• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು-ಹುಬ್ಬಳ್ಳಿ ರೈಲಿಗೆ ಚಾಲನೆ ಕೊಟ್ಟ ಕೊರೊನಾ ವಾರಿಯರ್ಸ್

|

ಬೆಂಗಳೂರು, ಜೂನ್ 01 : ಭಾರತದಲ್ಲಿ ಸೋಮವಾರದಿಂದ ರೈಲುಗಳು ಸಂಚಾರ ಆರಂಭವಾಗಿದೆ. ಬೆಂಗಳೂರು-ಹುಬ್ಬಳ್ಳಿ ನಡುವಿನ ಜನಶತಾಬ್ದಿ ರೈಲಿಗೆ ಕೊರೊನಾ ವಾರಿಯರ್ಸ್ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಲಾಕ್ ಡೌನ್ ಬಳಿಕ ಸ್ಥಗಿತಗೊಂಡಿದ್ದ ರೈಲು ಸೇವೆ ದೇಶದಲ್ಲಿ ಇಂದಿನಿಂದ ಆರಂಭವಾಗಿದೆ. ಸೋಮವಾರ ಬೆಳಗ್ಗೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಜನಶತಾಬ್ದಿ ರೈಲು ಸಂಚಾರವನ್ನು ಆರಂಭಿಸಿತು. ದೇಶದಲ್ಲಿ ಇಂದು ಒಟ್ಟು 200 ವಿಶೇಷ ರೈಲು ಸಂಚಾರ ನಡೆಸಲಿದೆ.

ಗಂಗಾವತಿ-ಕಾರಟಗಿ ರೈಲು; ಶೀಘ್ರದಲ್ಲೇ ಸಂಚಾರ ಆರಂಭ

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ನಿಲ್ದಾಣದ ಸ್ವಚ್ಛತಾ ಸಿಬ್ಬಂದಿ ಎಸ್. ಇಂದ್ರಾ ಬೆಂಗಳೂರು-ಹುಬ್ಬಳ್ಳಿ ಜನಶತಾಬ್ದಿ ರೈಲಿಗೆ ಹಸಿರು ನಿಶಾನೆ ತೋರಿಸಿದರು. ಪಾಯಿಂಟ್ ಮೆನ್ ವಿಠಲ ಪಾಟೀಲ್ ಸಹ ಜೊತೆಗಿದ್ದರು.

50 ಲಕ್ಷ ವಲಸೆ ಕಾರ್ಮಿಕರನ್ನು 'ಗೂಡು' ಮುಟ್ಟಿಸಿದ ಶ್ರಮಿಕ್ ರೈಲು!

ಲಾಕ್ ಡೌನ್ ಪರಿಣಾಮ ಮಾರ್ಚ್‌ನಿಂದ ದೇಶಾದ್ಯಂತ ರೈಲು ಸೇವೆ ಸ್ಥಗಿತಗೊಂಡಿತ್ತು. ಕೆಲವು ದಿನಗಳ ಹಿಂದೆ ಆಯ್ದ ಕೆಲವು ಮಾರ್ಗದಲ್ಲಿ ರೈಲುಗಳ ಸಂಚಾರ ಆರಂಭಿಸಲಾಗಿತ್ತು. ಸೋಮವಾರ ದೇಶದಲ್ಲಿ 200 ರೈಲುಗಳ ಸಂಚಾರಕ್ಕೆ ಇಲಾಖೆ ಒಪ್ಪಿಗೆ ನೀಡಿದೆ.

ರೈಲು ಪ್ರಯಾಣ ದರದಲ್ಲಿ ಬದಲಾವಣೆ ಮಾಡುವುದಿಲ್ಲ

ಇಂದು ಒಂದೇ ದಿನ ದೇಶಾದ್ಯಂತ 1.45 ಲಕ್ಷ ಪ್ರಯಾಣಿಕರು ರೈಲಿನಲ್ಲಿ ಸಂಚಾರ ನಡೆಸಲಿದ್ದಾರೆ ಎಂದು ರೈಲ್ವೆ ಇಲಾಖೆ ಅಂದಾಜಿಸಿದೆ. ಜೂನ್ ತಿಂಗಳಿನಲ್ಲಿ ಪ್ರಯಾಣ ಮಾಡಲು 26 ಲಕ್ಷ ಟಿಕೆಟ್‌ಗಳು ಈಗಾಗಲೇ ಬುಕ್ ಆಗಿವೆ. ಪ್ರಯಾಣದ ವೇಳೆ ಜನರು ಕೆಲವು ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕಿದೆ.

ರೈಲು ಸೇವೆ ಸ್ಥಗಿತಗೊಂಡಿದ್ದರೂ ವಿವಿಧ ರಾಜ್ಯದಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರಿಗಾಗಿ ಶ್ರಮಿಕ್ ವಿಶೇಷ ರೈಲುಗಳನ್ನು ರೈಲ್ವೆ ಇಲಾಖೆ ಓಡಿಸಿತ್ತು. ಸುಮಾರು 3 ಸಾವಿರ ಶ್ರಮಿಕ್ ವಿಶೇಷ ರೈಲುಗಳು ಸಂಚಾರ ನಡೆಸಿದ್ದು 50 ಲಕ್ಷದಷ್ಟು ಕಾರ್ಮಿಕರು ತವರು ರಾಜ್ಯ ಸೇರಿದ್ದಾರೆ.

English summary
Bengaluru Hubballi janshatabdhi train flagged off by corona warriors in Bengaluru on June 1, 2020. First special train service after lockdown flagged off by contract cleaning staff S.Indra and pointsman Vithal Patil at KSR Bengaluru station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X