ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈರಲ್ ವಿಡಿಯೋ : ಸಿಎಂ, ಡಿಸಿಎಂ ವಿರುದ್ಧ ಹುಚ್ಚ ವೆಂಕಟ್ ಗರಂ!

|
Google Oneindia Kannada News

ಬೆಂಗಳೂರು, ಜುಲೈ 17: 'ನನ್ ಮಗಂದ್...' ಎನ್ನುತ್ತ ಎಂದಿನ ತಮ್ಮ 'ಯೂನಿಕ್' ಶೈಲಿಯಲ್ಲೇ ಮಾತು ಆರಂಭಿಸಿದ ಹುಚ್ಚಾ ವೆಂಕಟ್ ಅವರ ಹೊಸ ವಿಡಿಯೋ ಫೇಸ್ ಬುಕ್ ನಲ್ಲಿ ವೈರಲ್ ಆಗಿದೆ!

ಈ ಬಾರಿ ಹುಚ್ಚ ವೆಂಕಟ್ ಕಣ್ಣು ಬಿದ್ದಿರುವುದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರ ಮೇಲೆ!

ಈ ವಿಡಿಯೋದಲ್ಲಿ ಪೌರ ಕಾರ್ಮಿಕರಿಗೆ ಕಳೆದ ಹಲವು ತಿಂಗಳುಗಳಿಂದ ಸಂಬಳ ನೀಡದ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತಕ್ಷಣವೇ ಪೌರಕಾರ್ಮಿಕರನ್ನು ಸರ್ಕಾರಿ ನೌಕರರನ್ನಾಗಿ ನೇಮಿಸಿಕೊಂಡು, ಅವರಿಗೆ ಸಂಬಳ ನೀಡುವ ಕೆಲಸ ಮಾಡಿ ಎಂದು ಸಿಎಂ, ಡಿಸಿಎಂ ಗೆ 'ಆರ್ಡರ್' ಮಾಡಿದ್ದಾರೆ.

ನೀವೇ ನನ್ನನ್ನು ಹುಡುಕಿಕೊಂಡು ಬರ್ತೀರಿ ಅಂದ್ರು ಹುಚ್ಚ ವೆಂಕಟ್!ನೀವೇ ನನ್ನನ್ನು ಹುಡುಕಿಕೊಂಡು ಬರ್ತೀರಿ ಅಂದ್ರು ಹುಚ್ಚ ವೆಂಕಟ್!

ಬಿಗ್ ಬಾಸ್ ಖ್ಯಾತಿಯ ಹುಚ್ಚಾ ವೆಂಕಟ್, 2018 ರ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಿಂತು, ಸೋತಿದ್ದರು.

ಪೌರ ಕಾರ್ಮಿಕರಿಗೆ ವೇತನ ನೀಡದ ಕಾರಣಕ್ಕೆ ಇತ್ತೀಚೆಗಷ್ಟೆ ಸುಬ್ರಮಣಿ ಎಂಬ ಪೌರ ಕಾರ್ಮಿಕ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಹುಚ್ಚಾ ವೆಂಕಟ್ ಸರ್ಕಾರವನ್ನು ಈ ರೀತಿ ತರಾಟೆಗೆ ತೆಗೆದುಕೊಂಡಿದ್ದಾರೆ.

ನನ್ ಮಗಂದ್, ಯಾವ್ನಾದ್ರೂ ನಂಗೇ ಮತ ಹಾಕ್ಲಿಲ್ಲಾ ಅಂದ್ರೆ! ನನ್ ಮಗಂದ್, ಯಾವ್ನಾದ್ರೂ ನಂಗೇ ಮತ ಹಾಕ್ಲಿಲ್ಲಾ ಅಂದ್ರೆ!

ಅಷ್ಟಕ್ಕೂ ಹುಚ್ಚಾ ವೆಂಕಟ್ ವಿಡಿಯೋದಲ್ಲಿ ಏನಿದೆ? ಅವರ ಭಾಷೇಲೇ ಕೇಳಿ...

ಜನರಿಂದ ನೀವಾ? ನಿಮ್ಮಿಂದ ಜನರಾ?

"ಪೌರ ಕಾರ್ಮಿಕರನ್ನ ಖಾಸಗಿಯವರಿಗೆ ಮಾರಿದ್ರಿ. ನಿಮಗೆ ಆ ಧಿಕಾರ ಕೊಟ್ಟಿದ್ದು ಯಾರು? ನೀವು ಜನರಿಂದ ಅಧಿಕಾರಕ್ಕೆ ಬಂದವರು. ಪ್ರತಿ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗಲೂ ಜನರ ಅನುಮತಿ ಕೇಳಬೇಕು? ಕೇಳಿದ್ದೀರಾ? ಜನರಿಂದ ನೀವಾ? ಅಥವಾ ನಿಮ್ಮಿಂದ ಜನರಾ?!"

ವಿಧಾನಸೌಧಾನೂ ಮಾರ್ತೀರಾ!

ವಿಧಾನಸೌಧಾನೂ ಮಾರ್ತೀರಾ!

"ಪೌರ ಕಾರ್ಮಿಕರನ್ನ ಖಾಸಗಿಯವರಿಗೆ ಮಾರಿದ್ರಿ. ರಸ್ತೆ ಮಾರಿದ್ರಿ, ಕೆಇಬಿನಾ ಬೆಸ್ಕಾಂ ಮಾಡಿದ್ರಿ. ಆಗೆಲ್ಲ ಜನರ ಅನುಮತಿ ಕೇಳಿದ್ರಾ? ನಾಳೆ ನಮಗೇ ಗೊತ್ತಿಲ್ದೇ ವಿಧಾನಸೌಧಾನೂ ಮಾರ್ತೀರಾ. ಎಲ್ಲಾನೂ ಖಾಸಗಿಯವರಿಗೆ ಮಾರ್ಬಿಟ್ರೇ ಕೇವಲ ಕಂಪನಿಗಳಿರತ್ತೆ. ರಾಜಕಾರಣಿಗಳೂ ಇರಲ್ಲ, ವಿಧಾನಸೌಧಾನೂ ಇರಲ್ಲ"

ಒಬ್ಬ ಪೌರ ಕಾರ್ಮಿಕನ ಬೆಲೆ ಗೊತ್ತಾ?

ಒಬ್ಬ ಪೌರ ಕಾರ್ಮಿಕನ ಬೆಲೆ ಗೊತ್ತಾ?

"ಒಬ್ಬ ಪೌರ ಕಾರ್ಮಿಕನ ಬೆಲೆ ಗೊತ್ತಾ? ಯಾವತ್ತಾದ್ರೂ ಕಸ ಗುಡ್ಸಿದೀರಾ? ಒಬ್ಬ ಪೌರ ಕಾರ್ಮಿಕ ಸತ್ತರೆ ಹತ್ತು ಲಕ್ಷ ರೂ.ಪರಿಹಾರ ಅಂತೀರಾ. ಅದು ನನ್ನ ಎಕ್ಕಡಕ್ಕೆ ಸಮಾನ! ಬದುಕಿದ್ದಾಗ ಒಂದು ರುಪಾಯಿ ಕೊಟ್ರೂ ಅದಕ್ಕೆ ಬೆಲೆ ಇರುತ್ತೆ. ಸತ್ತ ಮೇಲೆ ಕೋಟಿ ಕೊಟ್ರೂ ಏನು ಪ್ರಯೋಜನ?"

ಸಿಎಂ, ನಿಮ್ಮ ಬೆಲೆ ಎಷ್ಟು ಹೇಳಿ?!

ಸಿಎಂ, ನಿಮ್ಮ ಬೆಲೆ ಎಷ್ಟು ಹೇಳಿ?!

"ಪೌರ ಕಾರ್ಮಿಕ ಕೇಳಿದ್ದು ಅವನ ಬೆವರಿನ ದುಡ್ಡನ್ನ. ಅನ್ಯಾಯದ ದುಡ್ಡನ್ನಲ್ಲ. ಖಾಸಗಿಯವರಿಗೆ ಮಾರದೆ ಇದ್ದಿದ್ರೆ ಸರ್ಕಾರ ಸಂಬಳ ಕೊಟ್ಟೇ ಕೊಡ್ತಿತ್ತು ಅಲ್ವಾ? ಎಲ್ಲಾ ಖಾಸಗಿಯವರಿಗೆ ಮಾರ್ಬಿಡಿ? ನಿಮ್ಮನ್ನೂ ಮಾರ್ಕೊಳಿ. ಸಿಎಂ ಅವರೇ ನಿಮ್ಮ ಬೆಲೆ ಎಷ್ಟು? ಡಿಸಿಎಂ ಬೆಲೆ ಎಷ್ಟು ಹೇಳಿ? ನಾನೇ ಕೊಂಡ್ಕೋತೀನಿ! ಆದ್ರೆ ಮನುಷ್ಯನಿಗೆ ಬೆಲೆ ಕಟ್ಟೋಕಾಗುತ್ತಾ? ಕುಕ್ಕರ್ ಕೊಟ್ಟು ಮನುಷ್ಯನ ಬೆಲೆ ನಿರ್ಧರಿಸ್ತೀರಾ?"

ಹುಚ್ಚಾ ವೆಂಕಟ್ ಲಾಸ್ಟ್ ವಾರ್ನಿಂಗ್

ಹುಚ್ಚಾ ವೆಂಕಟ್ ಲಾಸ್ಟ್ ವಾರ್ನಿಂಗ್

"ಇದು ನನ್ನ ಲಾಸ್ಟ್ ವಾರ್ನಿಂಗ್ ಜನರ ಪರ್ಮಿಷನ್ ಇಲ್ದೆ ನೀವು ಏನನ್ನೂ ಮಾಡೋ ಹಾಗಿಲ್ಲ, ಮಾರೋ ಹಾಗಿಲ್ಲ. ಎಲ್ಲಾ ಪೌರ ಕಾರ್ಮಿಕರನ್ನು ಸರ್ಕಾರಿ ನೌಕರರನ್ನಾಗಿ ತಗೋಳಿ. ಸಿಎಂ., ಡಿಸಿಎಂ ಗೂ ಸಂಬಳ ಬರುತ್ತೆ. ನೀವು ಸಂಬಳ ತಗೊಂಡು ನಿಮ್ಮ ಭಾರವನ್ನ ಜನರ ಮೇಲೆ ಹಾಕಿ ಎಸ್ಕೇಪ್ ಆಗ್ತಿದ್ದೀರಾ. ಮೊದಲು ಖಾಸಗಿಯವರನ್ನು ಬಿಟ್ಟು, ಪೌರ ಕಾರ್ಮಿಕರನ್ನು ಸರ್ಕಾರದ ನೌಕರರನ್ನಾಗಿ ಮಾಡಿ. ಒಬ್ಬ ಪ್ರಜೆಯಾಗಿ ಇದು ನನ್ನ ಆರ್ಡರ್!"

English summary
Bengaluru: Kannada actor Huccha Venkat's new video goes viral on social media. In this video he blaes CM HD Kumaraswamy and DCM G Parameshwar for not giving salary for Poura Karmikas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X