ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಐಎಸ್‌ಸಿ ವಿದ್ಯಾರ್ಥಿನಿ ಮೇಲೆ ದೌರ್ಜನ್ಯ, ಸೆಕ್ಯುರಿಟಿ ಗಾರ್ಡ್ ಬಂಧನ

By Mahesh
|
Google Oneindia Kannada News

ಬೆಂಗಳೂರು, ಸೆ. 19: ವಿಶ್ವಖ್ಯಾತಿಯ ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಘಟನೆ ನಡೆದಿದೆ.

22 ವರ್ಷ ವಯಸ್ಸಿನ ಪದವಿ ಪೂರ್ವ ವಿದ್ಯಾರ್ಥಿನಿ ಮೇಲೆ ಐಐಎಸ್ಸಿ ಕ್ಯಾಂಪಸಿನಲ್ಲಿ ಲೈಂಗಿಕ ಕಿರುಕುಳ ನೀಡಿದ್ದ ಸೆಕ್ಯುರಿಟಿ ಗಾರ್ಡ್ ಗೌತಮ್ ರಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸದಾಶಿವನಗರ ಪೊಲೀಸ್ ಠಾಣೆ ಪೊಲೀಸರು ಲೈಂಗಿಕ ದೌರ್ಜನ್ಯ (ಐಪಿಸಿ 354) ಆರೋಪದಡಿ ಎಫ್ಐಆರ್ ದಾಖಲಿಸಿದ್ದಾರೆ.

Bengaluru IISc: security guard held on sexual harassment charge

ಸೆಪ್ಟೆಂಬರ್‌ 14ರಂದು ವಿದ್ಯಾರ್ಥಿನಿಯು ಗ್ರಂಥಾಲಯಕ್ಕೆ ಹೋಗಿದ್ದ ವೇಳೆ ಆರೋಪಿಯು ಈ ಕೃತ್ಯ ಎಸಗಿದ್ದಾನೆ. ಗ್ರಂಥಾಲಯದಿಂದ ಹೊರಕ್ಕೆ ಕರೆ ತಂದು ಮೈಕೈ ಮುಟ್ಟಿ, ಬಲವಂತವಾಗಿ ಮುತ್ತು ನೀಡಲು ಯತ್ನಿಸಿದ್ದಾನೆ.

ಆತನನ್ನು ದೂಡಿ ಅಲ್ಲಿಂದ ಹಾಸ್ಟೆಲ್ ಗೆ ವಿದ್ಯಾರ್ಥಿನಿ ಓಡಿ ಹೋಗಿದ್ದಾಳೆ. ವಿದ್ಯಾರ್ಥಿನಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಕೋರ್ಟಿಗೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದೇವೆ' ಎಂದು ಪೊಲೀಸರು ತಿಳಿಸಿದರು.

ಇತ್ತ ಐಐಎಸ್‌ಸಿ ಆಡಳಿತ ಮಂಡಳಿಯು ಗೌತಮ್ ರಾಜ್‌ನನ್ನು ನೌಕರಿಯಿಂದ ವಜಾ ಮಾಡಿ, ಆಂತರಿಕ ತನಿಖೆಗೆ ಆದೇಶಿಸಿದೆ. ಕಳೆದ ನಾಲ್ಕು ವರ್ಷಗಳಿಂದ ಭದ್ರತಾ ಸಿಬ್ಬಂದಿಯಾಗಿ ಗೌತಮ್ ರಾಜ್ ಕಾರ್ಯನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ.

English summary
Bengaluru: A security guard arrested on the charge of sexually harassing an undergraduate student at the Indian Institute of Science (IISc.) on Wednesday night, had been working on the campus since 2004.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X