ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಡ್ಲೆಕಾಯಿ ಪರಿಷೆ ಉದ್ಘಾಟನೆ ವಿಶೇಷವೇನು?

|
Google Oneindia Kannada News

ಬೆಂಗಳೂರು, ನ.17: ಬಸವನಗುಡಿ ಕಡ್ಲೆಕಾಯಿ ಪರಿಷೆ ಉದ್ಘಾಟನೆಯೇ ವಿಭಿನ್ನ. ಬಸವಣ್ಣನಿಗೆ ಕಡ್ಲೆಕಾಯಿ ತುಲಾಭಾರ ಮಾಡಿದ ಮೇಲೆಯೆ ಪರಿಷೆಗೆ ವಿಧ್ಯುಕ್ತ ಚಾಲನೆ ದೊರೆಯುತ್ತದೆ ಎಂಬ ಸಂಗತಿ ಅನೇಕರಿಗೆ ಗೊತ್ತಿರಲಕ್ಕಿಲ್ಲ.

ಬಸವಣ್ಣನ ಪಂಚಲೋಹದ ಮೂರ್ತಿಯೊಂದನ್ನು ತುಲಾಭಾರಕ್ಕೆ ಬಳಸಿಕೊಳ್ಳಲಾಗುತ್ತದೆ. ತಕ್ಕಡಿಯ ಒದು ಭಾಗದಲ್ಲಿ ಬಸವಣ್ಣನ ಮೂರ್ತಿ ಇನ್ನೊಂದು ಭಾಗದಲ್ಲಿ ಕಡ್ಲೆಕಾಯಿ ಸುರಿಯಲಾಗುವುದು. ಮೂರ್ತಿಯ ಭಾರವನ್ನು ಕಡ್ಲೆಕಾಯಿ ಮೀರಿದಾಗ ಪರಿಷೆಗೆ ಚಾಲನೆ ಸಿಕ್ಕಂತಾಗುತ್ತದೆ. ಈ ತುಲಾಭಾರದಲ್ಲಿ ಪಾಲ್ಗೊಂಡ ಕಡ್ಲೆಕಾಯಿ ಶ್ರೇ‍ಷ್ಠ ಎಂಬುದು ಜನರ ನಂಬಿಕೆ.[ಕಡ್ಲೆಕಾಯಿ ಪರಿಷೆಗೆ ರಾಷ್ಟ್ರೀಯ ಮಾನ್ಯತೆ: ಅನಂತಕುಮಾರ್]

ಬಸವಣ್ಣನ ಕತೆಗಳು
ನೂರಾರು ವರ್ಷಗಳ ಹಿಂದೆ ಬಸವನಗುಡಿಯ ಸುತ್ತ ಮುತ್ತಲ ಪ್ರದೇಶದಲ್ಲಿ ವ್ಯಾಪಕವಾಗಿ ಕಡ್ಲೆಕಾಯಿ ಬೆಳೆಯಲಾಗುತ್ತಿತ್ತು. ಆದರೆ ಫಸಲು ಬಿಡುವ ವೇಳೆಗೆ ಯಾವುದೋ ಒಂದು ಪ್ರಾಣಿ ಆಗಮಿಸಿ ಕಡ್ಲೆಕಾಯಿ ತಿಂದು ಮಾಯವಾಗುತ್ತಿತ್ತು. ಇದರಿಂದ ಗೊಂದಲಕ್ಕೆ ಬಿದ್ದ ರೈತರು ಒಂದು ರಾತ್ರಿ ಪ್ರಾಣಿಯನ್ನು ಹಿಡಿಯಲು ಮುಂದಾಗುತ್ತಾರೆ.

parishe

ಎಂದಿನಂತೆ ಕಡ್ಲೆಕಾಯಿ ತಿನ್ನಲು ಬಂದ ಎತ್ತೊಂದು ರೈತರನ್ನು ನೋಡಿ ಓಟಕ್ಕಿಳುತ್ತದೆ. ಈಗಿರುವ ದೊಡ್ಡ ಬಸವನ ದೇವಾಸ್ಥಾನದ ಬೆಟ್ಟ ಏರಿ ಶಿಲಾಮೂರ್ತಿಯಾಗಿ ನಿಲ್ಲುತ್ತದೆ. ಅಂದಿನಿಂದ ರೈತರು ನೀನು ಪರಶಿವನ ವಾಹನವೇ ಇರಬೇಕು ಎಂದು ಧನ್ಯತಾ ಭಾವದಿಂದ ಕಡ್ಲೆಕಾಯಿ ಪರಿಷೆ ಆರಂಭಿಸುತ್ತಾರೆ ಎಂದು ಧಾರ್ಮಿಕ ಕತೆ ಹೇಳುತ್ತದೆ.[ಬಸವನಗುಡಿಯಲ್ಲಿ ಕಡ್ಲೇ ಕಾಯಿ ಪರಿಷೆ ಕ್ರೇಜ್ ಶುರು]

ಬೆಳೆದ ಕಡ್ಲೆಕಾಯಿಗೆ ಸೂಕ್ತ ಮಾರುಕಟ್ಟೆ ಇಲ್ಲದೇ ಕಂಗಾಲಾಗಿದ್ದ ವೇಳೆ ಹುಟ್ಟಿಕೊಂಡ ಜಾನಪದ ಜಾತ್ರೆಯೊಂದಿಗಿನ ಸಂತೆಯೇ ಕಡ್ಲೆಕಾಯಿ ಪರಿಷೆ ಎಂದೂ ಹೇಳಲಾಗುತ್ತದೆ. 1786ರಲ್ಲಿ ಬೆಂಗಳೂರು ನಿರ್ಮಾತೃ ಕೆಂಪೇಗೌಡ ಈಗಿರುವ ದೇವಾಲಯ ನಿರ್ಮಿಸಿದ ಎಂದು ಇತಿಹಾಸದ ಪುಟಗಳು ಹೇಳುತ್ತವೆ.[ಪರಿಷೆಯ ಮತ್ತಷ್ಟು ಚಿತ್ರಗಳು]

English summary
Bengaluru : Basavanagudi Kadlekai Parishe had number of special things. The programme inauguration is very different from others. Take a look of inauguration steps.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X