ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

LPG: ವಾಣಿಜ್ಯ ಎಲ್‌ಪಿಜಿ ಮೇಲಿನ ಜಿಎಸ್‌ಟಿ ಕಡಿತ ಮಾಡುವಂತೆ ಬೆಂಗಳೂರು ಹೋಟೇಲ್‌ ಮಾಲೀಕರ ಆಗ್ರಹ

ಬೃಹತ್ ಬೆಂಗಳೂರು ಹೊಟೇಲ್ ಮಾಲೀಕರ ಸಂಘ (ಬಿಬಿಎಚ್‌ಎ) ಆಯೋಜಿಸಿದ್ದ ಜಂಟಿ ಸಭೆಯಲ್ಲಿ ವಾಣಿಜ್ಯ ಸಿಲಿಂಡರ್‌ ಮೇಲಿನ ಜಿಎಸ್‌ಟಿ ಕಡಿತಕ್ಕೆ ಆಗ್ರಹಿಸಿದ್ದಾರೆ.

|
Google Oneindia Kannada News

ಬೆಂಗಳೂರು, ಫೆಬ್ರವರಿ 2: ಗೃಹಬಳಕೆಯ ಸಿಲಿಂಡರ್‌ಗಳ ಮೇಲಿನ ಜಿಎಸ್‌ಟಿಗೆ ಅನುಗುಣವಾಗಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಮೇಲಿನ ಜಿಎಸ್‌ಟಿಯನ್ನು ಕಡಿಮೆ ಮಾಡಬೇಕೆಂಬ ಬೇಡಿಕೆಯೊಂದಿಗೆ ನಗರದ ಹೋಟೆಲ್ ಮಾಲೀಕರು ಕೇಂದ್ರ ಸರ್ಕಾರವನ್ನು ಸಂಪರ್ಕಿಸಲು ಮುಂದಾಗಿದ್ದಾರೆ.

ಬೃಹತ್ ಬೆಂಗಳೂರು ಹೊಟೇಲ್ ಮಾಲೀಕರ ಸಂಘ (ಬಿಬಿಎಚ್‌ಎ) ಆಯೋಜಿಸಿದ್ದ ಜಂಟಿ ಸಭೆಯಲ್ಲಿ ಭಾರತೀಯ ರಾಷ್ಟ್ರೀಯ ರೆಸ್ಟೋರೆಂಟ್ ಅಸೋಸಿಯೇಷನ್, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಮತ್ತು ಆತಿಥ್ಯ ವಲಯದ ಇತರ ಸಂಸ್ಥೆಗಳ ಪ್ರತಿನಿಧಿಗಳು ಬೆಲೆ ಏರಿಕೆ ಜಿಎಸ್‌ಟಿ ನಿಯಮಗಳ ಕ್ರಮಕ್ಕೆ ವಿರುದ್ಧವಾಗಿದೆ ಎಂದು ಸೂಚಿಸಿದರು. .

LPG price hike: ಕೇಂದ್ರದ ಹೊಸ ವರ್ಷದ ಉಡುಗೊರೆ ಎಂದ ಕಾಂಗ್ರೆಸ್‌LPG price hike: ಕೇಂದ್ರದ ಹೊಸ ವರ್ಷದ ಉಡುಗೊರೆ ಎಂದ ಕಾಂಗ್ರೆಸ್‌

ಜಿಎಸ್‌ಟಿ ಕಾನೂನುಗಳು ಗ್ಯಾಸ್ ಸಿಲಿಂಡರ್‌ಗಳ ಗೃಹಬಳಕೆಯ ಮೇಲೆ 5 ಪ್ರತಿಶತ ಜಿಎಸ್‌ಟಿಯನ್ನು ವಿಧಿಸಲು ಮತ್ತು ಅದನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಿದಾಗ ಶೇಕಡಾ 18 ಜಿಎಸ್‌ಟಿ ವಿಧಿಸಲು ಅನುಮತಿಸುವುದಿಲ್ಲ. ಉದ್ದೇಶದ ಆಧಾರದ ಮೇಲೆ ಸರಕು ದರವು ಬದಲಾಗಬಹುದು. ಹಾಗಾಗಿ ಜಿಎಸ್‌ಟಿ ಏಕರೂಪವಾಗಿರಬೇಕು ಎಂದು ಬಿಬಿಎಚ್‌ಎ ಅಧ್ಯಕ್ಷ ಪಿ ಸಿ ರಾವ್ ಹೇಳಿದರು.

bengaluru hotel owners demand reduction in GST on commercial LPG

ಹೋಟೆಲ್ ಉದ್ಯಮಕ್ಕೆ ಒಂದು ಬಾರಿ ಶಾಶ್ವತ ಪರವಾನಗಿಯನ್ನು ಅಳವಡಿಸಿಕೊಳ್ಳುವಂತೆ ಸರ್ಕಾರವನ್ನು ವಿನಂತಿಸಲು ಸಂಘಗಳು ಚಿಂತನೆ ನಡೆಸಿವೆ. ಕಳೆದ ನವೆಂಬರ್‌ನಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಬರೋಬ್ಬರಿ ₹115 ರಷ್ಟು ಇಳಿಕೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿದ್ದವು. 1 ನವೆಂಬರ್‌ರಿಂದ 19 ಕೆಜಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ₹ 115.50 ರಷ್ಟು ಕಡಿಮೆ ಮಾಡಲಾಗಿತ್ತು. ಮಿತಿಮೀರಿದ ಇಂಧನ ಬೆಲೆಗಳಿಂದ ಬಳಲುತ್ತಿರುವ ಗ್ರಾಹಕರು, 'ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಇಂದು ಕಡಿಮೆ ಮಾಡಲಾಗುವುದು' ಎಂಬ ಒಎಂಸಿ(ತೈಲ ಮಾರುಕಟ್ಟೆ ಕಂಪನಿಗಳು)ಗಳ ಪ್ರಕಟಣೆಯಿಂದ ನಿರಾಳರಾಗಿದ್ದರು.

LPG Price : ಹೊಸ ವರ್ಷದಂದೇ ಜೇಬಿಗೆ ಕತ್ತರಿ, ಸಿಲಿಂಡರ್ ಬೆಲೆ ಏರಿಕೆLPG Price : ಹೊಸ ವರ್ಷದಂದೇ ಜೇಬಿಗೆ ಕತ್ತರಿ, ಸಿಲಿಂಡರ್ ಬೆಲೆ ಏರಿಕೆ

ಅದರೆ ಹೊಸ ವರ್ಷ ಜನವರಿ 1 2023ರಂದೇ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ಈಗ 25 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಸರ್ಕಾರಿ ವಲಯದ ಕಂಪೆನಿಗಳು ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು ಜನವರಿ 1ರಿಂದಲೇ ಜಾರಿಗೆ ಬರುವಂತೆ ಬರೋಬ್ಬರಿ 25 ರೂಪಾಯಿಗಳನ್ನು ಏರಿಸಿದ್ದವು. ಬೆಲೆ ಏರಿಕೆಯ ನಂತರ, ಅಡುಗೆ ಅನಿಲದ ವಾಣಿಜ್ಯ ಸಿಲಿಂಡರ್ ದೆಹಲಿಯಲ್ಲಿ ₹ 1,768, ಮುಂಬೈನಲ್ಲಿ ₹ 1,721, ಕೋಲ್ಕತ್ತಾದಲ್ಲಿ ₹ 1,870 ಮತ್ತು ಚೆನ್ನೈನಲ್ಲಿ ₹ 1,917 ಆಗಿತ್ತು.

English summary
Hoteliers in the city have approached the central government demanding that the GST on commercial gas cylinders be reduced in line with the GST on domestic cylinders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X