ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಅಧೀನ ನ್ಯಾಯಾಲಯಗಳಲ್ಲಿ ಶೀಘ್ರವೇ ಸಿಸಿಟಿವಿ ಅಳವಡಿಕೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 4 : ಸುಗಮ ಹಾಗೂ ಪಾರದರ್ಶಕ ಕಲಾಪಕ್ಕಾಗಿ ನ್ಯಾಯಾಂಗವು ಬೆಂಗಳೂರಿನ ಎಲ್ಲ ಅಧೀನ ನ್ಯಾಯಾಲಯಗಳಲ್ಲಿ ಸಿಸಿಟಿವಿ ಅಳವಡಿಸಲು ನಿರ್ಧರಿಸಿದೆ.

ಹೊಸ ವರ್ಷ ಆಚರಣೆ ಹಿನ್ನೆಲೆ ಭದ್ರತೆಗೆ ಮೇಯರ್ ಸೂಚನೆಹೊಸ ವರ್ಷ ಆಚರಣೆ ಹಿನ್ನೆಲೆ ಭದ್ರತೆಗೆ ಮೇಯರ್ ಸೂಚನೆ

ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು ಅಧೀನ ನ್ಯಾಯಾಲಯಗಳಾದ ಮೆಟ್ರೊ ಪೊಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್, ಸಿಟಿ ಸಿವಿಲ್ ಕೋರ್ಟ್, ಲೋಕಾಯುಕ್ತ ವಿಶೇಷ ನ್ಯಾಯಲಯ, ಲೇಬರ್ ನ್ಯಾಯಾಲಯದಲ್ಲಿ ಆಡಿಯೋ ರಹಿತ ಸಿಸಿಟಿವಿ ಅಳವಡಿಸಲಾಗುತ್ತದೆ.

Bengaluru courts to have CCTV cameras in halls

ಸಿಟಿ ನ್ಯಾಯಾಲಯ ಬೆಳಗ್ಗೆ 11 ರಿಂದ ಮಧ್ಯಾಹ್ 2 ಹಾಗೂ ಮಧ್ಯಾಹ್ನ 3 ರಿಂದ ಸಂಜೆ5.30 ರವರೆಗೆ ಕಾರ್ಯ ನಿರ್ವಹಿಸಲಿದೆ. ನ್ಯಾಯಾಂಗ ಅಧಿಕಾರಿಗಳು ಕೋರ್ಟ್ ಗೆ ಬರುವ ವೇಳೆ ಹಾಗೂ ಅಲ್ಲಿಂದ ತೆರಳುವ ವೇಳೆಯನ್ನು ಸಿಸಿಟಿವಿ ಅಳವಡಿಕೆಯಿಂದ ತಿಳಿಯಬಹುದಾಗಿದೆ. ಅದರೆ ಜತೆಗೆ ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಗಳಿಗೆ ಯಾವುದೇ ಅಡೆತಡೆ ಬರದಂತೆ ತಡೆಯಲು ಸಿಸಿಟಿವಿ ಅಳವಡಿಸಲಾಗುತ್ತಿದೆ.

ಸುರಕ್ಷತೆಯ ಕ್ರಮ ವಿಧೇಯಕ ಅಂಗೀಕಾರ, ದೇಗುಲ, ಶಾಲೆಗಳಲ್ಲಿ ಸಿಸಿ ಟಿವಿ ಕಡ್ಡಾಯಸುರಕ್ಷತೆಯ ಕ್ರಮ ವಿಧೇಯಕ ಅಂಗೀಕಾರ, ದೇಗುಲ, ಶಾಲೆಗಳಲ್ಲಿ ಸಿಸಿ ಟಿವಿ ಕಡ್ಡಾಯ

ಪಾರದರ್ಶಕ ಹಾಗೂ ಭದ್ರತಾ ದೃಷ್ಟಿಯಿಂದ ನೋಡುವುದಾದರೆ ವಿಚಾರಣೆ ನಡೆಯುವ ಸಂದರ್ಭದಲ್ಲಿ ಬಾರ್ ಹಾಗೂ ನ್ಯಾಯಪೀಠ ನಡುವೆ ಸಂಘರ್ಷಗಳು ಉಂಟಾದರೆ ಆ ಸಂದರ್ಭದಲ್ಲಿ ನ್ಯಾಯಾಂಗ ಅಧಿಕಾರಿಗಳು, ವಕೀಲರು, ಸಿಸಿಟಿವಿ ಫೂಟೋಜ್ ಗಳನ್ನು ಬಳಸಿ ನ್ಯಾಯಾಧೀಶರ ಮುಂದೆ ತಮ್ಮ ವಾದ ಮಂಡಿಸಬಹುದು.

ಸಾರ್ವಜನಿಕ ಕಾರ್ಯ ಇಲಾಖೆಯು, ನಗರಾದ್ಯಂತ ಇರುವ ಅಧೀನ ನ್ಯಾಯಾಲಯಗಳಲ್ಲಿ ಒಟ್ಟು 600 ಸಿಸಿಟಿವಿ ಅಳವಡಿಸಲು ತೀರ್ಮಾನಿಸಿದೆ. ಆದರೆ ಸಿಸಿಟಿವಿ ಫೂಟೇಜ್ ಗಳು ಸಾರ್ವಜನಿಕರಿಗೆ ಲಭ್ಯವಿರುವುದಿಲ್ಲ. ಒಂದೊಮ್ಮೆ ಫೂಟೇಜ್ ಅವಶ್ಯಕತೆ ಇದ್ದಲ್ಲಿ ಆರ್ ಟಿ ಐ ಮೂಲಕ ಪಡೆದುಕೊಳ್ಳಬಹುದು.

ನ್ಯಾಯಾಲಯದ ಪ್ರವೇಶ ದ್ವಾರ ಹಾಗೂ ನ್ಯಾಯಾಲಯದಿಂದ ಹೊರ ಹೋಗುವ ದ್ವಾರದ ಬಳಿ, ಕೋರ್ಟ್ ಕಾರಿಡಾರ್ ಹಾಗೂ ಕೆಲವು ನ್ಯಾಯಾಲಯದ ವಿಭಾಗಗಳಲ್ಲಿ ಅಳವಡಿಸಲಾಗುತ್ತದೆ. ಸುಪ್ರೀಂ ಕೋರ್ಟ್ ಆದೇಶವನ್ನು ವಕೀಲರು ಸ್ವಾಗತಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಸಿಸಿಟಿವಿ ಅಳವಡಿಕೆಯಿಂದ ಪಾರದರ್ಶಕತೆ ಇರುತ್ತದೆ. ಇದು ವಕೀಲರು, ನ್ಯಾಯಾಧೀಶರು ಹಾಗೂ ದಾವೇದಾರರ ನಿಯಂತ್ರಕವಾಗಿ ಕೆಲಸ ಮಾಡಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಹೈಕೋರ್ಟ್ ಸಮ್ಮತಿ ಇಲ್ಲದೆ ಆರ್ ಟಿ ಐ ಮೂಲಕ ಸಿಸಿಟಿವಿ ಫೂಟೇಜ್ ಗಳನ್ನು ಪಡೆಯುವಂತಿಲ್ಲ. ಅಗತ್ಯವಿದ್ದರೆ ಉನ್ನತ ನ್ಯಾಯಾಂಗದಲ್ಲಿ ಒಪ್ಪಿಗೆ ಪಡೆದುಕೊಳ್ಳಬೇಕು. ಈಗ ಸದ್ಯಕ್ಕೆ ಪ್ರಯೋಗಾತ್ಮಕವಾಗಿ ಆಡಿಯೋ ರಹಿತ ಸಿಸಿಟಿವಿಯನ್ನು ಅಳವಡಿಸಲಾಗುತ್ತದೆ. ನಂತರದಲ್ಲಿ ಹೈ ರೆಸಲ್ಯೂಷನ್ ಇರುವ ಆಡಿಯೋ ಹಾಗೂ ವಿಡಿಯೋ ಎರಡೂ ಇರುವ ಸಿಸಿಟಿವಿಯನ್ನು ಅಳವಡಿಸಲಾಗುತ್ತದೆ.

English summary
The Judicial administration has decided to install CCTV inside court hall of all lower courts across the Bengaluru. This move has come in complience of the Supreme court directions to ensure fair trial and transparency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X