• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡ್ರಗ್ ಜಾಲ: ಮತ್ತೊಬ್ಬ ಆರೋಪಿ, ಉದ್ಯಮಿ ವೈಭವ್ ಜೈನ್ ಬಂಧನ

|

ಬೆಂಗಳೂರು, ಸೆಪ್ಟೆಂಬರ್ 12: ಮಾದಕ ವಸ್ತು ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಭವ್ ಜೈನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಸಂದೀಪ್ ಪಾಟೀಲ್ ಶನಿವಾರ ತಿಳಿಸಿದ್ದಾರೆ.

ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿ ವೈಭವ್ ಜೈನ್‌ನನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ಪ್ರತೀಕ್ ಶೆಟ್ಟಿ ಎಂಬಾತನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದರು.

ಡ್ರಗ್ಸ್: ಸಿಎಂ ಬಿಎಸ್ವೈ ಮತ್ತು ಬಿಜೆಪಿಗೆ ಖಡಕ್ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ

ಬೆಂಗಳೂರಿನ ಚಿನ್ನದ ವ್ಯಾಪಾರಿಯ ಮಗನಾಗಿರುವ ವೈಭವ್ ಜೈನ್, ಡ್ರಗ್ ಪ್ರಕರಣದಲ್ಲಿ ಐದನೇ ಆರೋಪಿಯಾಗಿದ್ದಾನೆ. ವೈಭವ್ ಜೈನ್ ಬಗ್ಗೆ ಬಂಧಿತ ಆರೋಪಿ ರವಿಶಂಕರ್ ಮಾಹಿತಿ ನೀಡಿದ್ದ. ಆದರೆ ವೈಭವ್‌ಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದ್ದರಿಂದ ಆತ ಕ್ವಾರೆಂಟೈನ್‌ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದ. ಈಗ ಗುಣಮುಖನಾಗಿರುವ ಆತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ ಜತೆಗೆ ವೈಭವ್ ಜೈನ್ ಸಂಪರ್ಕ ಇರಿಸಿಕೊಂಡಿದ್ದ. ಇತ್ತ ಖುದ್ದು ಚಿನ್ನದ ವ್ಯಾಪಾರ ಮಾಡುತ್ತಿದ್ದ ಆತನಿಗೆ 2018ರಲ್ಲಿ ಪ್ರತಿಷ್ಠಿತ ಪಾರ್ಟಿಯೊಂದರಲ್ಲಿ ರವಿಶಂಕರ್ ಹಾಗೂ ನಟಿ ರಾಗಿಣಿ ಪರಿಚಯವಾಗಿತ್ತು. ರವಿಶಂಕರ್ ಮತ್ತು ವೈಭವ್ ಸ್ನೇಹ ಬೆಳೆಯುತ್ತಿದ್ದಂತೆ ವೈಭವ್ ನಡೆಸುತ್ತಿದ್ದ ವ್ಯವಹಾರ ರವಿಶಂಕರ್‌ಗೆ ತಿಳಿಯಿತು. ವೈಭವ್ ಜೈನ್‌ನ ಸ್ನೇಹಿತರಾದ ಅರುಣ್, ವಿನಯ್, ಪ್ರಶಾಂತ್ ರಾಂಕ ಮೂಲಕ ಡ್ರಗ್ ದಂಧೆ ನಡೆಸಲಾಗುತ್ತಿತ್ತು ಎಂದು ಹೇಳಲಾಗಿದೆ.

ಸಿನಿಮಾ ತಾರೆಯರು, ಉದ್ಯಮಿಗಳು ಹಾಗೂ ಇತರೆ ಗಣ್ಯರಿಗೆ ಪಾರ್ಟಿ ಆಯೋಜಿಸಲಾಗುತ್ತಿತ್ತು. ಅದನ್ನು ನಡೆಸುವ ಜವಾಬ್ದಾರಿಯನ್ನು ವೈಭವ್ ಜೈನ್ ವಹಿಸಿಕೊಳ್ಳುತ್ತಿದ್ದ. ಪಾರ್ಟಿಗಳಿಗೆ ಬರುವ ನಗರದ ಶ್ರೀಮಂತರಿಗೆ ವೈಭವ್ ಡ್ರಗ್ ಪೂರೈಕೆ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.

ಡ್ರಗ್ಸ್ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತೆ, ನಿಯಮಗಳೇನು?

   Zameer Ahmed ದುಡ್ಡು ಮಾಡಿದ್ದು ಹೇಗೆ ಅಂತ ನಂಗೆ ಗೊತ್ತಿದೆ : Renukacharya | Oneindia Kannada

   ವಿಚಾರಣೆಗೆ ಹಾಜರಾಗುವಂತೆ ವೈಭವ್‌ಗೆ ಸಿಸಿಬಿ ಪೊಲೀಸರು ಈ ಹಿಂದೆಯೇ ನೋಟಿಸ್ ನೀಡಿದ್ದರು. ಆದರೆ ತನಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ ಹೀಗಾಗಿ ಕ್ವಾರೆಂಟೈನ್‌ನಲ್ಲಿದ್ದೇನೆ ಎಂದು ವಿಚಾರಣೆಯಿಂದ ತಪ್ಪಿಸಿಕೊಂಡಿದ್ದ ಆತ, ಕ್ವಾರೆಂಟೈನ್ ಅವಧಿ ಮುಗಿಯುತ್ತಿದ್ದಂತೆ ತಲೆಮರೆಸಿಕೊಂಡಿದ್ದ. ಶನಿವಾರ ಮುಂಜಾನೆ ವೈಯಾಲಿಕಾವಲ್‌ನಲ್ಲಿರುವ ಮನೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

   English summary
   Bengaluru Drug Case: CCB Police arrested gold merchant Vaibhav Jain in connection with the case related to drugs.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X