ಟ್ರಾಫಿಕ್: ಬೆಂಗಳೂರು ವಿಶ್ವದಲ್ಲೇ 6ನೇ ಅತ್ಯಂತ ಕೆಟ್ಟ ನಗರ
ಬೆಂಗಳೂರು,ಜನವರಿ 15: ವಾಹನ ಸಂಚಾರ ದಟ್ಟಣೆಯಿಂದಾಗಿ ಬೆಂಗಳೂರು ಸಾಕಷ್ಟು ಕುಖ್ಯಾತಿ ಪಡೆದಿದೆ. ಈಗ ಮತ್ತೊಮ್ಮೆ ಸಾಬೀತುಪಡಿಸಿದೆ.
ಸಮೀಕ್ಷೆಯೊಂದರ ಪ್ರಕಾರ ಜಗತ್ತಿನಲ್ಲಿ 6 ನೇ ಹಾಗೂ ದೇಶದಲ್ಲಿ 2ನೇ ಅತಿ ಹೆಚ್ಚು ವಾಹನ ದಟ್ಟಣೆ ಇರುವ ನಗರವಾಗಿ ಬೆಂಗಳೂರು ಹೊರ ಹೊಮ್ಮಿದೆ.
ಈ ರಸ್ತೆಯಲ್ಲಿ 4 ಗಂಟೆಗೂ ಹೆಚ್ಚು ಕಾಲ ಕಾರು ನಿಲ್ಲಿಸಿದರೆ ದಂಡ!
ಮುಂಬೈ ನಗರ ಈ ಪಟ್ಟಿಯಲ್ಲಿ 2 ನೇ ಸ್ಥಾನ ಪಡೆದು ಕುಖ್ಯಾತಿಗಳಿಸಿದೆ. ಕೋವಿಡ್ ಲಾಕ್ಡೌನ್ ವ್ಯವಸ್ಥೆ ತಿಂಗಳುಗಳ ಗಟ್ಟಲೆ ಇದ್ದರೂ ಸಹ ಬೆಂಗಳೂರು ಈ ಸಮೀಕ್ಷೆಯ ಪಟ್ಟಿಯಲ್ಲಿ ಮೇಲಿನ ಸ್ಥಾನ ಪಡೆದಿರುವುದು ಆತಂಕಕ್ಕೆ ಕಾರಣವಾಗಿದೆ.
2020 ರ ಏಪ್ರಿಲ್ನಲ್ಲಿ ಸಂಚಾರ ದಟ್ಟಣೆ ಪ್ರಮಾಣ ಕಡಿಮೆ ಕಂಡು ಬಂದರೂ ಜನವರಿ ಫೆಬ್ರವರಿಯಲ್ಲಿ ಅತಿ ಹೆಚ್ಚು ವಾಹನ ಸಂಚಾರ ಕಂಡು ಬಂದಿದೆ.
ಟಾಮ್ ಟಾಮ್ ಟ್ರಾಫಿಕ್ ಸಮೀಕ್ಷೆ 2020 ಪ್ರಕಟಿಸಿದಂತೆ ಬೆಂಗಳೂರಿನಲ್ಲಿ ದಟ್ಟಣೆ ಶೇ 20 ರಷ್ಟು ತಗ್ಗಿದೆ. ಜಗತ್ತಿನ 416 ನಗರಗಳ ಸಮೀಕ್ಷೆ ನೆಡೆಸಿದ್ದು, ನಮ್ಮ ಬೆಂದ ಕಾಳೂರಿನ ಟ್ರಾಫಿಕ್ ಸಮಸ್ಯೆಯನ್ನು ಎತ್ತಿ ತೋರಿಸುತ್ತದೆ.
2020ರ ಟಾಮ್ ಟಾಮ್ ಟ್ರಾಫಿಕ್ ಇಂಡೆಕ್ಸ್ ಈ ವಿಷಯ ಬಹಿರಂಗಗೊಳಿಸಿದೆ. ಮುಂಬೈ ಜಗತ್ತಿನಲ್ಲೇ 2ನೇ ಕೆಟ್ಟ ನಗರ ಎನಿಸಿಕೊಂಡಿದ್ದು, ಮಾಸ್ಕೋ, ಬೊಗಾಟಾ, ಮನಿಲಾ ಹಾಗೂ ಇಸ್ತಾಂಬುಲ್ ನಂತರದ ಸ್ಥಾನದಲ್ಲಿವೆ ಎಂಬುದನ್ನು ಈ ಸಮೀಕ್ಷೆ ಹೇಳಿದೆ.
ದೆಹಲಿ ಜಗತ್ತಿನಲ್ಲೇ ಎಂಟನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸ್ವಲ್ಪ ಸುಧಾರಣೆ ಕಂಡುಬಂದಿದೆ.