ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಸೆಂಬರ್ 25 ರಂದು ಬೆಂಗಳೂರಲ್ಲಿ ನಕ್ಕರೆ ಅದೇ ಸ್ವರ್ಗ

|
Google Oneindia Kannada News

ಬೆಂಗಳೂರು, ಡಿಸೆಂಬರ್, 23: ಬೆಂಗಳೂರಿನ ಜನರಿಗೆ ವರ್ಷಾಂತ್ಯಕ್ಕೆ ನಗುವಿನ ಹಬ್ಬ. ಕ್ರಿಸ್ ಮಸ್‌ ಹಬ್ಬದ ರಜಾ ದಿನವನ್ನು ನಗುವಿನ ಸ್ವರ್ಗದಲ್ಲಿ ಕಳೆಯಬಹುದು. ನೀವೂ ಬನ್ನಿ ನಿಮ್ಮವರನ್ನು ಕರೆತನ್ನಿ....

ಡಿಸೆಂಬರ್ 25ರ ಶುಕ್ರವಾರ ಬೆಳಗ್ಗೆಯಿಂದ ಸಂಜೆವರೆಗೆ ನಗುವಿನ ರಸದೌತಣ ಸವಿಯಲು ಜಯನಗರದ ನ್ಯಾಶನಲ್ ಕಾಲೇಜಿನ ಎಚ್ ಎನ್ ಕಲಾಕ್ಷೇತ್ರಕ್ಕೆ ಭೇಟಿ ನೀಡಲೇಬೇಕು. ಚುಟುಕು ಕವಿ ದಿನಕರ ದೇಸಾಯಿ ಅವರ ಸಂಸ್ಮರಣೆ ನಿಮಿತ್ತ ಅಕಾಡೆಮಿ ಆಫ್ ಹ್ಯೂಮರ್ 'ಹಾಸ್ಯೋತ್ಸವ-2015' ನ್ನು ಆಯೋಜಿಸಿದೆ.[ಆಯುಧ ಪೂಜೆ ಕುಂಬ್ಳಕಾಯಿ ತಲೆ ಮೇಲೆ ಒಡೆದಂಗಾಯ್ತ]

humor

ಪ್ರಜಾವಾಣಿ, ಉಪಕಾರ್ ಹೌಸಿಂಗ್ ಡೆವಲಪ್ ಮೆಂಟ್ ಕಾರ್ಪೋರೇಷನ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ನಿರ್ಮಾಣ ಶೆಲ್ಟರ್ಸ್ ಸಹಕಾರದಲ್ಲಿ ಕಾರ್ಯಕ್ರಮ ನಡೆಯಲಿದೆ.[ಲಗ್ನ ಪತ್ರಿಕೇಲಿ (ಎಂಎ) ಅಂತ ಬರೆಸಿಕೊಳ್ಳೋಣ ಅಂತಿದ್ದೆ!]

ಬೇಲೂರು ರಾಮಮೂರ್ತಿ ಮತ್ತು ವೈ ವಿ ಗುಂಡೂರಾವ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು ಹಿರಿಯ ಹಾಸ್ಯ ಲೇಖಕ ಬಿ ಎಸ್ ಕೇಶವರಾವ್ ಅವರಿಗೆ ಅಭಿನಂದನೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ನ್ಯಾಷನಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಎ ಎಚ್ ರಾಮರಾವ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಶ್ರಾಂತ ನಿರ್ದೇಶಕ ಮನು ಬಳಿಗಾರ್ ಭಾಗವಹಿಸಲಿದ್ದಾರೆ.

humor

ಹಾಸ್ಯ ಕಲಾವಿದರ ದಂಡೇ ಇದೆ
ಚುಟುಕು ಕವಿ ಡುಂಡಿರಾಜ್, ರಿಚರ್ಡ್ ಲೂಯಿಸ್, ಗಂಗಾವತಿ ಪ್ರಾಣೇಶ್, ಬಸವರಾಜ ಮಹಾಮನಿ, ವೈ ವಿ ಗುಂಡೂರಾವ್, ಬೇಲೂರು ರಾಮಮೂರ್ತಿ, ಎನ್ ರಾಮನಾರ್ಥ, ಎಂ ಆರ್ ಸುಬ್ಬರಾವ್ ಮತ್ತು ಗಾನವಿನೋದಿನಿ ತಂಡದ ಸದಸ್ಯರು ಕಾರ್ಯಕ್ರಮ ನಡೆಸಿಕೊಡಲಿದ್ದು ಎಚ್ ಎನ್ ಆನಂದ್ ನಿರ್ವಹಣೆ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

English summary
Rib chilling laughter awaits Bengalurians. Prominent humorists promise Dawn to dusk gig in annual humor festival at H N Kalakshtra, Jayanagar National College auditorium on 25 th December. Come and lets laugh. You know, laughter is the best medicine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X