ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ನಮ್ಮ ಬೆಂಗಳೂರು ಹಬ್ಬಕ್ಕೆ' ವಿಧಾನಸೌಧ ಅಂಗಳ ಸಜ್ಜು

|
Google Oneindia Kannada News

'ಬೆಂಗಳೂರು, ಡಿಸೆಂಬರ್ 22 : ರಾಜ್ಯದ ಶಕ್ತಿ ಸೌಧವಾದ ವಿಧಾನಸೌಧದ ಅಂಗಳದಲ್ಲಿ ತಿಂಡಿ, ತಿನಿಸು, ಮೋಜು ನಂಬಲಾಗುತ್ತಿಲ್ಲವೇ ಮೊಟ್ಟ ಮೊದಲ ಬಾರಿಗೆ ಬರುವ ಭಾನುವಾರ ಡಿಸೆಂಬರ್ 24 ರಂದು ನಡೆಯುವ 'ನಮ್ಮ ಬೆಂಗಳೂರು' ಹಬ್ಬದಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬಹುದು.

ಹಾಗೆಯೇ ಮುಕ್ತವಾಗಿ ಭಾಗವಹಿಸಿ ನಾನಾ ಮೋಜಿನ ಆಟಗಳಲ್ಲಿ ಪಾಲ್ಗೊಳ್ಳಲು ಸದವಕಾಶವನ್ನು ರಾಜ್ಯ ಪ್ರವಾಸೋದ್ಯಮ ಇಲಾಖೆ ನೀಡಿದೆ. ಪ್ರತಿ ವರ್ಷ ಕ್ರಿಸ್ ಮಸ್ ಹಬ್ಬದ ಅಂಗವಾಗಿ ಎಂಜಿ ರಸ್ತೆಯಲ್ಲಿ, ಎಚ್ ಎಸ್ ಆರ್ ಲೇಔಟ್ ನಲ್ಲಿ ಹೀಗೆ ನಗರದ ನಾನಾ ಕಡೆಗಳಲ್ಲಿ ನಡೆದಿದೆ. ಇದೇ ಮೊದಲ ಬಾರಿಗೆ ವಿಧಾನ ಸೌಧ ಎದುರು ಬೆಂಗಳೂರು ಓಪನ್ ಸ್ಟ್ರೀಟ್ ಫೆಸ್ಟಿವಲ್ ನಡೆಯುತ್ತಿದೆ. ವಿಧಾನ ಸೌಧ ಮುಂಭಾಗ, ಅಂಬೇಡ್ಕರ್ ರಸ್ತೆಯಲ್ಲಿ ಸಂಪೂರ್ಣವಾಗಿ ವಾಹನ ಸಂಚಾರ ನಿಷೇಧಿಸಲಾಗಿದೆ.

Bengaluru Habba at Vidhana Soudha Premises!

ಬೆಂಗಳೂರು ಹಬ್ಬದಲ್ಲಿ ಏನೇನಿದೆ?
ಯೋಗ, ಜೂಂಬಾ, ಕರ್ನಾಟಕದ ಸಂಸ್ಕೃತಿಯನ್ನು ಸಾರುವಂತಹ ಕಾರ್ಯಕ್ರಮಗಳು, ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ತರಬೇತಿ ಕಾರ್ಯಾಗಾರ ಹೀಗೆ ಇಡೀ ದಿನ ಮೋಜು ಮಸ್ತಿಯಿಂದ ಕೂಡಿರುತ್ತದೆ. ಸಾರ್ವಜನಿಕರಿಗೆ ಮುಕ್ತವಾದ ಅವಕಾಶವಿರುತ್ತದೆ. ಲಾಂಛನ ಹಾಗೂ ಮೊಬೈಲ್ ಅಪ್ಲಿಕೇಷನ್ ಕಾರ್ಯಕ್ರಮ ವಿಧಾನಸೌಧ ಮೆಟ್ಟಿಲುಗಳ ಮೇಲೆ ನಡೆಸಲಾಗುತ್ತದೆ. ಭಾನುವಾರ ಡಿ.24 ರಂದು ಬೆಳಗ್ಗೆ ಸಿದ್ದರಾಮಯ್ಯ ಲಾಂಛನ ಲೋಕಾರ್ಪಣೆ ಮಾಡಲಿದ್ದಾರೆ.

ನಮ್ಮ ಮೆಟ್ರೋ ಬೆಳಗ್ಗೆ 7 ರಿಂದಲೇ ಸಂಚಾರ ಆರಂಭ:
ವಿಧಾನ ಸೌಧದ ಆವರಣದಲ್ಲಿ ಭಾನುವಾರ ನಡೆಯುವ ನಮ್ಮ ಬೆಂಗಳೂರು ಹಬ್ಬದಲ್ಲಿ ಪಾಲ್ಗೊಳ್ಳಲು ಪ್ರಯಾಣಿಕರಿಗೆ ಅನುಕೂಲವಾಗುವಂತೆ ನಮ್ಮ ಮೆಟ್ರೋ ಸೇವೆಯನ್ನು ಬೆಳಗ್ಗೆ 7 ರಿಂದಲೇ ಪ್ರಾರಂಭಿಸಲಿದೆ.

Bengaluru Habba at Vidhana Soudha Premises!

ಅಲ್ಲದೇ ದಿನವಿಡೀ ಮೆಟ್ರೋ ರೈಲುಗಳ ಸಂಚಾರದ ಪ್ರಮಾಣವನ್ನೂ ಹೆಚ್ಚಳ ಮಾಡಲು ತೀರ್ಮಾಣಿಸಿದ್ದು, ಪ್ರಯಾಣಿಕರ ಸಂಖ್ಯೆ ಹೆಚ್ಚಳ ಗಮನಿಸಿ ಸಂಚಾರವನ್ನೂ ವಿಸ್ತರಿಸಲಾಗುವುದು ಎಂದು ಬಿಎಂಆರ್ ಸಿಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಭಾನುವಾರದ ಕಾರ್ಯಕ್ರಮಗಳ ವಿವರ:
ಯೋಗದಿಂದ ಬೆಳಗ್ಗಿನ ಕಾರ್ಯಕ್ರಮ 7 ಗಂಟೆಗೆ ಪ್ರಾರಂಭವಾಗಲಿದೆ. ಜೂಂಬಾ ಫಿಟ್ ನೆಸ್, ಶಾಸ್ತ್ರೀಯ ಸಂಗೀತ, ಪೊಲೀಸ್ ಬ್ಯಾಂಡ್, ಲಾಂಛನ ಬಿಡುಗಡೆ, ಡೊಳ್ಳು ಕುಣಿತ, ಪರದೆ ಹಾಗೂ ಗೊಂಬೆ ಆಟ, ಕಂಸಾಳೆ, ಪೂಜಾ ಕುಣಿತ, ಹುಲಿವೇಶ, ವೀಣಾ ವಾದನ ಕಾರ್ಯಕ್ರಮಗಳು ನಡೆಯಲಿದೆ.

English summary
This Sunday the visitors will get a rare glimpse into the corridors of Vidhana Soudha as the state government has decided to throw open the gates to the public for the Namma Bengaluru Habba an event aimed at promoting brand Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X