ರೀತಿಯ ರೋಗಲಕ್ಷಣಗಳೊಂದಿಗೆ ಒಂದಾದ ಮೇಲೆ ಒಂದರಂತೆ ಸೋಂಕಿಗೆ ಒಳಗಾಗುತ್ತಿದ್ದಾರೆ. ಇದು ಬಹುಶಃ ಒಂದೇ ಮಗು ಅನೇಕ ವೈರಸ್‌ಗಳಿಂದ ಮರುಸೋಂಕಿಗೆ ಒಳಗಾಗುತ್ತಿರಬಹುದು. ಇನ್‌ಪ್ಲೂಯೆಂಜಾ ವೈರಸ್, ಅಡೆನೊ ವೈರಸ್, ಬೊಕಾ ವೈರಸ್, ಮೆಟಾಪ್ನ್ಯೂಮೋ ವೈರಸ್, ಇತ್ಯಾದಿ ಇವೆಲ್ಲವೂ ಒಂದೇ ರೀತಿಯ ರೋಗಲಕ್ಷಣಗಳನ್ನು ಉಂಟುಮಾಡುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ.

ಭಾರತದ ಕೊರೊನಾವೈರಸ್ ಸೋಂಕಿತರಲ್ಲಿ ಹೊಸ ಲಕ್ಷಣಗಳು ಪತ್ತೆ!ಭಾರತದ ಕೊರೊನಾವೈರಸ್ ಸೋಂಕಿತರಲ್ಲಿ ಹೊಸ ಲಕ್ಷಣಗಳು ಪತ್ತೆ!

ಈ ಬಗ್ಗೆ ಮಣಿಪಾಲ್ ಆಸ್ಪತ್ರೆಯ ಪೀಡಿಯಾಟ್ರಿಕ್ಸ್‌ನ ಎಚ್‌ಒಡಿ ಡಾ. ಭಾಸ್ಕರ್ ಶೆಣೈ ಮಾತನಾಡಿ, ''ಒಂದೇ ಮಗು ತಿಂಗಳಲ್ಲಿ ಮೂರರಿಂದ ನಾಲ್ಕು ಸೋಂಕುಗಳೊಂದಿಗೆ ಬಾಧಿಸಲ್ಪಡುತ್ತಿದೆ'' ಎಂದು ಹೇಳಿದರು. ಇದೇ ಬೌರಿಂಗ್ ಆಸ್ಪತ್ರೆಯ ವೈದ್ಯ ಶಿವಪ್ರಕಾಶ ಸೋಸಲೆ, ''ನಾನು ಒಂದೆರಡು ದಿನದ ಹಿಂದೆ ಸೋಂಕಿಗೆ ಚಿಕಿತ್ಸೆ ನೀಡಿದ್ದರೆ ಅದೇ ವ್ಯಕ್ತಿ 10 ದಿನಗಳ ನಂತರ ಇದೇ ಮಾದರಿಯ ರೋಗ ಲಕ್ಷಣಗಳೊಂದಿಗೆ ವಾಪಸ್‌ ಆಸ್ಪತ್ರೆಗೆ ಬರುತ್ತಿದ್ದಾರೆ'' ಎಂದು ಹೇಳಿದರು.

ಮಕ್ಕಳಲ್ಲಿ ಉಂಟಾಗುತ್ತಿರುವ ಈ ಸೋಂಕಿಗೆ ವೈದ್ಯರು ಎರಡು ಕಾರಣಗಳನ್ನು ಗುರುತಿಸಿದ್ದಾರೆ. ಒಂದು ಕಳೆದ ಎರಡೂವರೆ ವರ್ಷಗಳಲ್ಲಿ ಸಾಮಾನ್ಯ ವೈರಸ್‌ಗಳಿಗೆ ಒಗ್ಗಿಕೊಳ್ಳದ ಕಾರಣ ಈ ವರ್ಷ ಮಕ್ಕಳು ತುಲನಾತ್ಮಕವಾಗಿ ಕಡಿಮೆ ರೋಗನಿರೋಧಕತೆ ಹೊಂದಿದ್ದಾರೆ. ಎರಡನೆಯದಾಗಿ, ಶಾಲೆ ಪುನರಾರಂಭದೊಂದಿಗೆ ಹೆಚ್ಚಿನ ಮಕ್ಕಳು ಶಾಲೆಯಿಂದ ಸೋಂಕಿಗೆ ಒಳಗಾಗುತ್ತಿದ್ದಾರೆ ಎಂದು ಹೇಳಿದ್ದಾರೆ.

 ಅಂತಿಮವಾಗಿ ಎದೆಯುಬ್ಬಸಕ್ಕೆ ಕಾರಣ

ಅಂತಿಮವಾಗಿ ಎದೆಯುಬ್ಬಸಕ್ಕೆ ಕಾರಣ

''ಹೀಗಾಗಿ ಪುನರಾವರ್ತಿತ ಸೋಂಕುಗಳು ಉಸಿರಾಟದ ವ್ಯವಸ್ಥೆಯನ್ನು ಹಾನಿಗೊಳಿಸುವುದನ್ನು ಮುಂದುವರೆಸುತ್ತವೆ. ಇದು ಅಂತಿಮವಾಗಿ ಎದೆಯುಬ್ಬಸವನ್ನು ಉಂಟುಮಾಡುತ್ತದೆ. ನಮ್ಮ ಆಸ್ಪತ್ರೆಯಲ್ಲಿ ಮಕ್ಕಳು ಎದೆಉಬ್ಬಸ ಕಾರಣದಿಂದ ದಾಖಲಾಗುತ್ತಿದ್ದಾರೆ. ಇದನ್ನು ಆಂಟಿ ವ್ಹೀಜಿಂಗ್ ಔಷಧಿಗಳ ಮೂಲಕ ಚಿಕಿತ್ಸೆ ನೀಡಬಹುದು. ನಮ್ಮ ಆಸ್ಪತ್ರೆಯಲ್ಲಿ ಮಾಡಿದ ಪರೀಕ್ಷೆಗಳ ಪ್ರಕಾರ, ಸುಮಾರು 80% ಪ್ರಕರಣಗಳು ಇನ್‌ಪ್ಲೂಯೆನ್ಸ್‌ ವೈರಸ್‌ಗಳಿಂದ ಉಂಟಾಗುತ್ತವೆ'' ಎಂದು ಸ್ಪರ್ಶ್ ಆಸ್ಪತ್ರೆಯ ಹಿರಿಯ ಸಲಹೆಗಾರ ಡಾ ರವಿಶಂಕರ್ ಹೇಳಿದ್ದಾರೆ ಎಂದು ಡಿಎಚ್‌ ವರದಿ ಮಾಡಿದೆ.

ವೈರಲ್ ಸೋಂಕು ಹೆಚ್ಚಳ, ನಾಲ್ಕು ದಿನಗಳಲ್ಲಿ 150 ಮಕ್ಕಳ ದುರ್ಮರಣವೈರಲ್ ಸೋಂಕು ಹೆಚ್ಚಳ, ನಾಲ್ಕು ದಿನಗಳಲ್ಲಿ 150 ಮಕ್ಕಳ ದುರ್ಮರಣ

 ಒಂದು ತಿಂಗಳಿನಿಂದ ಐಸಿಯು ಫುಲ್

ಒಂದು ತಿಂಗಳಿನಿಂದ ಐಸಿಯು ಫುಲ್

ಡಾ. ಶಿವಪ್ರಕಾಶ ಸೋಸಲೆ, ಬೌರಿಂಗ್ ಆಸ್ಪತ್ರೆಯಲ್ಲಿ ವೈರಲ್ ಸೋಂಕಿನೊಂದಿಗೆ ಬರುವ 10 ರಿಂದ 15% ಮಕ್ಕಳು ನಿಮೋನಿಯಾಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾದ ಸೋಂಕಿಗೆ ಒಳಗಾದವರು. ಆಸ್ಪತ್ರೆಯ ಪೀಡಿಯಾಟ್ರಿಕ್ ಐಸಿಯು ಈಗ ಸುಮಾರು ಒಂದು ತಿಂಗಳಿನಿಂದ ತುಂಬಿದೆ. ಗರಿಷ್ಠ ಸಂಖ್ಯೆಯ ಪ್ರಕರಣಗಳು ನ್ಯುಮೋನಿಯಾ ಮತ್ತು ಎದೆ ಉಬ್ಬಸದಿಂದ ಕೂಡಿದೆ ಎಂದು ಅವರು ಹೇಳಿದ್ದಾರೆ.

 ಎರಡರಿಂದ ಐದು ದಿನಗಳವರೆಗೆ ಸೋಂಕು

ಎರಡರಿಂದ ಐದು ದಿನಗಳವರೆಗೆ ಸೋಂಕು

ಈ ವರ್ಷ ಸೋಂಕುಗಳ ಅವಧಿಯು ಹೆಚ್ಚು ಎಂದು ವೈದ್ಯರು ಹೇಳಿದ್ದಾರೆ. ಈ ಸೋಂಕುಗಳು ಸಾಮಾನ್ಯವಾಗಿ ಎರಡರಿಂದ ಐದು ದಿನಗಳವರೆಗೆ ಇರುತ್ತದೆ, ಆದರೆ ಈಗ ಮಕ್ಕಳು ಚೇತರಿಸಿಕೊಳ್ಳಲು ಐದರಿಂದ ಹತ್ತು ದಿನಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಕೆಮ್ಮಿನ ಲಕ್ಷಣಗಳು ಹೆಚ್ಚು ಕಾಲ ಉಳಿಯಬಹುದು. ಇನ್ನೊಂದು ಕಳವಳವೆಂದರೆ ಮಕ್ಕಳು ಮನೆಯಲ್ಲಿಯೇ ದುರ್ಬಲ ಆರೋಗ್ಯದ ಜನರಿಗೆ ಸೋಂಕುಗಳನ್ನು ಹರಡಬಹುದು ಎಂದು ಬೆಂಗಳೂರು ವಿಭಾಗದ ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್‌ನ ಅಧ್ಯಕ್ಷ ಡಾ.ಜಿ.ವಿ.ಬಸವರಾಜ ಹೇಳಿದ್ದಾರೆ.

 ಮಕ್ಕಳು ಸೋಂಕನ್ನು ಇತರರಿಗೆ ಹರಡಬಹುದು

ಮಕ್ಕಳು ಸೋಂಕನ್ನು ಇತರರಿಗೆ ಹರಡಬಹುದು

ಶೀತದಂತಹ ಸೌಮ್ಯ ಸೋಂಕುಗಳು ಕಾಣಿಸಿಕೊಂಡರೂ ಪೋಷಕರು ಮಕ್ಕಳನ್ನು ಶಾಲೆಯಿಂದ ದೂರವಿಡಬೇಕೆಂದು ವೈದ್ಯರು ಶಿಫಾರಸು ಮಾಡಿದ್ದಾರೆ. ಮಗುವು ಸ್ವಲ್ಪ ಚೆನ್ನಾಗಿ ಕಾಣಿಸಿಕೊಂಡರೂ ಸಹ, ಅವನು ಅಥವಾ ಅವಳು ಸೋಂಕನ್ನು ಇತರರಿಗೆ ಹರಡಬಹುದು. ಮಕ್ಕಳು ಶಾಲೆಯಲ್ಲಿ ಕೋವಿಡ್ ಸೂಕ್ತ ನಡವಳಿ ಮತ್ತು ಉತ್ತಮ ನೈರ್ಮಲ್ಯತೆ ಅನುಸರಿಸಿದರೆ ಇತರ ಸೋಂಕುಗಳಿಂದ ಪರಾರಿಯಾಗಲು ಸಹಾಯ ಮಾಡುತ್ತದೆ. ಇದಕ್ಕೆ ಪರಿಹಾರವಾಗಿ ಉತ್ತಮ ಪೌಷ್ಠಿಕಾಂಶವು ಈ ಸೋಂಕುಗಳ ವಿರುದ್ಧ ಮಕ್ಕಳಲ್ಲಿ ಅಂತರ್ಗತ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಡಾ.ಬಸವರಾಜ ಹೇಳಿದ್ದಾರೆ.

Recommended Video

ಹೊಸ ಆಫರ್ : 10 ಮಕ್ಕಳ ಹೆತ್ತರೆ 13 ಲಕ್ಷ ಕೊಡ್ತಾರೆ | OneIndia Kannada

English summary
Children are more prone to respiratory infections during the rainy season from June to September. But Bengaluru doctors feel that the number is much higher this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X