ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಸ್ಪತ್ರೆಯಲ್ಲಿ ಎಷ್ಟು ಬೆಡ್ ಲಭ್ಯವಿದೆ? ಮನೆಯಲ್ಲೇ ಕೂತು ತಿಳಿಯಬಹುದು

|
Google Oneindia Kannada News

ಬೆಂಗಳೂರು, ಜುಲೈ 14: ಕೊರೊನಾ ವೈರಸ್ ಬಿಕ್ಕಟ್ಟು ಹಿನ್ನೆಲೆ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಬೆಡ್ ಸಿಗುತ್ತಿಲ್ಲ ಎನ್ನುವುದು ಬಹಳ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕೊವಿಡ್ ಹೊರತುಪಡಿಸಿ ಇತರೆ ರೋಗಿಗಳಿಗೂ ಸಹ ಹಾಸಿಗೆ ಸಿಗುತ್ತಿಲ್ಲ ಎಂಬ ಆರೋಪವೂ ಇದೆ.

ಅದೇಷ್ಟೋ ಕಡೆ ಬೆಡ್ ಸಿಗದ ರೋಗಿಗಳು ಮೃತಪಟ್ಟಿರುವ ಘಟನೆಗಳು ವರದಿಯಾಗಿದೆ. ಆದರೆ, ಸರ್ಕಾರ ಮಾತ್ರ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಇದೆ ಎನ್ನುತ್ತಿದೆ.

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ, ವಿಜಯಪುರಕ್ಕೆ ಕೊನೆ ಸ್ಥಾನದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ, ವಿಜಯಪುರಕ್ಕೆ ಕೊನೆ ಸ್ಥಾನ

ಇದೀಗ, ಬೆಂಗಳೂರಿನ ಆಸ್ಪತ್ರೆಗಳಲ್ಲಿ ಎಷ್ಟು ಖಾಲಿ ಇದೆ ಎಂದು ಸಾರ್ವಜನಿಕರಿಗೆ ತಿಳಿಸುವ ಪ್ರಯತ್ನಕ್ಕೆ ಬಿಬಿಎಂಪಿ ಮುಂದಾಗಿದೆ.

Bengaluru Hospitals bed availability for Covid-19 patients can now be tracked through BBMP dashboard

ಈ ಕುರಿತು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, 'ಸಾರ್ವಜನಿಕರ ಗಮನಕ್ಕೆ! ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್19 ಸೋಂಕಿತರಿಗೆ ಲಭ್ಯವಿರುವ ಹಾಸಿಗೆಗಳ ನೈಜ ಮಾಹಿತಿಯನ್ನು ಪಡೆಯಬಹುದು'' ಎಂದು ಲಿಂಕ್ ಶೇರ್ ಮಾಡಿದ್ದಾರೆ.

ಬೆಂಗಳೂರಿನ ಆಸ್ಪತ್ರೆಗಳಲ್ಲಿ ಎಷ್ಟು ಹಾಸಿಗೆ ಲಭ್ಯವಿದೆ ಎನ್ನುವುದರ ಲೈವ್ ಅಂಕಿ ಅಂಶಗಳನ್ನು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಪ್ರಕಟ ಮಾಡಿದೆ. ಗಂಟೆ ಗಂಟೆಗೂ, ದಿನದಿಂದ ದಿನಕ್ಕೆ ಎಷ್ಟು ಹಾಸಿಗೆ ಖಾಲಿ ಇದೆ, ಎಷ್ಟು ಹಾಸಿಗೆ ಭರ್ತಿ ಆಗಿದೆ, ಎಷ್ಟು ಜನರಲ್ ಬೆಡ್ ಇದೆ, ಐಸಿಯು ಬೆಡ್ ಇದೆ ಎಂಬ ವಿವರವನ್ನು ಹಂಚಿಕೊಂಡಿದೆ.

ಬಿಬಿಎಂಪಿಯ ಈ ಯೋಜನೆ ಸಿಲಿಕಾನ್ ಸಿಟಿ ನಾಗರಿಕರಿಗೆ ಸಹಜವಾಗಿ ಉಪಯುಕ್ತವಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

English summary
Covid-19 patients can now be tracked through BBMP dashboard for bed availability in bengaluru hospitals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X