ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊನೆಗೂ ಏರ್ ಪೋರ್ಟ್‌ಗೆ ಬದಲಿ ಮಾರ್ಗ!

|
Google Oneindia Kannada News

ಬೆಂಗಳೂರು, ಮಾರ್ಚ್ 05: ನಗರದಿಂದ ಏರ್ ಪೋರ್ಟ್ ತಲುಪಲು ಪ್ರಯಾಸ ಪಡುತ್ತಿದ್ದ ನಾಗರಿಕರು ಈಗ ಪರ್ಯಾಯ ಮಾರ್ಗದ ಮೂಲಕ ಕೆಐಎಎಲ್ ಗೆ ಪ್ರಯಾಣಿಸಬಹುದು. ಇದರಿಂದಾಗಿ ಬಹು ನಿರೀಕ್ಷಿತ ಪರ್ಯಾಯ ಮಾರ್ಗ ಬಳ್ಳಾರಿ ರಸ್ತೆ ಮೇಲಿನ ಸಂಚಾರದ ಒತ್ತಡವನ್ನು ತಗ್ಗಿಸುವ ನಿರೀಕ್ಷೆ ಇದೆ.

105.85ಕೋಟಿ ರು ವೆಚ್ಚ: ರಿಂಗ್ ರಸ್ತೆಯ ಹೆಣ್ಣೂರು ಜಂಕ್ಷನ್ ಹಾಗೂ ನಾಗವಾರ ಜಂಕ್ಷನ್ ಇಂದ ಬಾಗಳೂರು ಮಾರ್ಗವಾಗಿ ಏರ್ ಪೋರ್ಟ್ ನ ನೈಋತ್ಯ ದಿಕ್ಕಿನಲ್ಲಿ ಪರ್ಯಾಯ ಮಾರ್ಗ ಸಿದ್ಧಗೊಂಡಿದೆ. ಇದಕ್ಕಾಗಿ ಸರ್ಕಾರ 105.85 ಕೋಟಿ ರೂ ವೆಚ್ಚಮಾಡಿದೆ. ಭೂಸ್ವಾಧೀನ ಹಾಗೂ ಮಾರ್ಗ ನಿರ್ಮಿಸಲು ಕೆಐಎಎಲ್ ಒಪ್ಪಿಗೆ ನೀಡುವಲ್ಲಿ ವಿಳಂಬವಾದ ಕಾರಣ ಕೆಲ ತಿಂಗಳು ಕಾಮಗಾರಿ ಸ್ಥಗಿತಗೊಂಡಿತ್ತು.

16 ಕೋಟಿ ವೆಚ್ಚದಲ್ಲಿ ಕೆಂಪೇಗೌಡ ಬಡಾವಣೆ ಅಭಿವೃದ್ಧಿಗೆ ಸಿಎಂ ಚಾಲನೆ16 ಕೋಟಿ ವೆಚ್ಚದಲ್ಲಿ ಕೆಂಪೇಗೌಡ ಬಡಾವಣೆ ಅಭಿವೃದ್ಧಿಗೆ ಸಿಎಂ ಚಾಲನೆ

ವಿದ್ಯುತ್ ಹೈಟೆನ್ಶನ್ ಮಾರ್ಗ ಬದಲಿಸುವ ಕಾರಣದಿಂದಲೂ ಕೆಲ ಕಾಲ ಕಾಮಗಾರಿ ನಿಧಾನಗೊಂಡಿತ್ತು. ಹಲವು ಅಡೆತಡೆ ಮಧ್ಯೆಯೂ ಪರ್ಯಾಯ ಮಾರ್ಗ ಸಿದ್ಧಗೊಂಡಿರುವುದು ವಾಹನ ಸವಾರರಿಗೆ ನೆಮ್ಮದಿ ತಂದಿದೆ.

Bengaluru finally gets another road to Airport

ಹೊಸ ರಸ್ತೆಗಳ ನಿರ್ಮಾಣಕ್ಕೆ ಚಾಲನೆ: ಏರ್ ಪೋರ್ಟ್ ಸುತ್ತ ಈಗಾಗಲೇ ನಾಲ್ಕು ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ. ಹಿಂದಿನ ವರ್ಷದ ಬಜೆಟ್ ನಲ್ಲಿ ಘೋಷಿಸಿದ ಬಳಿಕ 2040 ಕೋಟಿ ರೂ ವೆಚ್ಚದ ಕಾಮಗಾರಿ ಇತ್ತೀಚೆಗೆ ಆರಂಭಗೊಂಡಿದೆ. ಈ ರಸ್ತೆಗೆ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಡಿಗಲ್ಲು ಹಾಕಿದ್ದಾರೆ.

English summary
The formula launch of an alternative road to Kempegowda International Airport by the chief minister Siddaramaiah on Sunday. Has made access to airport easier for residence of Whitefield, Hosakote, KR Puram and Outer ring road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X