• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೇಶದ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ ಕ್ವಿಜ್ ಗೆ ಬೆಂಗಳೂರು ಸಜ್ಜು

By Mahesh
|

ಬೆಂಗಳೂರು, ಜುಲೈ 26: ಮಾಹಿತಿ ತಂತ್ರಜ್ಞಾನ ಸೇವೆ, ಕನ್ಸಲ್ಟಿಂಗ್, ಕಂಪನಿಗಳಿಗೆ ಪರಿಹಾರಗಳನ್ನು ಪೂರೈಕೆ ಮಾಡುವ ಪ್ರಮುಖ ಸಂಸ್ಥೆಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) ತನ್ನ ಟಿಸಿಎಸ್ ಐಟಿ ವಿಜ್ 2016 ಅನ್ನು ಘೋಷಣೆ ಮಾಡಿದೆ. ಇದು ದೇಶದ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ ಕ್ವಿಜ್ ಆಗಿದ್ದು, ಬೆಂಗಳೂರಿನ ವೈಯಾಲಿಕಾವಲ್ ನಲ್ಲಿರುವ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಆಗಸ್ಟ್ 4 ಗುರುವಾರ ನಡೆಯಲಿದೆ.

ಇದರಲ್ಲಿ ಪಾಲ್ಗೊಳ್ಳಲು ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. 8 ರಿಂದ 12 ನೇ ತರಗತಿ (ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ) ವರೆಗಿನ ವಿದ್ಯಾರ್ಥಿಗಳು ಈ ಕ್ವಿಜ್ ನಲ್ಲಿ ಪಾಲ್ಗೊಳ್ಳಬಹುದಾಗಿದೆ. ಪ್ರತಿ ಶಿಕ್ಷಣ ಸಂಸ್ಥೆಗಳು ತಮ್ಮ ಸಂಸ್ಥೆಯಿಂದ ತಲಾ ಇಬ್ಬರು ವಿದ್ಯಾರ್ಥಿಗಳನ್ನು ಒಳಗೊಂಡ 10 ತಂಡಗಳನ್ನು ಕಳುಹಿಸಲು ಅವಕಾಶವನ್ನು ಕಲ್ಪಿಸಲಾಗಿದೆ.

ಟಿಸಿಎಸ್ ವಿಜ್ 2016 ದೇಶದ ಒಟ್ಟು 15 ಸ್ಥಳಗಳಲ್ಲಿ ನಡೆಯುತ್ತಿದೆ. ಅಹ್ಮದಾಬಾದ್, ಬೆಂಗಳೂರು, ಭುವನೇಶ್ವರ, ಚೆನ್ನೈ, ಕೊಯಮತ್ತೂರು, ದೆಹಲಿ, ಹೈದ್ರಾಬಾದ್, ಇಂದೋರ್, ಕೊಚ್ಚಿ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ಪುಣೆ ಮತ್ತು ವಿಶಾಖಪಟ್ಟಣದಲ್ಲಿ ಈ ಕ್ವಿಜ್ ನಡೆಯಲಿದೆ.

ಪ್ರತಿ ಸಂಸ್ಥೆ 10 ತಂಡಗಳನ್ನು ಕಳುಹಿಸಲು ಅವಕಾಶವಿದ್ದು, ಪ್ರವೇಶ ಅರ್ಜಿಯನ್ನು ಆಯಾ ಸಂಸ್ಥೆಗಳು ಜುಲೈ 29 ರೊಳಗೆ ಟಿಸಿಎಸ್ ಐಟಿ ವಿಜ್ ಕೋ ಆರ್ಡಿನೇಟರ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಸ್‍ಐಎಂ ಟವರ್, 18, ಶೇಷಾದ್ರಿ ರಸ್ತೆ, ಗಾಂಧಿನಗರ, ಬೆಂಗಳೂರು-560009 ಇಲ್ಲಿಗೆ ಕಳುಹಿಸಬೇಕು.

ಹೆಚ್ಚಿನ ಮಾಹಿತಿಗಾಗಿ 080-6724 6000 ಅಥವಾ ವೆಬ್ ಸೈಟ್ www.tcsitwiz.com ಇಲ್ಲಿ ನೋಂದಣಿ ಮಾಡಿಕೊಳ್ಳಬಹುದು.

ಕ್ವಿಜ್ ಹೀಗಿರುತ್ತದೆ

ಕ್ವಿಜ್ ಹೀಗಿರುತ್ತದೆ

ಈ ಕ್ವಿಜ್ ನಲ್ಲಿ ಪಾಲ್ಗೊಂಡು ಪ್ರಾಥಮಿಕ ಸುತ್ತಿನಲ್ಲಿ ಟಾಪ್ 6 ತಂಡಗಳು ಪ್ರಾದೇಶಿಕ ಫೈನಲ್ ಗೆ ಪ್ರವೇಶ ಪಡೆಯುತ್ತವೆ. ಪ್ರತಿ ಶಾಲೆಯ ಟಾಪರ್ ತಂಡವನ್ನು ವೇದಿಕೆಗೆ ಕರೆ ತಂದು ಸನ್ಮಾನಿಸಲಾಗುತ್ತದೆ.

ಪ್ರಾದೇಶಿಕ ಹಂತದ ಫೈನಲ್ ನಲ್ಲಿ ವಿಜೇತವಾಗುವ ತಂಡ ಮುಂಬೈನಲ್ಲಿ ಡಿಸೆಂಬರ್ ನಲ್ಲಿ ನಡೆಯಲಿರುವ ಮೆಗಾಫೈನಲ್ ನಲ್ಲಿ ಸ್ಪರ್ಧಿಸಲಿದೆ. ಈ ತಂಡವನ್ನು ಟಿಸಿಎಸ್ ಸಂಸ್ಥೆ ವಿಮಾನದಲ್ಲಿ ಮುಂಬೈಗೆ ಕರೆದೊಯ್ಯಲಿದೆ.

ನೋಡ್ ಕಾಂಟೆಸ್ಟ್

ನೋಡ್ ಕಾಂಟೆಸ್ಟ್

ಸಂಪರ್ಕಜಾಲದಲ್ಲಿ ಯಾವುದೇ ಪಾಯಿಂಟನ್ನು 'ನೋಡ್' ಎಂದು ಕರೆಯಲಾಗುತ್ತದೆ. ಕ್ರಿಪ್ಟಿಕ್ ಕ್ಲೂಗಳ ನೆರವಿನಿಂದ ಜನರು ಮತ್ತು ಕಂಪನಿಗಳ ನಡುವಿನ ಸಂಪರ್ಕ ಕಲ್ಪಿಸುವ ಬಗೆಗಿನ ಸ್ಪರ್ಧೆ ಈ ನೋಡ್. ಇಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಸ್ಪರ್ಧಿಗಳು @TCSITWizಗೆ ಕಳುಹಿಸಬೇಕು ಅಥವಾ ಫೇಸ್‍ಬುಕ್ ಪೇಜ್ ಇಲ್ಲಿಗೆ ಪೋಸ್ಟ್ ಮಾಡಬಹುದು. ಇಲ್ಲಿ ವಿಜೇತರಾಗುವವರಿಗೆ ಬ್ಲೂಟೂತ್ ಸ್ಪೀಕರ್ ಮತ್ತು ಇಯರ್ ಫೋ ನ್ ಗಳು ಬಹುಮಾನ ರೂಪದಲ್ಲಿ ದೊರೆಯಲಿವೆ.

ಟ್ವೀಟ್ ಪೋರ್ಟಿಂಗ್/ ಬಹುಮಾನಗಳು

ಟ್ವೀಟ್ ಪೋರ್ಟಿಂಗ್/ ಬಹುಮಾನಗಳು

ಪ್ರಾದೇಶಿಕ ಹಂತದಲ್ಲಿ ವಿಜೇತರಾಗುವ ತಂಡದ ಸದಸ್ಯರಿಗೆ ಐಪಾಡ್ ಏರ್ ಸಿಗಲಿದ್ದರೆ, ರನ್ನರ್ ಅಪ್ ತಂಡಕ್ಕೆ ಐಪಾಡ್ ಮಿನಿ ಸಿಗಲಿದೆ. ಇದರ ಜತೆಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ಟ್ರೋಫಿ ಮತ್ತು ಪದಕಗಳೂ ಸಿಗಲಿವೆ.

ಪ್ರಾದೇಶಿಕ ಫೈನಲ್‍ನಲ್ಲಿ ಟ್ವೀಟ್ ಸ್ಪರ್ಧೆಯೂ ಇರುತ್ತದೆ. ಇಲ್ಲಿ ಅತಿ ಹೆಚ್ಚು ಟ್ವೀಟ್ ಮಾಡಿದ ಮತ್ತು ಅತ್ಯುತ್ತಮವಾದುದ್ದನ್ನು 'ಟ್ವೀಟ್ ಆಫ್ ದಿ ಡೇ'' ಎಂದು ಪರಿಗಣಿಸಿ ಒಂದು ಬ್ಲೂಟೂತ್ ಸ್ಪೀಕರ್ ಮತ್ತು ಇಯರ್ ಫೋನ್ ಅನ್ನು ಬಹುಮಾನವಾಗಿ ನೀಡಲಾಗುತ್ತದೆ. in pic : ಎನ್ ಪಿಎಸ್ ನ ಶ್ಯಾಮ್ ಗೋಪಾಲ್ ಹಾಗೂ ಅಖಿಲ್

ಅಂಕಿತ್ ಹಾಗೂ ವಿಕ್ರಮ್ ಕಳೆದ ಬಾರಿ ವಿಜೇತರು

ಅಂಕಿತ್ ಹಾಗೂ ವಿಕ್ರಮ್ ಕಳೆದ ಬಾರಿ ವಿಜೇತರು

ಸ್ಥಳೀಯ, ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದ ಐಟಿ ವೃತ್ತಿಪರರು, ಐಟಿ ಬ್ರಾಂಡ್‍ಗಳು, ಕಂಪನಿಗಳು, ಸಾಫ್ಟ್‍ವೇರ್ ಉತ್ಪನ್ನಗಳು, ಮಾಹಿತಿ ತಂತ್ರಜ್ಞಾನದ ಇತಿಹಾಸ ಇತ್ಯಾದಿ.

ಕ್ಲೌಡ್ ಕಂಪ್ಯೂಟಿಂಗ್, ಟೆಲಿಕಾಂ, ಬಯೋಮೆಟ್ರಿಕ್ಸ್, ರೋಬೊಟಿಕ್ಸ್, ಇಂಟರ್ನೆಟ್ ಜಗತ್ತು, ವಿನೂತನವಾದ ವೆಬ್ ಸೈಟ್ ಸೇರಿದಂತೆ ಹಲವು ಮಾಹಿತಿಗಳು.

ತಂತ್ರಜ್ಞಾನ ಪರಿಸರ, ವ್ಯವಹಾರ, ಜನತೆ, ಹೊಸ ಟ್ರೆಂಡ್ ಸೇರಿದಂತೆ ಹತ್ತಾರು ವಿಷಯಗಳ ಮೇಲೆ ಈ ಕ್ವಿಜ್ ಕೇಂದ್ರೀಕೃತವಾಗಿರುತ್ತದೆ.

English summary
Tata Consultancy Services (TCS), a leading IT services, consulting and business solutions firm, announced today that the Bengaluru edition of TCS IT Wiz 2016 – India’s largest technology quiz for schools will be held on Thursday, August 04, at Chowdiah Memorial Hall, Vyalikaval.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X