ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಠಿ ಬದಲು ಕ್ರಿಕೆಟ್ ಬ್ಯಾಟ್ ಹಿಡಿದ ಡಿಸಿಪಿ ರೋಹಿಣಿ..!

|
Google Oneindia Kannada News

ಬೆಂಗಳೂರು, ಫೆಬ್ರವರಿ 5: ಸದಾ ಒತ್ತಡದಲ್ಲಿ ಕಾಲ ಕಳೆಯುವ ಸಿಲಿಕಾನ್ ಸಿಟಿ ಬೆಂಗಳೂರು ಪೊಲೀಸ್ ಅಧಿಕಾರಿಗಳು ಬೇರೆ ಚಟುವಟಿಕೆಗಳತ್ತ ಗಮನ ಹರಿಸುವುದು ಕಡಿಮೆಯೇ.

ಆದರೆ, ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಅವರು ಇದಕ್ಕೆ ಅಪವಾದವಾಗಿದ್ದಾರೆ. ಬಿಡುವಿಲ್ಲದ ಕೆಲಸದ ನಡುವೆಯೂ ಅವರು, ಮಂಗಳವಾರ ಯುವಕರೊಂದಿಗೆ ಕ್ರಿಕೆಟ್ ಆಟ ಆಡಿ ಗಮನ ಸೆಳೆದರು.

Bengaluru DCP Rohini Katoch Played Cricket

ಯುವಕರು ಮತ್ತು ಪೊಲೀಸರ ನಡುವೆ ಉತ್ತಮ ಬಾಂಧವ್ಯ ಹೊಂದುವ ಸಲುವಾಗಿ ಮಂಗಳವಾರ ಚಂದಾಪುರ ಬಳಿಯ ಕೃಷ್ಣಾನಗರದಲ್ಲಿ ಚಂದಾಪುರದ ಯುವಕರಿಗಾಗಿ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲಾಗಿತ್ತು. ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರೇ ಈ ಟೂರ್ನಿಯನ್ನು ಆಯೋಜಿಸಿದ್ದರು.

ಈ ವೇಳೆ ಉದ್ಘಾಟನೆಗೆಂದು ಬಂದಿದ್ದ ಡಿಸಿಪಿ ರೋಹಿಣಿ ಕಟೋಚ್ ಅವರು ಬ್ಯಾಟ್ ಹಿಡಿದು ಯುವಕರ ಜೊತೆ ಬಹಳ ಹೊತ್ತು ಕ್ರಿಕೆಟ್ ಆಡಿದರು. ಯುವಕರನ್ನೂ ನಾಚಿಸುವಂತೆ ಬ್ಯಾಟಿಂಗ್, ಬೌಲಿಂಗ್ ಮಾಡಿ ಸಂತಸಪಟ್ಟರು. ಈ ವೇಳೆ ಮಾತನಾಡಿದ ಅವರು, ಯುವಕರು ಅಪರಾಧ ಚಟುವಟಿಕೆಗಳನ್ನು ಹತ್ತಿಕ್ಕಲು ಪೊಲೀಸರೊಂದಿಗೆ ಇರಬೇಕು. ನಾವು ನಿಮ್ಮ ಸ್ನೇಹಿತರು ಎಂದು ಹೇಳಿದರು.

English summary
Youths living in the slum area of Kashi Nagar defeated the A team of Kumaraswamy Layout police station by 17 runs to win the tournament organised by south division police.Rohini Katoch Sepat shows her skills with the bat and ball during a cricket tournament on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X