ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಕ್ರೈಮ್ ರೌಂಡಪ್: ಪಬ್‌ನಲ್ಲಿ ಜಿಎಸ್ ಟಿ ಅಧಿಕಾರಿ ಮೇಲೆ ಬೌನ್ಸರ್ ಗಳಿಂದ ಹಲ್ಲೆ!

|
Google Oneindia Kannada News

ಬೆಂಗಳೂರು, ನ. 10: ಜಿಎಸ್‌ಟಿ ಅಧಿಕಾರಿ ಮೇಲೆ ಪಬ್ ಮಾಲೀಕನಿಂದ ಹಲ್ಲೆ, ಹೋಟೆಲ್ ಪುಂಡಾಟ ಪ್ರಕರಣದಲ್ಲಿ ಮುಂದುವರೆದ ತನಿಖೆ; ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್ ನಿಂದ ಮಾದಕ ವಸ್ತು ತೆಗೆದುಕೊಂಡು ಸೇವನೆ ಮಡಿದ್ದಾಗಿ ಭೀಮಾ ಜ್ಯುವೆಲರಿ ಮಾಲೀಕ ಪುತ್ರನ ತಪ್ಪೊಪ್ಪಿಗೆ, ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಲಿರುವ ಹ್ಯಾಕರ್ ಶ್ರೀಕೃಷ್ಣ, ಹಾಡ ಹಗಲೇ ಪೆಟ್ರೊಲ್ ಬಂಕ್‌ನಲ್ಲಿ ದರೋಡೆಗೆ ಯತ್ನ. ಇದು ಬೆಂಗಳೂರಿನಲ್ಲಿ ಬುಧವಾರ ನಡೆದಿರುವ ಅಪರಾಧ ಪ್ರಕರಣಗಳ ಚಿತ್ರಣ.

Recommended Video

ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ರಿಲೀಸ್ | Oneindia Kannada

ಪಬ್‌ನಲ್ಲಿ ಜಿಎಸ್‌ಟಿ ಇನ್‌ಸ್ಪೆಕ್ಟರ್‌ನನ್ನು ಕೂಡಿ ಹಾಕಿ ಪಬ್ ಮಾಲೀಕರ ಮತ್ತು ಬೌನ್ಸರ್‌ಗಳು ಹಲ್ಲೆ ಮಾಡಿರುವ ಘಟನೆ ಕೋರಮಂಗಲದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

Bengaluru Crime News Roundup (10 Nov 2021) : GST Officer Beaten Inside Pub, Hacker Sriki Got Bail

ಜಿಎಸ್‌ಟಿ ಇನ್‌ಸ್ಪೆಕ್ಟರ್ ವಿನಯ್ ಮಂಡಲ್ ಹಲ್ಲೆಗೆ ಒಳಗಾದವರು. ಕೋರಮಂಗಲದ ಹ್ಯಾಪಿ ಬ್ರೋ ಪಬ್ ಮಾಲೀಕ ರಾಕೇಶ್ ಗೌಡ ಮತ್ತು ಬೌನ್ಸರ್‌ಗಳು ಹಲ್ಲೆ ನಡೆಸಿದ್ದು, ಇವರ ವಿರುದ್ಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಕೋರಮಂಗಲದ ಹ್ಯಾಪಿ ಪ್ರೋ ಪಬ್‌ಗೆ ತೆರಳಿದ್ದ ವಿನಯ್ ಮಂಡಲ್‌ನನ್ನು ವ್ಯಕ್ತಿಯೊಬ್ಬರು ಪರಿಚಯಸಿಕೊಂಡಿದ್ದರು. ತಾನು ರಾಕೇಶ್ ಗೌಡ, ಬಾರ್‌ನ ಮಾಲೀಕ ಎಂದು ಹೇಳಿಕೊಂಡಿದ್ದರು. ಮಧ್ಯರಾತ್ರಿ ವರೆಗೂ ಮದ್ಯಪಾನ ಮಾಡಿದ್ದ ವಿನಯ್ ಮಂಡಲ್‌ಗೆ ಬಿಲ್ ಕಟ್ಟುವಂತೆ ಸೂಚಿಸಿದ್ದಾರೆ. ತಾನು ಜಿಎಸ್‌ಟಿ ಅಧಿಕಾರಿ ಎಂದು ವಿನಯ್ ಮಂಡಲ್ ಹೇಳಿದ್ದು, ಗುರುತಿನ ಚೀಟಿ ತೋರಿಸುವಂತೆ ಪಬ್ ಸಿಬ್ಬಂದಿ ಧಮ್ಕಿ ಹಾಕಿದ್ದಾರೆ. ಬಿಲ್ ಕಟ್ಟದೇ ತಡ ಮಾಡಿದ ವಿನಯ್ ಮಂಡಲ್ ಮೇಲೆ ಪಬ್ ಮಾಲೀಕ ರಾಕೇಶ್ ಗೌಡ ಮತ್ತು ಬೌನ್ಸರ್‌ಗಳು ಹಲ್ಲೆ ಮಾಡಿದ್ದಾರೆ. ಅಲ್ಲದೇ ಕೊಠಡಿಯೊಂದರಲ್ಲಿ ಬೆಳಗಿನ ಜಾವ ವರೆಗೂ ಕೂಡಿ ಹಾಕಿದ್ದಾರೆ. ವಿನಯ್ ಮಂಡಲ್ ರಾಕೇಶ್ ಗೌಡ ಮತ್ತು ಬೌನ್ಸರ್ ವಿರುದ್ಧ ದೂರು ನೀಡಿದ್ದಾರೆ. ರಾಕೇಶ್ ಗೌಡ ಮತ್ತು ಬೌನ್ಸರ್‌ಗಳ ವಿರುದ್ಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಹಾಡ ಹಗಲೇ ಪೆಟ್ರೋಲ್ ಬಂಕ್ ನಲ್ಲಿ ದರೋಡೆಗೆ ಯತ್ನ:
ವಿಳಾಸ ಕೇಳುವ ನೆಪದಲ್ಲಿ ಪೆಟ್ರೊಲ್ ಬಂಕ್‌ಗೆ ನುಗ್ಗಿರುವ ದುಷ್ಕರ್ಮಿಗಳು ಕ್ಯಾಶಿಯರ್ ಬ್ಯಾಗ್ ದರೋಡೆ ಮಾಡಲು ಯತ್ನಿಸಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Bengaluru Crime News Roundup (10 Nov 2021) : GST Officer Beaten Inside Pub, Hacker Sriki Got Bail

ಮೈಸೂರು ರಸ್ತೆಯಲ್ಲಿರುವ ರಚನಾ ಪೆಟ್ರೋಲ್ ಬಂಕ್‌ಗೆ ವಿಳಾಸ ಕೇಳುವ ನೆಪದಲ್ಲಿ ಬೈಕ್‌ನಲ್ಲಿ ಬಂದಿರುವ ದುಷ್ಕರ್ಮಿಗಳು ಕ್ಯಾಶಿಯರ್ ಬಳಿ ಹೋಗಿ ವಿಳಾಸ ಕೇಳಿದ್ದಾರೆ. ವಿಳಾಸ ಹೇಳುತ್ತಿದ್ದ ಕ್ಯಾಶಿಯರ್ ಬ್ಯಾಗ್ ಕಸಿದುಕೊಳ್ಳಲು ಯತ್ನಿಸಿದ್ದಾರೆ. ನಿರಾಕರಿಸಿದ ಆತನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಇಷ್ಟಾದರೂ ಬ್ಯಾಗ್ ಬಿಟ್ಟಿಲ್ಲ. ಕೂಡಲೇ ಆತನ ಸ್ನೇಹಿತರು ನೆರವಿಗೆ ಬಂದಿದ್ದು, ದುಷ್ಕರ್ಮಿಗಳು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬ್ಯಾಟರಾಯನ ಪುರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಪುಂಡಾಟ ಪ್ರಕರಣದಲ್ಲಿ ವಿಷ್ಣು ಭಟ್ ತಪ್ಪೊಪ್ಪಿಗೆ:
ರಾಯಲ್ ಅರ್ಕೀಡ್ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ತಪ್ಪೊಪ್ಪಕೊಂಡಿದ್ದಾನೆ. ತಂದೆ ನಿಧನ ನೋವಿನಲ್ಲಿ ಮಾದಕ ವಸ್ತು ಸೇವನೆ ಮಾಡುತ್ತಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್‌ನಿಂದ ಮಾದಕ ವಸ್ತು ತೆಗೆದುಕೊಂಡಿದ್ದೇನೆ. ವಾಟ್ಸಪ್‌ನಲ್ಲಿ ಕೋಡ್ ವರ್ಡ್ ಮೂಲಕ ಸಂದೇಶ ಮಾಡಿದರೆ ಡ್ರಗ್ ತಂದು ಕೊಡ್ತಿದ್ದ. ಎಂ ಅಂತ ಸಂದೇಶ ಮಾಡಿದ್ರೆ ಗಾಂಜಾ ತಂದು ಕೊಡುತ್ತಿದ್ದ. ಎಂಡಿ ಎಂದರೆ ಎಂಡಿಎಂಎ ನೀಡುತ್ತಿದ್ದ. ಇಂದಿರಾನಗರದ ಮನೆಯಲ್ಲಿ ಐವತ್ತು ಗ್ರಾಂ ಗಾಂಜಾ ತಂದಿಟ್ಟಿದ್ದೆ. ಅದರಲ್ಲಿ ಇಪ್ಪತ್ತು ಗ್ರಾಂ ಸಿಗರೇಟಿಗೆ ಹಾಕಿಕೊಂಡು ಸೇವನೆ ಮಾಡಿದ್ದೆ. ಆ ಬಳಿಕ ಶ್ರೀಕಿಯನ್ನು ಭೇಟಿ ಮಾಡಲು ಹೋಗಿದ್ದೆ. ಈ ಹಿಂದಿನಿಂದಲೂ ಮಾದಕ ವಸ್ತುಗಳಿಗೆ ಅಡಿಕ್ಟ್ ಆಗಿದ್ದೆ. ಬಿಡೋಕೆ ಆಗದೇ ಮನೆಯಲ್ಲಿಯೇ ಯಾರಿಗೂ ಗೊತ್ತಾಗದಂತೆ ಸೇವನೆ ಮಾಡುತ್ತಿದ್ದೆ. ನನ್ನ ತಂದೆ ತೀರಿಕೊಂಡ ನೋವಿನಲ್ಲಿ ಹೆಚ್ಚು ಸೇವನೆ ಅರಂಭಿಸಿದೆ ಎಂದು ಹೇಳಿಕೊಂಡಿದ್ದಾನೆ. ನಾಲ್ಕು ದಿನದಿಂದ ಪೊಲೀಸರ ವಶದಲ್ಲಿದ್ದು, ಶೀಘ್ರದಲ್ಲಿಯೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

Bengaluru Crime News Roundup (10 Nov 2021) : GST Officer Beaten Inside Pub, Hacker Sriki Got Bail

ಹ್ಯಾಕರ್ ಶ್ರೀಕೃಷ್ಣನಿಗೆ ಬಿಡುಗಡೆ ಭಾಗ್ಯ:
ರಾಯಲ್ ಆರ್ಚಿಡ್ ಹೋಟೆಲ್‌ನಲ್ಲಿ ದಾಂಧಲೆ ನಡೆಸಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಹ್ಯಾಕರ್ ಶ್ರೀಕೃಷ್ಣಗೆ ಜಾಮೀನು ಸಿಕ್ಕಿದ್ದು, ಜೈಲಿನಿಂದ ಬುಧವಾರ ಬಿಡುಗಡೆಯಾಗಲಿದ್ದಾನೆ. ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ವಿಚಾರಣೆಗೆ ಹಾಜರಾಗಲಿದ್ದಾನೆ.

English summary
Bengaluru Crime News Roundup (10 Nov 2021) : Bengaluru: GST officer locked up and beaten inside pub; police book owner, bouncers , miscreants tries to rob petrol bunk in mysuru road. Royal Orchid Hotel case; Hacker sriki got bail . Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X