• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ, ರೆಡ್‌ಜೋನ್‌ನತ್ತ ಬೆಂಗಳೂರು: ಕಳೆದ ಬಾರಿಯ ಗೈಡ್ಲೈನ್ಸ್ ಏನಿತ್ತು?

|

ದಿನವೊಂದಕ್ಕೆ ಹತ್ತು ಸಾವಿರಕ್ಕೂ ಹೆಚ್ಚು ಹೊಸ ಕೇಸುಗಳು ರಾಜಧಾನಿಯಲ್ಲಿ ವರದಿಯಾಗುತ್ತಿರುವುದರಿಂದ, ಬೆಂಗಳೂರು ನಗರವನ್ನು ಸದ್ಯದಲ್ಲೇ ರೆಡ್‌ಜೋನ್‌ ಎಂದು ಕೇಂದ್ರ ಸರಕಾರ ಘೋಷಿಸಲಿದೆ ಎನ್ನುವ ಮಾತು ಬಲವಾಗಿ ಕೇಳಿ ಬರುತ್ತಿದೆ.

ಕಳೆದ ಒಂದು ವಾರದಿಂದ ಟಿವಿ ಮಾಧ್ಯಮಗಳು ಇಂದಿನಿಂದ ಲಾಕ್ ಡೌನ್, ನಾಳೆಯಿಂದ ಲಾಕ್ ಡೌನ್ ಎನ್ನುವ ಸುದ್ದಿಯನ್ನು ಪ್ರಕಟಿಸುತ್ತಲೇ ಬರುತ್ತಿವೆ. ಆದರೆ, ಲಾಕ್ ಡೌನ್ ಯಾವ ಕಾರಣಕ್ಕೂ ಮಾಡುವುದಿಲ್ಲ ಎಂದು ಸರಕಾರ ಸ್ಪಷ್ಟನೆಯನ್ನು ನೀಡುತ್ತಿದ್ದರೂ, ಇಂತಹ ಸುದ್ದಿಗಳು ವಿನಾಕಾರಣ ಸಾರ್ವಜನಿಕರ ನೆಮ್ಮದಿಯನ್ನು ಹಾಳು ಮಾಡುತ್ತಿವೆ.

'ನಾಳೆ ಬಾ': ತಮಿಳುನಾಡಿನಲ್ಲಿ ಕೊರೊನಾ ಲಸಿಕೆ ಕೇಳಿದವರಿಗೆ ಇದೇ ಉತ್ತರ!'ನಾಳೆ ಬಾ': ತಮಿಳುನಾಡಿನಲ್ಲಿ ಕೊರೊನಾ ಲಸಿಕೆ ಕೇಳಿದವರಿಗೆ ಇದೇ ಉತ್ತರ!

ಬಿಬಿಎಂಪಿ ವ್ಯಾಪ್ತಿಯಲ್ಲಿ ಏಪ್ರಿಲ್ ಹತ್ತರಂದು ಇದ್ದ ಸಕ್ರಿಯ ಪ್ರಕರಣ 44,863, ಏಪ್ರಿಲ್ ಹದಿನೇಳರಂದು ವರದಿಯಾಗಿರುವ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 97,897. ಅಂದರೆ ಕೇವಲ ಒಂದು ವಾರದಲ್ಲಿ 53,034 ಹೊಸ ಕೇಸುಗಳು ವರದಿಯಾಗಿರುವುದು ಚಿಂತೆ ಪಡಬೇಕಾಗಿರುವ ವಿಚಾರ.

ಕೊರೊನಾ ಆಘಾತ: ಭಾರತದಲ್ಲಿ ಒಂದೇ ದಿನ 2.73 ಲಕ್ಷ ಜನರಿಗೆ ಸೋಂಕು!ಕೊರೊನಾ ಆಘಾತ: ಭಾರತದಲ್ಲಿ ಒಂದೇ ದಿನ 2.73 ಲಕ್ಷ ಜನರಿಗೆ ಸೋಂಕು!

ಕಳೆದ ಬಾರಿ ರೆಡ್‌ಜೋನ್‌ನಲ್ಲಿರುವ ನಗರ/ವಲಯಗಳಿಗೆ ಯಾವ ರೀತಿಯ ಮಾರ್ಗಸೂಚಿಯನ್ನು ಕೇಂದ್ರ ಸರಕಾರ ಪ್ರಕಟಿಸಿತ್ತು ಎನ್ನುವ ಪ್ರಮುಖ ಅಂಶಗಳನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ. ರೆಡ್ ಝೋನ್ ಎಂದರೆ ಏನು?

 ರೆಡ್‌ಜೋನ್‌ ಎಂದರೆ ಏನು?

ರೆಡ್‌ಜೋನ್‌ ಎಂದರೆ ಏನು?

ಹದಿನೈದು ಸಾವಿರ ಮತ್ತು ಅದಕ್ಕಿಂತಲೂ ಹೆಚ್ಚು ಕೊರೊನಾ ಪಾಸಿಟೀವ್ ಸಂಖ್ಯೆಯನ್ನು ಹೊಂದಿರುವ ಪ್ರದೇಶ/ನಗರಗಳನ್ನು ರೆಡ್‌ಜೋನ್‌ ವ್ಯಾಪ್ತಿಗೆ ಕಳೆದ ಬಾರಿ ಸೇರಿಸಲಾಗಿತ್ತು. ಒಟ್ಟಾರೆಯಾಗಿ ರಾಜ್ಯದ ಶೇ. 80ಕ್ಕಿಂತಲೂ ಹೆಚ್ಚು ಸೋಂಕಿತರು ಆ ನಗರದಲ್ಲಿ ಇದ್ದರೆ ಮತ್ತು ನಾಲ್ಕು ದಿನಗಳ ಅಂತರದಲ್ಲಿ ಗಣನೀಯ ಪ್ರಮಾಣದಲ್ಲಿ ಪಾಸಿಟೀವ್ ಕೇಸ್‌ಗಳು ಹೆಚ್ಚಾಗುತ್ತಾ ಬಂದರೆ, ಅಂಥ ನಗರಗಳನ್ನು ರೆಡ್‌ಜೋನ್‌ ಪಟ್ಟಿಗೆ ಸೇರಿಸಲಾಗುತ್ತದೆ. ಕಳೆದ ಬಾರಿ ಈ ಝೋನ್ ವ್ಯಾಪ್ತಿಯ ನಗರಗಳ ಮೇಲಿನ ನಿರ್ಬಂಧ ಹೇರಿಕೆ ಮತ್ತು ಸಡಿಲಿಕೆಯನ್ನು ಕೇಂದ್ರ ಗೃಹ ಸಚಿವಾಲಯ ನಿರ್ಧಾರ ಮಾಡುತ್ತಿತ್ತು.

 ಕಳೆದ ಬಾರಿ ಇದ್ದ ನಿರ್ಬಂಧಗಳ ಪಟ್ಟಿ - 1

ಕಳೆದ ಬಾರಿ ಇದ್ದ ನಿರ್ಬಂಧಗಳ ಪಟ್ಟಿ - 1

ವೈದ್ಯಕೀಯ ತುರ್ತುಸೇವೆ, ಏರ್ ಆಂಬುಲೆನ್ಸ್ ಹೊರತು ಪಡಿಸಿ ನಗರಕ್ಕೆ ಬರುವ, ನಗರದಿಂದ ಹೋಗುವ ಎಲ್ಲಾ ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಯಾನ ಸ್ಥಗಿತ.
ವೈದ್ಯಕೀಯ ತುರ್ತುಸೇವೆ, ಭದ್ರತಾ ಸೇವೆ ಹೊರತು ಪಡಿಸಿ ನಗರಕ್ಕೆ ಬರುವ, ನಗರದಿಂದ ಹೋಗುವ (ಅಂತರ್ ರಾಜ್ಯ) ಎಲ್ಲಾ ರೈಲ್ವೇ ಪ್ರಯಾಣ ಬಂದ್.
ಕೇಂದ್ರ ಗೃಹಸಚಿವಾಲಯದ ನಿರ್ಬಂಧದಿಂದ ಹೊರತಾದ ಎಲ್ಲಾ ಅಂತರ್ ರಾಜ್ಯ ಬಸ್ ಸಂಚಾರಕ್ಕೆ ಬ್ರೇಕ್.
ಧಾರ್ಮಿಕ, ರಾಜಕೀಯ, ಕ್ರೀಡೆ, ಸಾಮಾಜಿಕ ಕಾರ್ಯಕ್ರಮಗಳಿಗೆ ಬ್ರೇಕ್.

ಕೊವಿಡ್ 19 ಸೋಂಕಿತರಿಗೆ ಬೆಡ್, ಆಕ್ಸಿಜನ್ ರೆಮ್‌ಡೆಸಿವಿರ್ ಎಲ್ಲಿ ಸಿಗುತ್ತೆ?ಕೊವಿಡ್ 19 ಸೋಂಕಿತರಿಗೆ ಬೆಡ್, ಆಕ್ಸಿಜನ್ ರೆಮ್‌ಡೆಸಿವಿರ್ ಎಲ್ಲಿ ಸಿಗುತ್ತೆ?

 ಕಳೆದ ಬಾರಿ ಇದ್ದ ನಿರ್ಬಂಧಗಳ ಪಟ್ಟಿ - 2

ಕಳೆದ ಬಾರಿ ಇದ್ದ ನಿರ್ಬಂಧಗಳ ಪಟ್ಟಿ - 2

ಮೆಟ್ರೋ ರೈಲು ಸಂಚಾರ ಬಂದ್
ಕೇಂದ್ರ ಗೃಹಸಚಿವಾಲಯದ ನಿರ್ಬಂಧದಿಂದ ಹೊರತಾದ ಎಲ್ಲಾ ಅಂತರ್ ರಾಜ್ಯ ವಾಹನ ಸಂಚಾರಕ್ಕೆ ಅವಕಾಶವಿರಲಿಲ್ಲ.
ಶಾಲಾ ಕಾಲೇಜು, ಟ್ರೈನಿಂಗ್,ಕೋಚಿಂಗ್ ಸೆಂಟರ್ ಬಂದ್.
ಸಿನಿಮಾ ಹಾಲ್, ಜಿಮ್, ಕ್ರೀಡಾಂಗಣ, ಮನೋರಂಜನಾ ಪಾರ್ಕ್, ಬಾರ್ ಎಂಡ್ ರೆಸ್ಟೋರೆಂಟ್ ಬಂದ್.
ಆಟೋರಿಕ್ಷಾ, ಕ್ಯಾಬ್, ನಗರ ಸಾರಿಗೆ ಬಸ್ ಸೇವೆ ಬಂದ್.

 ಕಳೆದ ಬಾರಿ ಇದ್ದ ನಿರ್ಬಂಧ ಇರದ ಸೇವೆಗಳು

ಕಳೆದ ಬಾರಿ ಇದ್ದ ನಿರ್ಬಂಧ ಇರದ ಸೇವೆಗಳು

ಪೂರ್ವಾನುಮತಿ ಪಡೆದ ದ್ವಿಚಕ್ರ (ಒಬ್ಬರು ಮಾತ್ರ) ಮತ್ತು ನಾಲ್ಕು ಚಕ್ರ (ಇಬ್ಬರು ಮಾತ್ರ) ವಾಹನ ಸಂಚಾರಕ್ಕೆ ಅನುಮತಿ.
ಇ-ಕಾಮರ್ಸ್ ಚಟುವಟಿಕೆಗಳಿಗೆ ಅನುಮತಿ.
ಖಾಸಗಿ ಸಂಸ್ಥೆಗಳು ಶೇ. 33 ಹಾಜರಾತಿಯೊಂದಿಗೆ ಕೆಲಸ ನಿರ್ವಹಿಸಬಹುದು.
ಭದ್ರತೆ, ಆರೋಗ್ಯ, ಪೊಲೀಸ್, ಕೊರಿಯರ್, ಮಾಧ್ಯಮ ಸಂಸ್ಥೆ ಸೇರಿದಂತೆ ತುರ್ತು ಸೇವೆಗೆ ಅನುಮತಿ.
ಕೃಷಿ, ಮೀನುಗಾರಿಕೆ, ಪಶುಸಂಗೋಪನೆಗೆ ಸಂಬಂಧಿಸಿದ ಕೆಲಸಕ್ಕೆ ಅನುಮತಿ.

English summary
Bengaluru Heading Towards Corona Red Zone, What Is Earlier Guidelines From MHA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X