ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಳಾ ದಿನ: ಬೆಂಗಳೂರು ಮಹಿಳೆಯರಿಗೆ ಕೇಂದ್ರ ಭರ್ಜರಿ ಗಿಫ್ಟ್

|
Google Oneindia Kannada News

ಬೆಂಗಳೂರು, ಮಾರ್ಚ್ 3: ಬೆಂಗಳೂರು ನಗರದ ಸೇಫ್ ಸಿಟಿ(ಸುರಕ್ಷಿತ ನಗರ) ಪ್ರಸ್ತಾವಕ್ಕೆ ಕೇಂದ್ರದ ನಿರ್ಭಯಾ ನಿಧಿ ಸಮಿತಿಯಿಂದ ಅನುಮೋದನೆ ದೊರೆತಿದೆ.

ನಗರದಲ್ಲಿ ನಿಗಾ ವ್ಯವಸ್ಥೆ ವೃದ್ಧಿ, ಮಹಿಳಾ ಪೊಲೀಸ್ ಹೊರಠಾಣೆ ಸ್ಥಾಪನೆ, ಮಹಿಳೆಯರು ಹೆಚ್ಚು ಅಪಾಯ ಎದುರಿಸುವ ಸ್ಥಳಗಳಲ್ಲಿ ಸುರಕ್ಷತೆ ಹೆಚ್ಚಳದಂತಹ ಕಾರ್ಯಕ್ರಮಗಳು ಇದರಲ್ಲಿ ಸೇರಿವೆ. ಒಟ್ಟು 667 ಕೋಟಿ ಮೊತ್ತದ ಕಾರ್ಯಕ್ರಮಗಳು ಇದರ ಭಾಗವಾಗಿವೆ.

ಪೊಲೀಸ್ ಠಾಣೆಗಳಲ್ಲಿ ಇರುವ ಸಹಾಯ ಕೇಂದ್ರಗಳಲ್ಲಿ ಎನ್ ಜಿಓಗಳ ಸ್ವಯಂಸೇವಕರ ನೇಮಕ, ಪ್ರಮುಖ ಆಸ್ಪತ್ರೆಗಳಲ್ಲಿ ತುರ್ತು ಆರೈಕೆ ಕೇಂದ್ರಗಳ ಸ್ಥಾಪನೆ ಮುಂತಾದವುಗಳು ಸುರಕ್ಷಿತ ನಗರ ಪ್ರಸ್ತಾವನೆಯಲ್ಲಿ ಸೇರಿವೆ.

ಮಹಿಳೆಯರು, ಮಕ್ಕಳಿಗಾಗಿಯೇ ವಿಶೇಷ ಗುಲಾಬಿ ಶೌಚಾಲಯಮಹಿಳೆಯರು, ಮಕ್ಕಳಿಗಾಗಿಯೇ ವಿಶೇಷ ಗುಲಾಬಿ ಶೌಚಾಲಯ

ಸಾರ್ವಜನಿಕರಲ್ಲಿ ಮಹಿಳಾ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ರಾಣಿ ಚೆನ್ನಮ್ಮ ತಂಡಗಳನ್ನು ರಚಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

Bengaluru gets Rs667 crores for women safety

ಸಚಿವಾಲಯದ ಕಾಯದರ್ಶಿ ರಾಕೇಶ್ ಶ್ರೀವಾಸ್ತವ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮಹಿಳಾ ಸುರಕ್ಷತೆ ಮತ್ತು ಭದ್ರತೆಗೆ ಪ್ರಸ್ತಾವಗಳನ್ನು ಸರ್ಕಾರಕ್ಕೆ ಶಿಫಾರಸುಮಾಡುವ ಅಧಿಕಾರ ಈ ಸಚಿವಾಲಯದ್ದಾಗಿದೆ. ದೆಹಲಿ, ಮುಂಬೈ, ಚೆನ್ನೈ, ಅಹಮದಾಬಾದ್, ಕೊಲ್ಕತ್ತ, ಹೈದರಾಬಾದ್ ಮತ್ತು ಲಖನೌ ನ ಸೇಫ್ ಸಿಟಿ ಯೋಜನೆಗಾಘಿ ಅನುಮೋದನೆ ನೀಡಲಾಗಿದೆ. ಒಟ್ಟು ಎಂಟು ನಗರಗಳಿಗಾಗಿ 2,919 ಕೋಟಿ ಮೀಸಲಿಡಲಾಗಿದೆ.

English summary
To empower women safety and women facilities in Bengaluru city, union government has sanctioned Rs.667 crores of fund under Nirbhaya Programme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X