ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ: ಮಾನವೀಯತೆ ಮೆರೆದ ಮಾಧುರ್ಯ

|
Google Oneindia Kannada News

ಬೆಂಗಳೂರು, ಮೇ 15: ಕಿಮೋಥೆರಪಿಯ ನಂತರ ತಮ್ಮ ಕೂದಲನ್ನು ಕಳೆದುಕೊಳ್ಳುವುದು ಕ್ಯಾನ್ಸರ್ ರೋಗಿಗಳ ಪಾಲಿಗೆ ಕಿಮೋಥೆರಪಿಯಿಂದಾಗುವ ನೋವಿನಷ್ಟೇ ಬೇಸರದ ಅನುಭವ. ಆದರೆ ಇತ್ತೀಚೆಗೆ ತರಹೇವಾರಿ ವಿಗ್ ಗಳು ಬಂದು ಕ್ಯಾನ್ಸರ್ ರೋಗಿಗಳು ಕೀಳರಿಮೆಯಿಲ್ಲದೆ ಬದುಕುವಂಥ ಅವಕಾಶವನ್ನು ನೀಡಿದೆ.

ಅರುಣಿಮಾ ಇನ್ನಿಲ್ಲ,ಆದರೆ ಕ್ಯಾನ್ಸರ್ ಗೆ ಸವಾಲೆಸೆದ 'ಜೀವನಪ್ರೀತಿ' ಜೀವಂತಅರುಣಿಮಾ ಇನ್ನಿಲ್ಲ,ಆದರೆ ಕ್ಯಾನ್ಸರ್ ಗೆ ಸವಾಲೆಸೆದ 'ಜೀವನಪ್ರೀತಿ' ಜೀವಂತ

ಆದರೆ ಕ್ಯಾನ್ಸರ್ ರೋಗಿಗಳಿಗೆ ವಿಗ್ ತಯಾರಿಸುವುದಕ್ಕಾದರೂ ಸಹಜ ಕೂದಲು ಬೇಕಲ್ಲ! ಅದನ್ನು ಕೊಡುವವರು ಯಾರು? ತಮ್ಮ ಉದ್ದ ಕೂದಲನ್ನು ಕತ್ತರಿಸಿ, ಕ್ಯಾನ್ಸರ್ ರೋಗಿಗಳಿಗಾಗಿ ನೀಡುವ ಮಾನವೀಯ ಅಂತಃಕರಣವುಳ್ಳ ಹಲವರು ನಮ್ಮೊಂದಿಗಿದ್ದಾರೆ. ಅಂಥವರಲ್ಲಿ ವಿದ್ಯಾರ್ಥಿನಿ ಮಾಧುರ್ಯ ಸುಧೀಂದ್ರ ಅವರೂ ಒಬ್ಬರು.

ಕ್ಯಾನ್ಸರ್ ಎಂಬ ಯಮನಿಗೆ ಸೆಡ್ಡು ಹೊಡೆದ ಗಟ್ಟಿಗಿತ್ತಿ ಶಿವಮೊಗ್ಗದ ಶ್ರುತಿಕ್ಯಾನ್ಸರ್ ಎಂಬ ಯಮನಿಗೆ ಸೆಡ್ಡು ಹೊಡೆದ ಗಟ್ಟಿಗಿತ್ತಿ ಶಿವಮೊಗ್ಗದ ಶ್ರುತಿ

ರೂಪದರ್ಶಿ ಮಿಲಿಂಡ್ ಸೋಮನ್ ಅವರ ಪಿಂಕಥಾನ್ ಕ್ಯಾಂಪೇನ್ ನ ಭಾಗವಾಗಿ, ಏರ್ಪಡಿಸಲಾಗಿದ್ದ ಸಾಮೂಹಿಕ ಕೂದಲು ದಾನ ಕಾರ್ಯಕ್ರಮದಲ್ಲಿ ಇತ್ತೀಚೆಗಷ್ಟೇ ತಮ್ಮ ಉದ್ದದ ಕೂದಲನ್ನು ಮಾಧುರ್ಯ ದಾನ ಮಾಡಿದ್ದಾರೆ.

ಕೂದಲು ಕತ್ತರಿಸುವ ತೀರ್ಮಾನಕ್ಕೆ ಬಂದಿದ್ದ ಮಾಧುರ್ಯ, ಆ ಕೂದಲು ಯಾರಿಗಾದರೂ ಉಪಯೋಗಕ್ಕೆ ಬಂದರೆ ಎಷ್ಟು ಚೆನ್ನ ಎಂದು ಯೋಚಿಸಿದರು. ಆಗ ಪಿಂಕಥಾನ್ ಕ್ಯಾಂಪೇನ್ ಬಗ್ಗೆ ತಿಳಿದ ಮಾಧುರ್ಯ ಕೂದಲನ್ನು ಮತ್ತಷ್ಟು ಉದ್ದ ಬೆಳೆಸಿ, ನಂತರ ಅದನ್ನು ದಾನ ಮಾಡಿದ್ದಾರೆ.

Bengaluru girl Madhurya Sudhindra donates her hair to cancer patients

ಈ ಕೂದಲನ್ನು ಮದತ್ ಟ್ರಸ್ಟ್ ಎಂಬ ಮುಂಬೈ ಮೂಲದ ವಿಗ್ ತಯಾರಿಕಾ ಎನ್ ಜಿಒಗೆ ದಾನ ಮಾಡಲಾಗಿದ್ದು, ಅವರು ಕ್ಯಾನ್ಸರ್ ರೋಗಿಗಳಿಗೆ ಅಗತ್ಯವಿರುವ ರೀತಿಯಲ್ಲಿ ವಿಗ್ ತಯಾರಿಸಿಕೊಡುತ್ತಾರೆ. ಅದಕ್ಕಾಗಿ ಮಾಧುರ್ಯಾ ಅವರಿಗೆ ಮದತ್ ಟ್ರಸ್ಟ್ ಒಂದು ಪ್ರಮಾಣ ಪತ್ರವನ್ನೂ ನೀಡಿ ಗೌರವಿಸಿದೆ.

ಸಾಮಾನ್ಯ ಜನರ ಮಟ್ಟಿಗೆ ಇದು ದೊಡ್ಡ ದಾನವೇ ಅಲ್ಲದಿದ್ದರೂ, ಕ್ಯಾನ್ಸರ್ ನಂಥ ಮಾರಣಾಂತಿಕ ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ವಿಗ್ ಮೂಲಕ ಅದು ಬದುಕಿನ ಭರವಸೆ ನೀಡಬಹುದು. ಯಾರದೋ ಬದುಕಿನಲ್ಲಿ ಮಾಧುರ್ಯ ಒಬ್ಬ 'ಹೀರೋ' ಆಗಬಹುದು. ಬದುಕಿಗೆ ಈ ಸಾರ್ಥಕತೆಗಿಂತ ಇನ್ನೇನು ಬೇಕು?
(ಕೃಪೆ: talktoraghavi ಬ್ಲಾಗ್)

English summary
Madhurya Sudhindra, a student from Bengaluru donated her hair to a trust to make wigs to cancer patients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X