ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ನಿರ್ಮಾಣವಾಗಲಿವೆ 81 ಸಬರ್ಬನ್ ನಿಲ್ದಾಣಗಳು

|
Google Oneindia Kannada News

ಬೆಂಗಳೂರು, ಜನವರಿ 3: ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಮ್ಮ ಮೆಟ್ರೋವನ್ನು ಆರಂಭಿಸಲಾಗಿದೆ, ಇದೀಗ ಸಂಚಾರ ದಟ್ಟಣೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಇದೀಗ ಸರ್ಕಾರ ಮತ್ತೊಂದು ನಿರ್ಧಾರವನ್ನು ತೆಗೆದುಕೊಂಡಿದೆ.

19,500 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಂಗಳೂರಿನಲ್ಲಿ 81 ಸಬರ್ಬನ್ ರೈಲು ನಿಲ್ದಾಣಗಳು ಒಟ್ಟು 161 ಕಿಲೋಮೀಟರ್ ವ್ಯಾಪ್ತಿಯಲ್ಲಿ ಇದು ಕಾರ್ಯಾರಂಭ ಮಾಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸಬರ್ಬನ್‌ ಯೋಜನೆ ಚುರುಕು: ಮತ್ತಷ್ಟು ರೈಲುಗಳು ಮೆಮುವಾಗಿ ಪರಿವರ್ತನೆ ಸಬರ್ಬನ್‌ ಯೋಜನೆ ಚುರುಕು: ಮತ್ತಷ್ಟು ರೈಲುಗಳು ಮೆಮುವಾಗಿ ಪರಿವರ್ತನೆ

ಸಬರ್ಬನ್ ನಿಲ್ದಾಣಗಳ ಮೂಲಕ ದಿನನಿತ್ಯ 10 ಲಕ್ಷ ಮಂದಿ ಪ್ರಯಾಣ ಮಾಡಬಹುದೆಂದು ಅಂದಾಜಿಸಲಾಗಿದೆ.

Bengaluru finaly getting 81 suburban stations

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಸಬರ್ಬನ್ ರೈಲು ಸಂಪರ್ಕ ಕಲ್ಪಿಸಲಿದ್ದು, ಇದಕ್ಕೆ 1,500 ಕೋಟಿ ರೂ ವೆಚ್ಚ ತಗಲಬಹುದೆಂದು ಅಂದಾಜಿಸಲಾಗಿದೆ.

ಪ್ರಯಾಣಿಕರಿಂದ ಸಬರ್ಬನ್ ರೈಲು ಮಾಹಿತಿಗೆ ನೂತನ ಆ್ಯಪ್‌! ಪ್ರಯಾಣಿಕರಿಂದ ಸಬರ್ಬನ್ ರೈಲು ಮಾಹಿತಿಗೆ ನೂತನ ಆ್ಯಪ್‌!

ಬೆಂಗಳೂರು ನಗರದಾದ್ಯಂತ ಒಟ್ಟು ನಾಲ್ಕು ಕಾರಿಡಾರ್ ಗಳಲ್ಲಿ ಸಬರ್ಬನ್ ನಿಲ್ದಾಣಗಳು ಆರಂಭವಾಗುತ್ತಿದ್ದು, ಕಾರಿಡಾರ್ ಒಂದರ ವ್ಯಾಪ್ತಿಯಲ್ಲಿ ಕೆಂಗೇರಿಯಿಂದ ವೈಟ್ ಫೀಲ್ಡ್ ವರೆಗೆ 35.47 ಕಿಲೋಮೀಟರ್, ಕಾರಿಡಾರ್ ಎರಡರ ವ್ಯಾಪ್ತಿಯಲ್ಲಿ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ರಾಜಾನುಕುಂಟೆವರೆಗೆ 24.88 ಕಿಲೋಮೀಟರ್, ಕಾರಿಡಾರ್ ಮೂರರ ವ್ಯಾಪ್ತಿಯಲ್ಲಿ ನೆಲಮಂಗಲದಿಂದ ಬೈಯಪ್ಪನಹಳ್ಳಿವರೆಗೆ 38.94 ಕಿಲೋಮೀಟರ್ ಹಾಗೂ ಕಾರ್ಯಕಾರಿ ನಾಲ್ಕರ ವ್ಯಾಪ್ತಿಯಲ್ಲಿ ಹಿಲಾಲಿಗೆಯಿಂದ ದೇವನಹಳ್ಳಿವರೆಗೆ 61.21 ಕಿಲೋಮೀಟರ್ ವ್ಯಾಪಿಸಲಿದೆ.

English summary
The much delayed suburban train network in Bengaluru got a fillip with CM HD Kumaraswamy instructing the chief secretary to get all the necessary clearances for the project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X