ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೋಗಿ ಪ್ರಜ್ಞಾವಸ್ಥೆಯಲ್ಲಿರುವಾಗಲೇ ಮೆದುಳು ಶಸ್ತ್ರಚಿಕಿತ್ಸೆ!

|
Google Oneindia Kannada News

ಬೆಂಗಳೂರು, ಜೂನ್ 10: ವ್ಯಕ್ತಿಯೊಬ್ಬರು ಪ್ರಜ್ಞಾವಸ್ಥೆಯಲ್ಲಿರುವಾಗಲೇ ತೆರೆದ ಮೆದುಳು ಶಸ್ತ್ರಚಿಕಿತ್ಸೆ ನಡೆಸಿ, ಬೆಂಗಳೂರಿನ ಶೇಷಾದ್ರಿಪುರದಲ್ಲಿರುವ ಅಪೋಲೋ ಆಸ್ಪತ್ರೆ ದಾಖಲೆ ಬರೆದಿದೆ.

17 ವರ್ಷದ ಬಾಲಕನೊಬ್ಬ ಮಿದುಳಿನ ರಕ್ತನಾಳದಲ್ಲಿ ಅಸಹಜವಾಗಿ ರಕ್ತ ಸಂಗ್ರಹವಾಗುವ ಸಮಸ್ಯೆಯಿಂದ ಬಳಲುತ್ತಿದ್ದ. ಹುಟ್ಟಿದಾಗಿನಿಂದ ಈ ಸಮಸ್ಯೆಯಿಂದ ಬಳಲುತ್ತಿದ್ದರೂ ಇತ್ತೀಚೆಗಷ್ಟೇ ಎಂಆರ್ ಐ ಸ್ಕ್ಯಾನಿಂಗ್ ಮಾಡಿಸಿದಾಗ ಸಮಸ್ಯೆ ಪತ್ತೆಯಾಗಿತ್ತು.

Bengaluru Docters have made a record by doing a open brain surgery while patient is in conscious stage

ಈ ಕಾಯಿಲೆ ಬಂದರೆ ಅಸಹನೀಯ ತಲೆನೋವು ಕಾಡಬಹುದು ಮತ್ತು ಮೆದುಳಿನ ಒಳಗೆ ರಕ್ತಸ್ರಾವವುಂಟಾಗಿ ಅಂಗಾಂಗಗಳು ದುರ್ಬಲವಾಗಬಹುದು. ರೋಗಿಯ ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವಾಗ ಈ ಶಸ್ತ್ರಚಿಕಿತ್ಸೆ ನೀಡುವುದರಿಂದ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ರೋಗಿ ಪ್ರಜ್ಞಾವಸ್ಥೆಯಲ್ಲಿರುವಾಗಲೇ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ.

ಶಸ್ತ್ರಕ್ರಿಯೆ ಯಶಸ್ವಿಯಾಗಿದ್ದು, ಸದ್ಯಕ್ಕೆ ಬಾಲಕ ಯಾವ ಸಮಸ್ಯೆಯಿಲ್ಲದೆ ಆರಾಮವಾಗಿದ್ದಾನೆ ಎಂದು ಅಪೋಲೋ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

English summary
Docters in Apollo hospital, sheshadripuram, Bengaluru have made a record by doing a open brain surgery while patient is in conscious stage
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X