ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಸ್ತಿ ತೆರಿಗೆ ಸಂಗ್ರಹಿಸುವಲ್ಲಿ ಸಂಪೂರ್ಣ ಸೋತ ಬೆಂಗಳೂರು

By Prasad
|
Google Oneindia Kannada News

ಬೆಂಗಳೂರು, ಫೆಬ್ರವರಿ 01 : ಹೇಳಿಕೊಳ್ಳೋಕೆ ಮಾತ್ರ ಐಟಿ ಹಬ್! ಆದರೆ ಬೆಂಗಳೂರಿಗೆ ಸ್ಮಾರ್ಟ್ ಸಿಟಿ ಅನ್ನಿಸಿಕೊಳ್ಳಲು ಯಾವುದೇ ಅರ್ಹತೆಯಿಲ್ಲ. ಏಕಂದ್ರೆ, ಇಲ್ಲಿಯ ನಾಗರಿಕರು ನಿಯತ್ತಾಗಿ ಆಸ್ತಿ ತೆರಿಗೆ ಕಟ್ಟುವುದಿಲ್ಲ, ಸರಕಾರ ಕೂಡ ಅಷ್ಟೇ ಮುತುವರ್ಜಿಯಿಂದ ತೆರಿಗೆ ಸಂಗ್ರಹಿಸಿಲ್ಲ!

ಸರಕಾರ ಮಾಡಿರುವ ಆರ್ಥಿಕ ಸಮೀಕ್ಷೆಯ ಪ್ರಕಾರ, ಬೆಂಗಳೂರಿನಲ್ಲಿ ಶೇ.5ರಿಂದ ಶೇ.20ರವರೆಗೆ ಮಾತ್ರ ಆಸ್ತಿ ತೆರಿಗೆ ಸಂಗ್ರಹವಾಗುತ್ತಿದೆ. ಇನ್ನು ಮೂಲಸೌಕರ್ಯಗಳೆಲ್ಲ ಸಿಗಬೇಕು, ಎಲ್ಲ ಸವಲತ್ತುಗಳೂ ಬೇಕು. ಆದರೆ, ಆಸ್ತಿ ತೆರಿಗೆ ಕಟ್ಟುವುದಂದ್ರೆ ಬೇಡ! ಈ ಸಮೀಕ್ಷೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು.

Bengaluru collecting less property tax : Economic Survey

ಇನ್ನು ಬುಧವಾರ ಮಂಡಿಸಿರುವ ಬಜೆಟ್ಟಿನಲ್ಲಿ ಅರುಣ್ ಜೇಟ್ಲಿ ಅವರು ಒಂದು ಮುತ್ತಿನಂಥ ಮಾತು ಹೇಳಿದ್ದಾರೆ. ಅದೇನೆಂದರೆ, "ನಮ್ಮದು ತೆರಿಗೆಗಳ್ಳರ ಸಮಾಜ. ಹೆಚ್ಚು ಜನರು ತೆರಿಗೆ ಕಟ್ಟದಿದ್ದರೆ ಏನಾಗುತ್ತದೆಂದರೆ, ಇದರ ಭಾರ ಪ್ರಾಮಾಣಿಕವಾಗಿ ತೆರಿಗೆ ಕಟ್ಟುವ ಜನರ ಮೇಲೆ ಬೀಳುತ್ತದೆ."

ಇದು ಬೆಂಗಳೂರೊಂದರ ಹಣಬರಹ ಮಾತ್ರವಲ್ಲ, ಪಿಂಕ್ ಸಿಟಿ ಜೈಪುರದ್ದೂ ಇದೇ ಕಥೆ. ಎರಡೂ ನಗರಗಳಲ್ಲಿ ಆಸ್ತಿ ತೆರಿಗೆ ಸಂಗ್ರಹಿಸುವಲ್ಲಿ, ಜನರು ತೆರಿಗೆ ಕಟ್ಟುವಂತೆ ಮಾಡುವಲ್ಲಿ ಪಾಲಿಕೆಗಳು ಸಂಪೂರ್ಣ ವಿಫಲವಾಗಿವೆ. ಇದರರ್ಥ, ಶೇ.80ರಷ್ಟು ಆಸ್ತಿ ತೆರಿಗೆ ಸಂಗ್ರಹಿಸುವಲ್ಲಿ ವಿಫಲವಾಗಿವೆ.

ಸೆಟಲೈಟ್ ಮೂಲಕ ಫೋಟೋ ತೆಗೆದುಕೊಳ್ಳುವ ಮೂಲಕ ಈ ಅಂಕಿಅಂಶಗಳಿಗೆ ಬರಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಕಟ್ಟಡಗಳ ಸಾಂದ್ರತೆ, ಕಟ್ಟಿರುವ ಕಟ್ಟಡದ ಅಳತೆ, ಸಂಗ್ರಹಿಸಲಾಗಿರುವ ತೆರಿಗೆಯನ್ನು ಅಧ್ಯಯನ ಮಾಡಿದ ಮೇಲೆ ಆ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಬಿಬಿಎಂಪಿ ಮತ್ತು ಜನರು ಮನಸ್ಸು ಮಾಡಿದರೆ ಈಗ ಸಂಗ್ರವಾಗುತ್ತಿರುವ ಹಣಕ್ಕಿಂತ ನಾಲ್ಕೈದು ಪಟ್ಟು ಹೆಚ್ಚು ಆಸ್ತಿ ತೆರಿಗೆ ಸಂಗ್ರಹಿಸುವ ಸಾಧ್ಯತೆಯಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ. ಅಕ್ರಮ ಸಕ್ರಮ ಕಟ್ಟುನಿಟ್ಟಾಗಿ ಜಾರಿಯಾದರೆ ಈ ಸಮಸ್ಯೆಗೆ ಪರಿಹಾರ ಸಿಕ್ಕೀತು.

English summary
Bengaluru & Jaipur are collecting only 5% to 20% of their potential property taxes. Economic Survey estimated that Bengaluru has a potential of collecting up to 4-7 times ts current property tax revenue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X