ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯ ಲಾಲ್ಬಾಗಿನಲ್ಲಿ ಮಾವಿನಹಣ್ಣು ಚಪ್ಪರಿಸಿದರಯ್ಯ

|
Google Oneindia Kannada News

ಬೆಂಗಳೂರು, ಮೇ 29: ಹಣ್ಣುಗಳ ರಾಜ ಮಾರುಕಟ್ಟೆಗೆ ಕಾಲಿಟ್ಟು ಬಹಳ ದಿನಗಳೇ ಕಳೆದಿದ್ದರೂ ಲಾಲ್ ಬಾಗ್ ಆವರಣದಲ್ಲಿ ಆತನಿಗೆ ರಾಜಾತಿಥ್ಯ ಶುಕ್ರವಾರದಿಂದ ಆರಂಭವಾಗಿದೆ. ಜೂನ್ 27 ರವರೆಗೆ ಮೇಳ ನಡೆಯಲಿದೆ.

ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಆಶ್ರಯದಲ್ಲಿ ಆರಂಭವಾದ ಮೇಳವನ್ನು ಸಿಎಂ ಸಿದ್ದಾರಾಮಯ್ಯ ಶುಕ್ರವಾರ ಬೆಳಗ್ಗೆ ಉದ್ಘಾಟನೆ ಮಾಡಿದರು. ಹೊಟ್ಟೆ ಹಸಿದಾಗ ಹಲಸಿನ ಹಣ್ಣನ್ನು ತಿನ್ನಬೇಕು. ಊಟ ಮಾಡಿದ ನಂತರ ಮಾವಿನ ಹಣ್ಣನ್ನು ತಿನ್ನಬೇಕು ಇವೆರಡು ಆರೋಗ್ಯ ವರ್ಧಕ ಎಂದು ಸಿದ್ದರಾಮಯ್ಯ ಹೇಳಿದರು.[ಹಣ್ಣುಗಳ ರಾಜನಿಗೆ ಸಿಕ್ತು ಪ್ರಧಾನಿ ಮೋದಿ ಹೆಸರು]

ಅಕಾಲಿಕ ಮಳೆ ಪರಿಣಾಮ ಮಾವು ಬೆಳೆಗಾರರು ನಷ್ಟ ಅನುಭವಿಸಿರುವುದು ಗೊತ್ತಾಗಿದೆ. ಪ್ರಸ್ತುತ ಕೆಲವು ಭಾಗಗಳಲ್ಲಿ ಅಕಾಲಿಕ ಮಳೆ-ಗಾಳಿಯಿಂದ ಮಾವು ಬೆಳೆಗೆ ಹಾನಿಯಾಗಿದೆ. ಇದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ವರದಿ ಬಂದ ನಂತರ ಪರಿಹಾರ ಕುರಿತು ನಿರ್ಧರಿಸಲಾಗುವುದು ಎಂದು ತಿಳಿಸಿದರು.[ಹಾಪ್ ಕಾಮ್ಸ್ ವ್ಯಾಪಾರ ಕುಂಠಿತಕ್ಕೆ ಕಾರಣವೇನು?]

ಅಲ್ಫಾನ್ಸೊ, ಬಾದಾಮಿ, ಬಂಗನಪಲ್ಲಿ, ರಸಪುರಿ, ಮಲ್ಲಿಕಾ, ಸೇಂಧೂರ, ಮಲಗೋವಾ, ತೋತಾಪುರಿ, ನೀಲಂ, ಆಮ್ರಪಾಲಿ ಸೇರಿದಂತೆ ವಿವಿಧ ಬಗೆಯ ಮಾವಿನ ತಳಿಗಳು. ಸ್ವರ್ಣ ಹಲಸು, ಲಾಲ್‌ಬಾಗ್ ಮಧುರಾ, ಭೈರಚಂದ್ರ, ತೂಬುಗೆರೆ, ಜಾಣಗೆರೆ, ಇಬ್ಬೀಡು ಸೇರಿದಂತೆ ವಿವಿಧ ಬಗೆಯ ಹಲಸಿನ ಹಣ್ಣುಗಳು ಬಾಯಲ್ಲಿ ನೀರೂರಿಸುತ್ತವೆ.[ಹಲಸು-ಮಾವು ಮೇಳದ ಮತ್ತಷ್ಟು ಚಿತ್ರಗಳು]

ಹಳೆ ಕಾಲ ನೆನೆದ ಸಿದ್ದು

ಹಳೆ ಕಾಲ ನೆನೆದ ಸಿದ್ದು

ನಾವು ಚಿಕ್ಕವರಿದ್ದಾಗ ಹಲಸಿನ ಹಣ್ಣು ಸವಿಯಲು ಮುಗಿ ಬೀಳುತ್ತಿದ್ದೆವು. ಈಗ ಕೂಡ ಸ್ವಲ್ಪ ತಿನ್ನುತ್ತೇನೆ. ಆಯಾ ಮಾಸಕ್ಕೆ ಅನುಗುಣವಾಗಿ ಸಿಗುವ ಹಣ್ಣು ತಿನ್ನಬೇಕು ಎಂದು ಸಿಎಂ ಸಿದ್ದರಾಮಯ್ಯ ಹಣ್ಣು ಸವಿಯುತ್ತಲೇ ಹೇಳಿದರು.

ಹೊರಗಡೆಗೆ ಹೋಲಿಕೆ

ಹೊರಗಡೆಗೆ ಹೋಲಿಕೆ

ಹೊರಗಿನ ಮಾರುಕಟ್ಟೆಗೆ ಹೋಲಿಕೆ ಮಾಡಿದರೆ ಕೆಜಿಗೆ 15-20 ರು, ಕಡಿಮೆಯೇ. ಹಾಪ್ ಕಾಮ್ಸ್ ನವರೇ ದರಪಟ್ಟಿ ನಿಗದಿ ಮಾಡಿ ಹಾಕಿದ್ದು ಚೌಕಾಶಿ ವ್ಯವಹಾರಕ್ಕೆ ಆಸ್ಪದವಿಲ್ಲ.

ಡಾ. ಮರಿಗೌಡ

ಡಾ. ಮರಿಗೌಡ

ಹೌದು ಡಾ. ಮರಿಗೌಡ ಹೆಸರಿನ ಮಾವಿನ ತಳಿಯ ಹಣ್ಣು ಪ್ರದರ್ಶನಕ್ಕಿದೆ. ದೊಡ್ಡ ಹಗಾತ್ರದ ಒಂದು ಹಣ್ಣೆ ಸುಮಾರು 2 ರಿಂದ 3 ಕೆಜಿ ತೂಗಬಹುದು. ಇದರ ಜತೆಗೆ ಮಲ್ಲಿಕಾ, ಬಾದಾಮಿ ಸೇರಿದಂತೆ ಚಿರಪರಿಚಿತ ಹಣ್ಣುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಹಣ್ಣಿನ ದರಪಟ್ಟಿ ನೋಡಿ

ಹಣ್ಣಿನ ದರಪಟ್ಟಿ ನೋಡಿ

ಬಾದಾಮಿ - 80
ಆಲ್ಫಾನ್ಸೋ-270
ಮಲ್ಲಿಕಾ- 70
ಕೇಸರ್-50
ಆಮ್ರಪಾಲಿ-65
ಬಂಗನಪಲ್ಲಿ-50

ಹಣ್ಣಿನ ದರಪಟ್ಟಿ ನೋಡಿ

ಹಣ್ಣಿನ ದರಪಟ್ಟಿ ನೋಡಿ

ಮಲಗೋವಾ-80
ರಸಪುರಿ-60
ಕಾಲಾಪಾಡ್-55
ದೃಶೇರಿ-80
ಸಕ್ಕರೆ ಗುತ್ತಿ-60
ತೋತಾ ಪುರಿ-20
ಸೆಂದೂರ -30

English summary
Bengaluru: One month mango and jackfruit mela starts at Lalbagh, Bengaluru on May 29. CM Siddaramaiah inaugurated Horticulture department annual fruit festival.Total 120 and more mango shops satged in Lalbagh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X