ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ 2 ಲಕ್ಷ ದಾಟಿದ ಕೋವಿಡ್ ಸೋಂಕಿತರ ಸಂಖ್ಯೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 23: ಬೆಂಗಳೂರು ನಗರದಲ್ಲಿ ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 2 ಲಕ್ಷದ ಗಡಿ ದಾಟಿದೆ. ಎರಡು ಲಕ್ಷಕ್ಕೂ ಅಧಿಕ ಸೋಂಕಿತರು ಇರುವ ಮಹಾನಗರಗಳ ಪಟ್ಟಿಯಲ್ಲಿ ಬೆಂಗಳೂರು 2ನೇ ಸ್ಥಾನದಲ್ಲಿದೆ.

ಮಂಗಳವಾರ ಬೆಂಗಳೂರು ನಗರದಲ್ಲಿ 3082 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 200728ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಸೋಂಕಿತರು ಇರುವ ಜಿಲ್ಲೆ ಬೆಂಗಳೂರು ನಗರ.

ಕೋವಿಡ್ 19; ದಕ್ಷಿಣ ಕನ್ನಡ ಜಿಲ್ಲೆಗೆ ಸಿಹಿ ಸುದ್ದಿ ಕೋವಿಡ್ 19; ದಕ್ಷಿಣ ಕನ್ನಡ ಜಿಲ್ಲೆಗೆ ಸಿಹಿ ಸುದ್ದಿ

ಬೆಂಗಳೂರು ನಗರದಲ್ಲಿ ಪ್ರತಿದಿನ ಸುಮಾರು 3000 ಹೊಸ ಕೋವಿಡ್ ಪ್ರಕರಣಗಳು ದಾಖಲಾಗುತ್ತಿದೆ. ನಗರದಲ್ಲಿ ಮಾರ್ಚ್ 8ರಂದು ಮೊದಲ ಕೋವಿಡ್ ಪ್ರಕರಣ ದಾಖಲಾಗಿತ್ತು. 50 ಸಾವಿರ ಪ್ರಕರಣದ ಗಡಿ ದಾಟಿದ್ದು, ಜುಲೈ 29ರಂದು.

ಬೆಂಗಳೂರು; ಅಂಬ್ಯುಲೆನ್ಸ್‌ನಲ್ಲಿ ಹೋದ ಮಹಿಳೆ ಇನ್ನೂ ಸಿಕ್ಕಿಲ್ಲ!ಬೆಂಗಳೂರು; ಅಂಬ್ಯುಲೆನ್ಸ್‌ನಲ್ಲಿ ಹೋದ ಮಹಿಳೆ ಇನ್ನೂ ಸಿಕ್ಕಿಲ್ಲ!

ನಗರದಲ್ಲಿ ಇದುವರೆಗೂ 158029 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 39983. ನಗರದಲ್ಲಿ ಇದುವರೆಗೂ 2715 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ.

ಬೆಂಗಳೂರಲ್ಲಿ ಹೆಚ್ಚುತ್ತಿದೆ ಕೊರೊನಾ: ಇನ್ನು 2 ತಿಂಗಳು ಇರಲಿ ಎಚ್ಚರಬೆಂಗಳೂರಲ್ಲಿ ಹೆಚ್ಚುತ್ತಿದೆ ಕೊರೊನಾ: ಇನ್ನು 2 ತಿಂಗಳು ಇರಲಿ ಎಚ್ಚರ

ಸೋಂಕಿತರ ಸಂಖ್ಯೆ ದಿಢೀರ್ ಹೆಚ್ಚಳ

ಸೋಂಕಿತರ ಸಂಖ್ಯೆ ದಿಢೀರ್ ಹೆಚ್ಚಳ

ಜುಲೈ 29ರಂದು ಕೋವಿಡ್ ಸೋಂಕಿತರ ಸಂಖ್ಯೆ ನಗರದಲ್ಲಿ50 ಸಾವಿರ ಇತ್ತು. ಒಂದು ತಿಂಗಳಿನಲ್ಲಿಯೇ ಸೋಂಕಿತರ ಸಂಖ್ಯೆ ದಿಢೀರ್ ಹೆಚ್ಚಳವಾಯಿತು. ಆಗಸ್ಟ್ 21ರಂದು ಒಟ್ಟು ಸೋಂಕಿತರ ಸಂಖ್ಯೆ 1.5 ಲಕ್ಷಕ್ಕೆ ಏರಿಕೆ ಕಂಡಿತು.

ಬೆಂಗಳೂರಲ್ಲಿ ಅಧಿಕ ಸೋಂಕಿತರು

ಬೆಂಗಳೂರಲ್ಲಿ ಅಧಿಕ ಸೋಂಕಿತರು

2 ಲಕ್ಷಕ್ಕೂ ಅಧಿಕ ಕೋವಿಡ್ ಸೋಂಕಿತರು ಇರುವ ನಗರಗಳಲ್ಲಿ ಬೆಂಗಳೂರು 2ನೇ ಸ್ಥಾನದಲ್ಲಿದೆ. ಮುಂಬೈನಲ್ಲಿ 1,87,904, ಚೆನ್ನೈನಲ್ಲಿ 1,57,614, ಕೋಲ್ಕತ್ತಾದಲ್ಲಿ 51,189 ಸೋಂಕಿತರು ಇದ್ದಾರೆ. ಪುಣೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,67,019.

ಸಕ್ರಿಯ ಪ್ರಕರಣಗಳು ಸಹ ಹೆಚ್ಚು

ಸಕ್ರಿಯ ಪ್ರಕರಣಗಳು ಸಹ ಹೆಚ್ಚು

ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿಯೂ ಬೆಂಗಳೂರು ಟಾಪ್‌ನಲ್ಲಿದೆ. ಮುಂಬೈನಲ್ಲಿ 26,762, ಚೆನ್ನೈನಲ್ಲಿ 10,015, ಲಕ್ನೋದಲ್ಲಿ 9,746, ಕೋಲ್ಕತ್ತಾದಲ್ಲಿ 4,320 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 39983.

Recommended Video

ಹಿಂಗ್ ಮಾಡಿದ್ರೆ ಕಳೆದು ಹೋಗಿರೊ ಫೋನ್ ಸಿಗತ್ತೆ | Oneindia Kannada
ನಗರದಲ್ಲಿ ಸೋಂಕಿತರು ಎಲ್ಲೆಲ್ಲಿ ಹೆಚ್ಚು

ನಗರದಲ್ಲಿ ಸೋಂಕಿತರು ಎಲ್ಲೆಲ್ಲಿ ಹೆಚ್ಚು

ಕಳೆದ 10 ದಿನದ ಅಂಕಿ ಅಂಶಗಳ ಪ್ರಕಾರ ಬೆಂಗಳೂರು ದಕ್ಷಿಣದಲ್ಲಿ ಶೇ 16, ಪೂರ್ವದಲ್ಲಿ ಶೇ 15, ಬೊಮ್ಮನಹಳ್ಳಿ ವಲಯದಲ್ಲಿ ಶೇ 13, ಆರ್. ಆರ್.ನಗರ ಮತ್ತು ಮಹದೇವಪುರ ವಾರ್ಡ್‌ನಲ್ಲಿ ಶೇ 12ರಷ್ಟು ಪ್ರಕರಣಗಳು ದಾಖಲಾಗಿವೆ.

English summary
On September 22, 2020 Bengaluru reported 3082 new COVID 19 cased with this city total cases crossed Two lakh mark. Now total cases 200728 with 39983 active cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X