• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಡ್ಡಿ ಚಿಕ್ಕಣ್ಣ ಹೋಟೆಲ್ ಮಸಾಲೆ ದೋಸೆಗೆ ಮನ ಸೋತ ಪಾಮರನ ಸ್ವಗತ

By ಮುಕುಂದ್
|
Google Oneindia Kannada News

ಅದರ ಹೆಸರು ಚಿಕ್ಕಣ್ಣ ಟಿಫಿನ್ ರೂಮ್. ಅದ್ಯಾಕೆ ಹಾಗೋ ಗೊತ್ತಿಲ್ಲ; ಚಡ್ಡಿ ಚಿಕ್ಕಣ್ಣ ಹೋಟೆಲ್ ಅಂತಲೂ ಅಂತಾರೆ. ಅದರ ಬಗ್ಗೆಯೂ ನೀವು ಪ್ರಕಟಿಸಬೇಕು ಅನ್ನೋದು ಮುಕುಂದ್ ಅವರ ಅಪ್ಪಣೆಯಾಗಿತ್ತು. ಐಬಿಎಂನಲ್ಲಿ ಫೆಸಿಲಿಟಿ ಮ್ಯಾನೇಜರ್ ಆಗಿರುವ ಅವರಿಗೆ ವಾರಾಂತ್ಯಗಳಲ್ಲಿ ಬೆಂಗಳೂರಿನ ಐತಿಹಾಸಿಕ ದೇವಸ್ಥಾನಗಳು ಹಾಗೂ 'ಪುರಾಣ ಪ್ರಸಿದ್ಧ' ಹೋಟೆಲ್ ಗಳಿಗೆ ಹೋಗುವುದು ಆಸಕ್ತಿ, ಕುತೂಹಲ ಹಾಗೂ ಹವ್ಯಾಸ ಎಲ್ಲವೂ ಹೌದು.

ಸಂಪಂಗಿರಾಮನಗರದ ಸಿದ್ದಪ್ಪ ಹೋಟೆಲ್ ನ ಬಗ್ಗೆ ಒನ್ಇಂಡಿಯಾದಲ್ಲಿ ಬಂದ ಲೇಖನದಿಂದ ಉತ್ತೇಜಿತರಾಗಿ, ತಮ್ಮ ನೆಚ್ಚಿನ ಹೋಟೆಲ್ ಗಳಲ್ಲಿ ಒಂದಾದ ಚಿಕ್ಕಣ್ಣ ಟಿಫಿನ್ ರೂಮ್ ಬಗ್ಗೆ ಒಂದು ಲೇಖನ, ಜತೆಗೊಂದು ವಿಡಿಯೋ ಹಾಗೂ ಫೋಟೋ ಕೂಡ ತೆಗೆದು ತಲುಪಿಸಿದ್ದಾರೆ. ಒಂದಲ್ಲ ನಾಲ್ಕು ಸಲ ಹೋಟೆಲ್ ಬಗ್ಗೆ ವಿಚಾರಿಸಿ ಆಮೇಲೆ ಬರೆಯಿರಿ ಎಂದು ವಿಶ್ವಾಸದಿಂದಲೂ ಹೇಳಿದ್ದಾರೆ.

ಸಂಪಂಗಿರಾಮನಗರದ ಸಿದ್ದಪ್ಪ ಹೋಟೆಲ್ ಅರ್ಧ ಮಸಾಲೆ ದೋಸೆ ಬಗ್ಗೆ ಗೊತ್ತಾ?ಸಂಪಂಗಿರಾಮನಗರದ ಸಿದ್ದಪ್ಪ ಹೋಟೆಲ್ ಅರ್ಧ ಮಸಾಲೆ ದೋಸೆ ಬಗ್ಗೆ ಗೊತ್ತಾ?

ಆದರೂ ಸ್ವಲ್ಪ ಅನುಮಾನದಿಂದಲೇ ಆ ಹೋಟೆಲ್ ಬಗ್ಗೆ ನಾವೊಂದಿಷ್ಟು ತನಿಖೆ ಮಾಡಿದೆವು. ಮುಕುಂದ್ ಅವರು ಚಿಕ್ಕಣ್ಣ ಹೋಟೆಲ್ ರುಚಿಗೆ ಮನ ಸೋತಿದ್ದರೆ ವಿನಾ ಆ ಕಾರಣದಿಂದ ಮೈ ಮರೆತಿರಲಿಲ್ಲ. ಆ ಧೈರ್ಯದ ಮೇಲೆಯೇ ಈ ಲೇಖನ ಪ್ರಕಟವಾಗುತ್ತಿದೆ. ಅದೆಲ್ಲ ಇರಲಿ, ಇಲ್ಲಿಂದ ಮುಂದೆ ಚಿಕ್ಕಣ್ಣ ಹೋಟೆಲ್ ನ ಅನುಭವಾಮೃತವನ್ನು ಮುಕುಂದ್ ಅವರ ಮಾತುಗಳಲ್ಲೇ ನೀಡಲಾಗುತ್ತಿದೆ.

ಚಿಕ್ಕಣ್ಣ ಹೋಟೆಲ್ ಗೆ ಹೋಗೋದು ಹೀಗೆ

ಚಿಕ್ಕಣ್ಣ ಹೋಟೆಲ್ ಗೆ ಹೋಗೋದು ಹೀಗೆ

ಈ ಚಿಕ್ಕಣ್ಣ ಟಿಫಿನ್ ರೂಮ್ ಇರುವುದು ಬೆಂಗಳೂರಿನ ಟೌನ್ ಹಾಲ್ ನಿಂದ ಮುಂದೆ ಹೋದರೆ, ಹಲಸೂರು ಪೊಲೀಸ್ ಸ್ಟೇಷನ್ ಸಿಗುತ್ತಲ್ಲಾ, ಅದರ ಎಡಗಡೆಗೆ ಹೋದರೆ, ಅಲ್ಲಿಂದ ಇಷ್ಟನೇ ಗಲ್ಲಿ ಎಂದು ಹುಡುಕಾಡಿದರೆ ಆಯಿತು. ಆದರೆ ಅಲ್ಲೇ ಓಡಾಡುವ ಜನರನ್ನು ಕೇಳಿದರೆ ಸುಲಭವಾಗಿ ವಿಳಾಸ ಹೇಳುತ್ತಾರೆ. ತುಂಬ ಹುಡುಕಾಡುವ ಪ್ರಮೇಯವೇ ಇಲ್ಲ. ಈ ಟಿಫನ್ ರೂಮ್ ನಲ್ಲಿ ತಿಂಡಿ ಮಾತ್ರ ಸಿಗುತ್ತದೆ. ಬೆಳಗ್ಗೆ 7-7.30ಗೆ ಆರಂಭವಾದರೆ ಮಧ್ಯಾಹ್ನ 12-12.30 ತನಕ ತೆರೆದಿರುತ್ತದೆ. ಮತ್ತೆ ಸಂಜೆ 4.30ಗೆ ಶುರುವಾದರೆ 7-7.30ರ ತನಕ ಇರುತ್ತದೆ. ಇಡ್ಲಿ, ಮಸಾಲೆ ದೋಸೆ, ರೈಸ್ ಬಾತ್, ಖಾಲಿ ದೋಸೆ..ಇಷ್ಟು ಕೂಡ ಇಲ್ಲಿ ಬಹಳ ಫೇಮಸ್. ನೆನಪಿಟ್ಟುಕೊಳ್ಳಿ, ಇಲ್ಲಿ ಕಾಫಿ- ಟೀ ಸಿಗೋದಿಲ್ಲ.

ವಾರಾಂತ್ಯಗಳಲ್ಲಿ ಜನಸಂದಣಿ ಜಾಸ್ತಿ

ವಾರಾಂತ್ಯಗಳಲ್ಲಿ ಜನಸಂದಣಿ ಜಾಸ್ತಿ

ವಾರದ ಎಲ್ಲ ದಿನಗಳಲ್ಲಿ ಈ ಹೋಟೆಲ್ ತೆರೆದಿರುತ್ತದೆ. ಆದರೆ ವಾರಾಂತ್ಯಗಳಲ್ಲಿ ಜನ ಸಂದಣಿ ಸ್ವಲ್ಪ ಜಾಸ್ತಿ ಇರುತ್ತದೆ. ನಾವು ಹೋಟೆಲ್ ಗೆ ಹೋಗುವುದು ಸಾಧಾರಣವಾಗಿ ಶನಿವಾರ- ಭಾನುವಾರಗಳಲ್ಲೇ. ಬೆಳಗಿನ ತಿಂಡಿ ಅಲ್ಲೇ ಮಾಡ್ತೀವಿ. ಇಡ್ಲಿ, ಮಸಾಲೆ ದೋಸೆ, ಖಾಲಿ ದೋಸೆ, ರೈಸ್ ಬಾತ್ ಎಲ್ಲವೂ ಒಂದೊಂದು ಹೇಳ್ತೀವಿ.

ಕಾಂಪಿಟೇಷನ್ ನಲ್ಲಿ ಸಾಗುವಿನ ಮೇಲೆ ಚಟ್ನಿಯದೇ ಗೆಲುವು

ಕಾಂಪಿಟೇಷನ್ ನಲ್ಲಿ ಸಾಗುವಿನ ಮೇಲೆ ಚಟ್ನಿಯದೇ ಗೆಲುವು

ಅಂದರೆ, ಹೋದವರು ಅಷ್ಟೂ ಜನ ಒಂದೊಂದು ಹೇಳ್ತೀವಿ ಅಂತಲ್ಲ. ಒಂದನ್ನೇ ಹೇಳಿ, ಎಲ್ಲರೂ ಒಂದರಲ್ಲೇ ಹಂಚಿಕೊಂಡು ರುಚಿ ನೋಡ್ತೀವಿ. ರೈಸ್ ಬಾತ್, ದೋಸೆ ಹೀಗೆ ಏನೇ ತೆಗೆದುಕೊಂಡರೂ ಅದಕ್ಕೆ ಸಾಗು- ಚಟ್ನಿ ಎರಡೂ ಇಲ್ಲಿ ಕೊಡ್ತಾರೆ. ಎರಡರ ರುಚಿಯ ಮಧ್ಯೆ ಭಯಂಕರ ಕಾಂಪಿಟೇಷನ್ ಇದ್ದರೂ ನನ್ನ ಪ್ರಕಾರ ಚಟ್ನಿಯದೇ ಗೆಲುವು. ಇತ್ತೀಚೆಗೆ ಶೇಷಾದ್ರಿಪುರಂನಲ್ಲೂ ಚಿಕ್ಕಣ್ಣ ಹೋಟೆಲ್ ಶುರುವಾಗಿದೆ.

53 ವರ್ಷದ ಹಳೆಯ ಹೋಟೆಲ್

53 ವರ್ಷದ ಹಳೆಯ ಹೋಟೆಲ್

ಹ್ಞಾಂ, ಹೇಳುವುದು ಮರೆತಿದ್ದೆ. ಈ ಹೋಟೆಲ್ ಶುರುವಾಗಿದ್ದು 1965ರಲ್ಲಂತೆ. ಅಲ್ಲಿಗೆ 53 ವರ್ಷಗಳನ್ನು ಕಳೆದಿದೆ. ಅದೆಷ್ಟೋ ಲಕ್ಷ ಮಂದಿ ಈ ಹೋಟೆಲ್ ನಲ್ಲಿ ರುಚಿ ನೋಡಿದ್ದಾರೆ. ಲೋಕೋ ಭಿನ್ನ ರುಚಿಃ ಎಂಬ ಮಾತು ಏನೇ ಇದ್ದರೂ ಚಿಕ್ಕಣ್ಣ ಹೋಟೆಲ್ ನ ರುಚಿಯಲ್ಲಿ ನಿರಾಸೆ ಇಣಕುವುದಿಲ್ಲ. ವಾಹನದ ಪಾರ್ಕಿಂಗ್ ಬಗ್ಗೆ ಸ್ವಲ್ಪ ನೋಡಿಕೊಳ್ಳಿ. ಉಳಿದಂತೆ ಸಾಧ್ಯವಾದರೆ ಇಂಥದ್ದೇ ಮತ್ತೊಂದು ಹೋಟೆಲ್ ನ ಬಗ್ಗೆ ನಿಮ್ಮ ಜತೆ ಅನುಭವ ಹಂಚಿಕೊಳ್ತೀನಿ.

ನೀವೂ ಬರೆಯಬಹುದು

ನೀವೂ ಬರೆಯಬಹುದು

ಬೆಂಗಳೂರಿನ ಪ್ರಖ್ಯಾತ, ರುಚಿಕಟ್ಟಾದ ತಿಂಡಿ- ಊಟ- ಆಹಾರ ಖಾದ್ಯಗಳನ್ನು ಒನ್ಇಂಡಿಯಾ ಓದುಗರಿಗೆ ಪರಿಚಯಿಸುವುದು ನಮ್ಮ ಉದ್ದೇಶ. ಅಂಥ ಹೋಟೆಲ್ ಗಳಿದ್ದರೆ ನೀವೂ ತಿಳಿಸಬಹುದು. ಆ ಹೋಟೆಲ್ ನ ಹೆಸರು, ಎಲ್ಲಿದೆ ಎಂಬ ವಿಳಾಸ, ಅಲ್ಲಿ ಸಿಗುವ ಆಹಾರ ಪದಾರ್ಥಗಳು, ಯಾವ ದಿನಗಳಲ್ಲಿ- ಎಷ್ಟು ಸಮಯ ತೆರೆದಿರುತ್ತದೆ. ಹೋಟೆಲ್ ಇತಿಹಾಸ, ಮಾಲೀಕರು ಹಾಗೂ ಸಿಬ್ಬಂದಿ ಬಗ್ಗೆ ಒಂಚೂರು ವಿವರ, ಆಹಾರ ಪದಾರ್ಥಗಳ ಬೆಲೆ ಇತ್ಯಾದಿ ಮಾಹಿತಿ ಇರಲಿ. ಕೆಲವು ಫೋಟೋಗಳು, ಕೆಲ ನಿಮಿಷದ ವಿಡಿಯೋ ಜತೆಗೆ ಲೇಖಕ ಅಥವಾ ಲೇಖಕಿಯಾದ ನಿಮ್ಮ ಬಗ್ಗೆ ಪರಿಚಯ ಮತ್ತು ಫೋನ್ ನಂಬರ್ ಇರಲಿ. ನಮ್ಮ ಇಮೇಲ್ ವಿಳಾಸ kannada@oneindia.co.in

English summary
Here is the special article about Bengaluru famous food point Cubbon pet Chaddi Chikkanna hotel by IBM company facility manager Mukund.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X