ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡ್ರಗ್ಸ್ ಪ್ರಕರಣದ ತನಿಖೆ; ಸಿಸಿಬಿ ಕಚೇರಿಗೆ ಇಡಿ ಅಧಿಕಾರಿಗಳ ಭೇಟಿ!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 11: ಬೆಂಗಳೂರಿನ ಡ್ರಗ್ಸ್ ಜಾಲದ ಕುರಿತು ಸಿಸಿಬಿ ತನಿಖೆ ಮುಂದುವರೆದಿದೆ. ಇಡಿ ಅಧಿಕಾರಿಗಳು ಸಹ ಕೆಲವು ಮಾಹಿತಿಗಳನ್ನು ಸಂಗ್ರಹ ಮಾಡಿದ್ದು, ತನಿಖೆ ಕೈಗೊಳ್ಳುವ ಸಾಧ್ಯತೆ ಇದೆ. ನಟಿ ರಾಗಿಣಿ ದ್ವಿವೇದಿ ಪೊಲೀಸ್ ಕಸ್ಟಡಿ ಶುಕ್ರವಾರ ಅಂತ್ಯವಾಗಲಿದೆ.

ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಸಿಸಿಬಿ ಕಚೇರಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡಿದ್ದಾರೆ. ಸಿಸಿಬಿ ಪೊಲೀಸರ ವಶದಲ್ಲಿರುವ ಆರೋಪಿ ವಿರೇನ್ ಖನ್ನಾ ವಹಿವಾಟಿನ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ರಾಜಕಾರಣಿಗಳಿಂದಲೇ ಡ್ರಗ್ಸ್ ದಂಧೆ: ಪ್ರಮೋದ್ ಮುತಾಲಿಕ್ ಗಂಭೀರ ಆರೋಪ ರಾಜಕಾರಣಿಗಳಿಂದಲೇ ಡ್ರಗ್ಸ್ ದಂಧೆ: ಪ್ರಮೋದ್ ಮುತಾಲಿಕ್ ಗಂಭೀರ ಆರೋಪ

ಸೆಲೆಬ್ರಿಟಿ ಪಾರ್ಟಿಗಳನ್ನು ಆಯೋಜನೆ ಮಾಡುತ್ತಿದ್ದ ಖನ್ನಾ ವಿದೇಶದಿಂದ ಡ್ರಗ್ಸ್ ತರಿಸಿಕೊಂಡಿದ್ದು, ಅಲ್ಲಿನ ಡ್ರಗ್ಸ್ ಡೀಲರ್‌ ಜೊತೆ ನಂಟು ಹೊಂದಿದ್ದ, ವಿದೇಶಿಯರ ಜೊತೆ ಹಣದ ವಹಿವಾಟು ನಡೆಸುವಾಗ ಹವಾಲಾ ವ್ಯವಹಾರ ನಡೆದಿದೆ ಎಂಬುದು ಇಡಿ ಅಧಿಕಾರಿಗಳ ಶಂಕೆಯಾಗಿದೆ.

ಬೆಂಗಳೂರು ಏರ್ ಪೋರ್ಟ್‌ನಲ್ಲಿ 1 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಬೆಂಗಳೂರು ಏರ್ ಪೋರ್ಟ್‌ನಲ್ಲಿ 1 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ

Bengaluru drug Case ED Visits CCB Office

ಹವಾಲಾ ವ್ಯವಹಾರ ನಡೆದಿರುವ ಬಗ್ಗೆ ಇಡಿ ಅಧಿಕಾರಿಗಳಿಗೆ ಖಚಿತವಾದ ಮಾಹಿತಿ ಸಿಕ್ಕರೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಲಿದ್ದಾರೆ. ದೆಹಲಿಯಲ್ಲಿ ವಿರೇನ್ ಖನ್ನಾ ಬಂಧಿಸಿದ್ದ ಸಿಸಿಬಿ ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸುತ್ತಿದೆ.

ಡ್ರಗ್ಸ್ ಸೇವನೆ ಬಗ್ಗೆ ತಿಳಿದುಕೊಳ್ಳಲು ತಲೆಕೂದಲೇ ಸಾಕು! ಡ್ರಗ್ಸ್ ಸೇವನೆ ಬಗ್ಗೆ ತಿಳಿದುಕೊಳ್ಳಲು ತಲೆಕೂದಲೇ ಸಾಕು!

ಪೊಲೀಸ್ ಕಸ್ಟಡಿ ಅಂತ್ಯ: ನಟಿ ರಾಗಿಣಿ ದ್ವಿವೇದಿ ಪೊಲೀಸ್ ಕಸ್ಟಡಿ ಶುಕ್ರವಾರ ಅಂತ್ಯಗೊಳ್ಳಲಿದೆ. ವಿಡಿಯೋ ಕಾನ್ಪರೆನ್ಸ್ ಮೂಲಕ ಅವರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುತ್ತದೆ. ಮೊದಲು ಮೂರು ದಿನ, ಬಳಿಕ 5 ದಿನ ಸಿಸಿಬಿ ರಾಗಿಣಿ ವಿಚಾರಣೆ ನಡೆಸಿದೆ.

Recommended Video

ನಮ್ ಹಣೆಬರಹ ಯಾವಾಗ್ಲೂ ಇಷ್ಟೇ ಬಿಡಿ.? | Oneindia Kannada

ಇಂದು ಜಾಮೀನು ಅರ್ಜಿಯ ವಿಚಾರಣೆ ಸಹ ನ್ಯಾಯಾಲಯದಲ್ಲಿ ನಡೆಯುವ ಸಾಧ್ಯತೆ ಇದೆ. ಸಿಸಿಬಿ ಪೊಲೀಸರು ವಶಕ್ಕೆ ಕೇಳದಿದ್ದಲ್ಲಿ ರಾಗಿಣಿಯನ್ನು ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಒಪ್ಪಿಸಬಹುದು.

English summary
Enforcement Directorate may join to probe of Bengaluru drug case. ED officials visited CCB office and collect the information about Viren Khanna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X