ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನವೆಂಬರ್ ಮುಗೀತಾ ಬಂತು, ಬೆಂಗಳೂರಲ್ಲಿ ಚಳಿ ಎಲ್ಲಿ..?!

|
Google Oneindia Kannada News

ಬೆಂಗಳೂರು, ನವೆಂಬರ್ 25: ಅಯ್ಯೋ ಯಾಕಾದ್ರೂ ಬೆಳಗಾಗುತ್ತೋ ಎಂದುಕೊಂಡು, ಮೆತ್ತನೆ ಹೊದಿಕೆಯನ್ನು ಮೇಲೇರಿಸಿಕೊಂಡು ಮುದುಡಿ ಮಲಗಿಸುವ ನವೆಂಬರ್ ನ ಚಳಿಗಾಲ ಎಲ್ಲಿ ಹೋಯ್ತು?

'ಚಳಿ ಇದ್ಯಾ?' ಅಂತ ಬೆಂಗಳೂರಿಗರನ್ನು ಪ್ರಶ್ನಿಸಿದರೆ ಬರುವ ಉತ್ತರ ಒಂದೇ, 'ಅಯ್ಯೋ ಚಳಿನಾ? ಏನ್ ಕೇಳ್ತೀರಾ? ಬೆಳ್ಗೆ ಬೆಳ್ಗೆ ಸೆಕೆ. ಚಳಿಯ ಅಡ್ರೆಸ್ಸೇ ಪತ್ತೆಯಿಲ್ಲ!' ಹೌದು, ಹಾಗಿದೆ ಬೆಂಗಳೂರಿನ ಹವಾಮಾನ.

ಚುಮು ಚುಮು ಚಳಿಗಾಲಕ್ಕೆ ಪೇಟಿಯಂನಿಂದ ಬಿಸಿ ಬಿಸಿ ಕ್ಯಾಶ್ ಬ್ಯಾಕ್ ಆಫರ್ಚುಮು ಚುಮು ಚಳಿಗಾಲಕ್ಕೆ ಪೇಟಿಯಂನಿಂದ ಬಿಸಿ ಬಿಸಿ ಕ್ಯಾಶ್ ಬ್ಯಾಕ್ ಆಫರ್

ಈ ವರ್ಷ ನಿರೀಕ್ಷೆಗಿಂತ ಹೆಚ್ಚು ಮಳೆ ಬೀಳುತ್ತಿದ್ದಂತೆಯೇ 'ಬಹುಶಃ ಈ ಬಾರಿ ಚಳೀನೂ ಸಾಕಷ್ಟಿರುತ್ತೆ' ಎಂಬುದು ಹಲವರ ಭಾವನೆಯಾತ್ತು. ಹಾಗೆ ಹೇಳೋಕೆ ಹೋದರೆ ಪ್ರತಿವರ್ಷವೂ ಬೆಂಗಳೂರಿನಲ್ಲಿ ನವೆಂಬರ್ ಆರಂಭದಿಂದಲೇ ಚುಮು ಚುಮು ಚಳಿ ಆರಂಭವಾಗಿರುತ್ತಿತ್ತು. ಆದರೆ ನವೆಂಬರ್ ತಿಂಗಳು ಮುಗಿಯುತ್ತ ಬಂದರೂ ಚಳಿಯ ಸುಳಿವಿಲ್ಲ.

Bengaluru has to wait for 4-5 days to welcome winter!

ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಹವಾಮಾನ ಇಲಾಖೆ, ಇನ್ನೂ ಐದು ದಿನ ಬೆಂಗಳೂರಿನಲ್ಲಿ ಅಷ್ಟೇನೂ ಚಳಿ ಕಾಣಿಸಿಕೊಳ್ಳೋಲ್ಲ ಎಂದಿದೆ. ಈಗಾಗಲೇ ಬೆಂಗಳೂರು ಗರಿಷ್ಠ 29.3 ಡಿಗ್ರಿ ತಾಪಮಾನವನ್ನು ದಾಖಲಿಸಿದೆ. ನವೆಂಬರ್ ನಲ್ಲೇ ತಾಪಮಾನ ಇಷ್ಟು ಹೆಚ್ಚಿದ್ದರೆ ಬೇಸಿಗೆಯ ಕತೆಯೇನು ಎಂಬುದು ಆತಂಕದ ವಿಷಯ.

ಪ್ರೇಮಿಗಳ ದಿನ, ಬೆಂಗಳೂರಲ್ಲಿ ಜರ್ರನೆ ಜಾರಿದ ತಾಪಮಾನಪ್ರೇಮಿಗಳ ದಿನ, ಬೆಂಗಳೂರಲ್ಲಿ ಜರ್ರನೆ ಜಾರಿದ ತಾಪಮಾನ

ಆದರೆ ಹವಾಮಾನ ಇಲಾಖೆ ನೀಡುವ ಮಾಹಿತಿ ಪ್ರಕಾರ, 'ಬೆಂಗಳೂರಿನಲ್ಲಿ ನವೆಂಬರ್ 27 ರವರೆಗೂ ಮೋಡ ಕವಿದ ವಾತಾವರಣವಿರುತ್ತದಾದರೂ ಚಳಿ ಬೀಳುವುದಿಲ್ಲ. ಡಿಸೆಂಬರ್ ಮೊದಲ ವಾರದಿಂದ ಚಳಿ ಬೀಳಲಿದೆ ' ಸದ್ಯಕ್ಕೆ ಚಳಿ ಇಲ್ಲವಾದರೂ, ಡಿಸೆಂಬರ್ ನಂತರ ಬೀಳುವ ಚಳಿ ಮೈನಡುಗಿಸಿದರೆ ಅಚ್ಚರಿಯೇನಿಲ್ಲ. ಏಕೆಂದರೆ ಈ ಬಾರಿ ಮಳೆ, ಚಳಿ, ಬೇಸಿಗೆ ಎಲ್ಲವೂ ಅತಿಯಾಗಿಯೇ ಇರಲಿವೆ ಎಂದು ಅಂದಾಜಿಸಲಾಗಿದೆ.

English summary
Bengaluru has to wait for 4-5 days to welcome winter! Indian Meteorological Department said. We are already in end of November, but have not felt chill weather yet, telling Bengaluru people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X