• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಡವರಿಗಾಗಿ ಆಟೋ ಓಡಿಸುವ ಎಂಬಿಬಿಎಸ್ ವಿದ್ಯಾರ್ಥಿ

By ಮೈತ್ರೇಯಿ
|

ಬೆಂಗಳೂರು, ಮೇ 18 : ಮಹಾನಗರಗಳಲ್ಲಿ ಮಾನವೀಯತೆ ಮರೆಯಾಗಿದೆ ಎಂದು ದೂರುವ ಜನರು ಹೆಚ್ಚು. ಆದರೆ, ಬೆಂಗಳೂರಿನ ಯುವಕನೊಬ್ಬ ಆಟೋ ಓಡಿಸುವ ಮೂಲಕ ಬಡ ಜನರ ಚಿಕಿತ್ಸೆಗೆ ಸಹಾಯ ಮಾಡುತ್ತಿದ್ದಾನೆ. ಆಟೋ ಓಡಿಸುವ ಯುವಕ ಎಂಬಿಬಿಎಸ್ ವಿದ್ಯಾರ್ಥಿ ಎಂದರೆ ಎಲ್ಲರಿಗೂ ಆಶ್ಚರ್ಯವಾಗಬಹುದು.

ವಿನೀತ್ ವಿಜಯನ್ ಎಂಬುವವರು ಈ ಯುವಕನ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. ಈ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪೋಸ್ಟ್‌ಗೆ 30 ಸಾವಿರ ಲೈಕ್, 2.3 ಸಾವಿರ ಕಾಮೆಂಟ್ ಬಂದಿದೆ. 16 ಸಾವಿರ ಶೇರ್ ಆಗಿದೆ. [ಮಂಗಳೂರಿನ ಬಾಬು ಪಿಲಾರ್ ಕೆಲಸಕ್ಕೆ ನಮ್ಮ ಸಲಾಂ]

ಈ ಕಥೆಯ ಹೀರೋ ಎಂಬಿಬಿಎಸ್ ವಿದ್ಯಾರ್ಥಿ ವಿನೀತ್ ವಿಜಯನ್ ಫೇಸ್‌ಬುಕ್‌ನಲ್ಲಿ ಏನು ಬರೆದಿದ್ದಾರೆ ಎಂಬುದು ಇಲ್ಲಿದೆ ನೋಡಿ...... [ಚಿಕ್ಕಪೇಟೆ ಸಂಚಾರಿ ಪೊಲೀಸರ ಮಾನವೀಯತೆಗೆ ಸಲಾಂ]

"ನಗರದಿಂದ ಮೆಡಿಕಲ್ ಕಾಲೇಜಿಗೆ ಹೋಗಲು ನಾನು ಆಟೋ ಏರಿದೆ. ನನ್ನ ಸ್ನೇಹಿತನ ತಾಯಿ ಅಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ನನಗೆ ಸೊಂಟ ನೋವಿನ ಸಮಸ್ಯೆ ಇದೆ. ಆದ್ದರಿಂದ, ಯುವ ಆಟೋ ರಿಕ್ಷಾ ಡ್ರೈವರ್‌ಗೆ ನಿಧಾನವಾಗಿ ಹೋಗುವಂತೆ ಹೇಳಿದೆ.

ಆಟೋ ಚಾಲಕರು ಪ್ರತಿದಿನ ಮಾತನಾಡುವಂತೆ ಖಾರವಾಗಿ ಪ್ರತಿಕ್ರಿಯೆ ನೀಡುತ್ತಾರೆ ಎಂದು ಭಾವಿಸಿದ್ದೆ. ಆದರೆ, ಆಟೋ ಓಡಿಸುತ್ತಿದ್ದ ಯುವಕ ಮೃದುವಾಗಿ 'ಓಕೆ ಸಾರ್' ಎಂದು ಹೇಳಿದ. ['ಹೃದಯ'ವಂತೆ ರೀನಾ ಸಮಾಜ ಸೇವಾ ಸಂಸ್ಥೆಗೆ 5 ವರ್ಷ]

ಆಸ್ಪತ್ರೆ ತಲುಪಿದ ಕೂಡಲೇ ನಾನು ಎಷ್ಟಾಯಿತು? ಎಂದು ಪ್ರಶ್ನೆ ಮಾಡಿದೆ. ಆಗ ಅವನು ತನ್ನ ಸೀಟಿನ ಸಮೀಪವಿದ್ದ ಬಾಕ್ಸ್‌ ಕಡೆ ಕೈ ತೋರಿಸಿದ. ಅದರ ಮೇಲೆ Put anything that you think is satisfactory for this ride ಎಂದು ಬರೆದಿತ್ತು.

ಕೆಲವು ಕ್ಷಣ ಗೊಂದಲಕ್ಕೆ ಒಳಗಾದ ನಾನು ಬಾಕ್ಸ್‌ ಗಮನಿಸಿದೆ. ಅದರ ಮೇಲೆ 'ಬಡವರು ಮತ್ತು ಅಗತ್ಯವಿರುವವರ ಚಿಕಿತ್ಸೆಗಾಗಿ' ಎಂದು ಬರೆದಿತ್ತು.

ಅಷ್ಟರಲ್ಲಿ ಸ್ಥಳಕ್ಕೆ ಬಂದ ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಆಟೋವನ್ನು ಸೈಡಿಗೆ ನಿಲ್ಲಿಸಿ ಎಂದು ಹೇಳುತ್ತಾ ಹತ್ತಿರಕ್ಕೆ ಬಂದ. ಚಾಲಕನನ್ನು ನೋಡಿದವನೇ ಮುಗುಳ್ನಕ್ಕು 'ನಮಸ್ಕಾರ ಸಾರ್' ಎಂದ. ಆಟೋ ಚಾಲಕ ಅಲ್ಲಿಂದ ತೆರಳಿದ.

ಆಶ್ಚರ್ಯಗೊಂಡ ನಾನು ಭದ್ರತಾ ಸಿಬ್ಬಂದಿ ಬಳಿ ಆಟೋ ಚಾಲಕನ ಬಗ್ಗೆ ಕುತೂಹಲದಿಂದ ವಿಚಾರಿಸಿದೆ. ಇವರ ತಂದೆ ಚಿಕ್ಕವಯಸ್ಸಿನಲ್ಲಿಯೇ ತೀರಿಕೊಂಡಿದ್ದಾರೆ. 4 ಮಕ್ಕಳ ಪೈಕಿ ಇವರು ಎರಡನೆಯವರು. ಇವರಿಗೆ ಇಬ್ಬರು ತಂಗಿಯರಿದ್ದಾರೆ.

ಉತ್ತಮ ಅಂಕಗಳೊಂದಿಗೆ ಪರೀಕ್ಷೆ ಪಾಸು ಮಾಡಿದ್ದರಿಂದ ನಮ್ಮ ಆಸ್ಪತ್ರೆಯ ಮುಖ್ಯಸ್ಥರು ಇವರಿಗೆ ಆಟೋ ನೀಡಿದರು. ಆಟೋ ಓಡಿಸಲು ಆರಂಭಿಸಿದ ಇವರು, ಮೊದಲ ತಿಂಗಳ ದುಡಿಮೆಯ ಅರ್ಧ ಭಾಗವನ್ನು ಮುಖ್ಯಸ್ಥರಿಗೆ ನೀಡಲು ಬಂದರು. ಆದರೆ, ಅದನ್ನು ಅವರು ನಯವಾಗಿ ತಿರಸ್ಕರಿಸಿದರು.

ಅಂದಿನಿಂದ ಆಸ್ಪತ್ರೆಗೆ ಹೋಗುವವರನ್ನು ಉಚಿತವಾಗಿ ಕರೆದುಕೊಂಡು ಹೋಗಲು ಆರಂಭಿಸಿದರು. ಇಲ್ಲವಾದಲ್ಲಿ ಪ್ರಯಾಣಿಕರಿಗೆ ಬಾಕ್ಸ್‌ಗೆ ಹಣ ಹಾಕುವಂತೆ ಸೂಚಿಸುತ್ತಾರೆ. ಪ್ರತಿ ತಿಂಗಳು ಬಾಕ್ಸ್‌ನಲ್ಲಿ ಇರುವ ಹಣವನ್ನು ಆಸ್ಪತ್ರೆಗೆ ನೀಡಿ ಬಡವರ ಮತ್ತು ಅಗತ್ಯವಿರುವ ಜನರ ಚಿಕಿತ್ಸಗೆ ಬಳಸಿಕೊಳ್ಳಲು ಹೇಳುತ್ತಾರೆ.

ಇದನ್ನು ಕೇಳಿದ ಮೇಲೆ ನನಗೆ ಏನು ಹೇಳಬೇಕು ಎಂದು ತಿಳಿಯಲಿಲ್ಲ. ಮಾನವೀಯ ವ್ಯಕ್ತಿತ್ವದ 3ನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯ ಆಟೋದಲ್ಲಿ ಪ್ರಯಾಣ ಮಾಡಿದ್ದು ನನಗೆ ಹೆಮ್ಮೆ ಎನಿಸಿತು".

English summary
In a big city like Bengaluru, where life is fast-paced, often we fail to recognize the needs of people in our immediate surroundings. However, there are people, who in spite of all odds make it a point to touch the lives of people who are in need of help. One such story about a young MBBS student.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X