ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳ್ಳಂದೂರು ಕೆರೆ ಶುದ್ಧ ಮಾಡಲು ನೀವು ಸಹಿ ಹಾಕಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್. 06: ಬೆಂಗಳೂರು ಮಹಾನಗರ ಪಾಲಿಕೆ ಆಡಳಿತ ಬದಲಾಗಿದೆ, ಆದರೆ ಸಮಸ್ಯೆಗಳು ಹಾಗೇ ಇದೆ. ಕಳೆದ ಆರು ತಿಂಗಳಿನಿಂದ ಕಾಡುತ್ತಿರುವ ಬೆಳ್ಳಂದೂರು ಕರೆ ರಾಸಾಯನಿಕ ನೊರೆ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

ಒಡಲಲ್ಲಿ ವಿಷ ತುಂಬಿಕೊಂಡಿರುವ ಬೆಳ್ಳಂದೂರು ಕೆರೆ ಸಮಸ್ಯೆ ಆರಂಭವಾಗಿ 6 ತಿಂಗಳುಗಳೇ ಕಳೆದಿದೆ. ಮಾಧ್ಯಮಗಳು, ನಾಗರಿಕರು ಮಾಡಿಕೊಂಡ ಮನವಿಗೆ ಬಿಬಿಎಂಪಿ ಕಿವಿಗೊಟ್ಟಿಲ್ಲ. ತಾತ್ಕಾಲಿಕ ಪರಿಹಾರ ಮಾಡಿ ಕೈ ತೊಳೆದುಕೊಳ್ಳುತ್ತಿದೆ. ['ಕ್ಲೀನ್ ಅಪ್ ಬೆಳ್ಳಂದೂರು ಲೇಕ್' ಅಭಿಯಾನಕ್ಕೆ ಸಹಿ ಮಾಡಿ]

Bengaluru: Clean Up Bellandur Lake online petition start by IT Employee

ಆದರೆ ಇದೀಗ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದ್ದು ಭಾಗದ ಜನ ಪ್ರತಿ ನಿತ್ಯ ಮೈ-ಕೈ ತುರಿಕೆ, ಉಸಿರಾಟದ ತೊಂದರೆ, ಗಂಟು ನೋವು, ಕಣ್ಣು ಉರಿ ಅನುಭವಿಸುತ್ತ ನರಕಯಾತನೆ ಅನುಭವಿಸುತ್ತಿದ್ದಾರೆ.

ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಐಟಿ ಉದ್ಯೋಗಿಯೊಬ್ಬರು ಸಹಿ ಸಂಗ್ರಹ ಅಭಿಯಾನ ಆರಂಭ ಮಾಡಿದ್ದಾರೆ. ಬೆಳ್ಳಂದೂರು ನಿವಾಸಿ ಸಂಚಿತಾ ಝಾ ರಾಸಾಯನಿಕ ಮಿಶ್ರಿತ ನೊರೆ ಸಮಸ್ಯೆಗೆ ಬೇಸತ್ತು ಸಹಿ ಸಂಗ್ರಹ ಅಭಿಯಾನಕ್ಕೆ ಇಳಿದಿದ್ದಾರೆ. 26 ವರ್ಷದ ಝಾ 'ಕ್ಲೀನ್ ಅಪ್ ಬೆಳ್ಳಂದೂರು ಲೇಕ್' ಎಂಬ ಹೆಸರಿನಲ್ಲಿ ಅಭಿಯಾನ ಆರಂಭ ಮಾಡಿದ್ದಾರೆ.[ಒಡಲಲ್ಲಿ ವಿಷ ತುಂಬಿಕೊಂಡ ಬೆಳ್ಳಂದೂರು ಕರೆ ಕಣ್ಣೀರ ಕತೆ]

15000 ಜನರ ಬೆಂಬಲ ಅಭಿಯಾನಕ್ಕೆ ಬೇಕಿದ್ದು ಇನ್ನು ಕೇವಲ 63 ಜನ ಸಹಿ ಮಾಡಿದರೆ ಸಾಕು. ಕೆಲ ವಾರಗಳ ಹಿಂದೆ ಆರಂಭವಾದ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಇನ್ನಾದರೂ ಸರ್ಕಾರ ಮತ್ತು ಬಿಬಿಎಂಪಿ ಶಾಶ್ವತ ಪರಿಹಾರ ಹುಡುಕಲು ಮನಸ್ಸು ಮಾಡುತ್ತದೆಯೋ ಕಾದು ನೋಡಬೇಕು.

English summary
Bellandur Lake spewing froth - Sanchita Jha starts online petition urging State Government to solve this Major Problem. This is what made 26-year-old Sanchita Jha, a resident of Bellandur and an IT employee, start the "Clean Up Bellandur Lake" petition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X