ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗ್ರಾಮೀಣ ಅಂಗಡಿಯಿಂದ ಪರಿಸರ ಸಂರಕ್ಷಣಾ ಜಾಗೃತಿ

|
Google Oneindia Kannada News

ಬೆಂಗಳೂರು, ಜೂ,. 03: ಜೂನ್ 5 ರ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ 'ಗ್ರಾಮೀಣ ಅಂಗಡಿ ಪರಿಸರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. "ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ" ಎಂಬ ಘೋಷಣೆಯನ್ನು ಹಳೆಯ ನ್ಯೂಸ್ ಪೇಪರ್ ಬ್ಯಾಗ್‍ಗಳ ಮೇಲೆ ಮುದ್ರಿಸಿ ಸಾರ್ವಜನಿಕರಿಗೆ ವಿತರಿಸುವ ಪ್ರಚಾರಾಂದೋಲನ ನಡೆಸಲಿದೆ.

ಬೆಂಗಳೂರಿನ ಜಯನಗರದ 4ನೇ ಟಿ ಬ್ಲಾಕ್, ಶ್ಯಾಲಿನಿ ಮೈದಾನದ ಬಳಿ ಇರುವ ಅಂಗಡಿ ಸ್ಥಳೀಯ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು, ದೇಸಿಯ ಪಾರಂಪರಿಕವಾದ ಪರಿಸರ ಪ್ರೇಮಿ ಕರಕುಶಲ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತ ಬಂದಿದೆ. ಇದೀಗ ಸಾಮಾಜಿಕ ಜಾಗೃತಿ ಮೂಡಿಸಲು ಮುಂದಾಗಿದ್ದು ಹಸೆಕಲೆಯನ್ನು ಬಳಸಿಕೊಳ್ಳಲಾಗುತ್ತಿದೆ.[ಒಡಲಲಿ ವಿಷ ತುಂಬಿಕೊಂಡ ಯಮಲೂರು ಕೆರೆಯ ಕಥೆ ವ್ಯಥೆ]

bengaluru

ಪರಿಸರ ಪ್ರೇಮಿವಸ್ತುಗಳು, ಪಾರಂಪರಿಕವಾದ ಕೈಮಗ್ಗದ ಉತ್ಪನ್ನಗಳು, ಕರಕುಶಲ ವಸ್ತುಗಳು, ಸೌಂದರ್ಯ ವರ್ಧಕಗಳು, ಆಯುರ್ವೇದ ಗೀಡ ಮೂಲಿಕೆಗಳು, ಸಾವಯವ ತರಕಾರಿಗಳು, ಸಾವಯವ ಹಣ್ಣುಗಳು. ಸಾವಯವ ಕಿರು ಧಾನ್ಯಗಳು. ಸಾವಯವ ಆಹಾರ ದಾರ್ಥಗಳು, ಮುಂತಾದ ದೇಸಿ ವಸ್ತುಗಳು ಗ್ರಾಮೀಣ ಅಂಗಡಿಯಲ್ಲಿವೆ.[ಈ ವಿಶ್ವದಲ್ಲಿ ಬದುಕಲು ಇಚ್ಛೆ ಇದ್ದರೆ ಈ ಟಿಪ್ಸ್ ಪಾಲಿಸಿ]

ಹೆಚ್ಚಿನ ಮಾಹಿತಿಗೆ ವ್ಯವಸ್ಥಾಪಕ ಬಿ.ಗಂಗಾಧರಮೂರ್ತಿ ಮೊ: 9448324727 ಅವರನ್ನು ಸಂಪರ್ಕ ಮಾಡಬಹುದು. ಗ್ರಾಮೀಣ ಕರಕುಶಲ ಉದ್ಯಮದ ಒಂದು ಘಟಕವಾಗಿ ಬೆಳೆದು ಬಂದಿರುವ ಸಂಸ್ಥೆ ಪ್ಲಾಸ್ಟಿಕ್ ಬಳಕೆ ತಡೆಯಲು ಸ್ವಯಂ ತೀರ್ಮಾನ ತೆಗೆದುಕೊಂಡಿದೆ.

English summary
Bengaluru: A Desi shop 'Grameena Angadi' conducting Environment awareness programme on World Environment day, June 5. Angadi will issue paper bags which are printed Environment awareness quotes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X