ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರೀ ಮಳೆ ಮುಂದುವರಿದರೆ ಬೆಂಗಳೂರಿಗರ ಕತೆ?

|
Google Oneindia Kannada News

ಬೆಂಗಳೂರು, ಜೂ. 01: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಭಾನುವಾರ ಭರ್ಜರಿ ಮಳೆಯಾಗಿದೆ. ಸಿಡಿಲಿಗೆ ಇಬ್ಬರು ಬಲಿಯಾಗಿದ್ದರೆ, ಬೆಂಗಳೂರಿನಲ್ಲಿ ನೂರಾರು ಮರಗಳು ಧರೆಗುರುಳಿವೆ. ಯಲಹಂಕ ವ್ಯಾಪ್ತಿಯಲ್ಲಿಯೇ ಸುಮಾರು 60 ಅಧಿಕ ಮರಗಳು ನೆಲಕಚ್ಚಿವೆ.

ಶಿವಮೊಗ್ಗ, ರಾಯಚೂರು, ಕುಷ್ಟಗಿ, ಲಿಂಗಸೂಗೂರು, ಬಳ್ಳಾರಿ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದೆ. ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ್ದಾರೆ. ಮುಂಗಾರು ಕೇರಳಕ್ಕೆ ಜೂನ್ 3ರಂದಯ ಪ್ರವೇಶ ಮಾಡಲಿದೆ ಎಂದು ಹೇಳಲಾಗಿದ್ದು ಮಳೆಯ ಆರ್ಭಟ ಈಗಲೇ ಆರಂಭವಾಗಿದೆ.[ಮುಂಗಾರು ಮಳೆರಾಯ ಸಮಯಕ್ಕೆ ಬಾರದೆ ಕೈಕೊಟ್ಟವ್ನೆ]

rain

ಭಾನುವಾರ ಬೆಂಗಳೂರಿನ ಹಲವೆಡೆ ಎರಡು ಗಂಟೆಗಳ ಕಾಲ ಗುಡುಗಿನಿಂದ ಕುಡಿದ ಮಳೆ ಸುರಿಯಿತು. ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು ಸಂಜೆ ಮಳೆ ಆರಂಭವಾಯಿತು. ರಾಜಾಜಿನಗರ, ಜಯನಗರ, ಮೆಜೆಸ್ಟಿಕ್, ಹಲಸೂರು, ಜಾಲಹಳ್ಳಿ ಕ್ರಾಸ್, ರಾಜರಾಜೇಶ್ವರಿ ನಗರದಲ್ಲಿ ಮಳೆಯಾಗಿದೆ. ಅರಣ್ಯ ಇಲಾಖೆ ವಸತಿ ಗೃಹ, ಕೆ.ಜಿ.ಹಳ್ಳಿ, ಜಾಲಹಳ್ಳಿ ಬಳಿ ಮೂರು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಎರಡು ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ದಕ್ಷಿಣ ಭಾಗದ ಗಿರಿನಗರ, ಹೊಸಕೆರೆಹಳ್ಳಿ ಸುತ್ತ ಮುತ್ತ ಆಲಿಕಲ್ಲು ಸಹಿತ ಮಳೆ ಬಿದ್ದಿದೆ.

ಮಳೆ ಮುಂದುವರಿದರೆ ಬೆಂಗಳೂರಿಗರ ಕತೆ?
ಬೆಂಗಳೂರಿನಲ್ಲಿ ಈ ಸಾರಿ ಬೇಸಿಗೆಯಲ್ಲೂ ಆಗಾಗ ಮಳೆ ಸುರಿಯುತ್ತಲೇ ಬಂದಿದೆ. ಪ್ರತಿ ಸಾರಿ ಮಳೆ ಬಂದಾಗಲೂ ಒಂದೆಲ್ಲಾ ಒಂದು ಆವಾಂತರ ಸೃಷ್ಟಿಯಾಗುತ್ತದೆ. ಇನ್ನು ಕೆಲ ದಿನ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ.[ಬೆಂಗಳೂರಲ್ಲಿ ಮಳೆ ಬಂದ್ರೆ ಏನೇನಾಗುತ್ತೆ?]

ನಗರದ ಹಲವೆಡೆ ಪೈಪ್ ಲೈನ್ ಗೆಂದು ತೋಡಿರುವ ಹೊಂಡಗಳು ಹಾಗೆ ಇವೆ. ಮರ ಬಿದ್ದು ವಾರವಾದರೂ ತೆರವು ಕಾರ್ಯ ಮಗಿಯುತ್ತಿಲ್ಲ. ಕಳೆದ ವರ್ಷದವರೆಗೆ ಬಿಬಿಎಂಪಿಯಲ್ಲಿ ಆಡಳಿತವಿತ್ತು. ಈಗ ಕಾರ್ಪೋಟರೇಟರ್ ಗಳ ಅವಧಿಯೂ ಮುಗಿದಿದ್ದು ಜನರು ಮತ್ತೊಮ್ಮೆ ಪರಿತಪಿಸುವುದು ಶತಸಿದ್ಧ. ಭಾನುವಾರವೇ ಬಿಬಿಎಂಪಿ ಮತ್ತು ಬೆಸ್ಕಾಂ ಸಹಾಯವಾಣಿಗೆ ನೂರಾರಿ ಕರೆಗಳು ಬಂದಿದ್ದವು.

English summary
Bengaluru: Heavy rainfall lashed Bengaluru on Sunday evening. As many as 60 trees were uprooted in the City. The rainfall that started in the evening continued till late night accompanied by thunder. The BBMP control rooms were flooded with complaints of tree uprooting and waterlogging.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X