ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾರ್ಚ್ ಅಂತ್ಯದೊಳಗೆ ಬೆಂಗಳೂರಿನ 200 ಕಡೆಗಳಲ್ಲಿ ಉಚಿತ ವೈ-ಫೈ ಸೌಲಭ್ಯ

|
Google Oneindia Kannada News

ಬೆಂಗಳೂರು, ಫೆಬ್ರವರಿ 14: ಮಾರ್ಚ್‌ ಅಂತ್ಯದೊಳಗೆ ಬೆಂಗಳೂರಲ್ಲಿ 200 ಕಡೆಗಳಲ್ಲಿ ಉಚಿತ ವೈ-ಫೈ ಸೌಲಭ್ಯ ದೊರೆಯಲಿದೆ.

110 ಪ್ರದೇಶಗಳಲ್ಲಿ ಈಗಾಗಲೇ ಹಾಟ್‌ಸ್ಪಾಟ್‌ಗಳನ್ನು ಅಳವಡಿಸಿದ್ದು, ಮಾರ್ಚ್‌ನಿಂದ ಉಚಿತ ವೈ-ಫೈ ಸೇವೆ ಲಭ್ಯವಾಗಲಿದೆ.

6 ತಿಂಗಳಿನಲ್ಲಿ ಬೆಂಗಳೂರು ತುಂಬಾ ಉಚಿತ ವೈ-ಫೈ 6 ತಿಂಗಳಿನಲ್ಲಿ ಬೆಂಗಳೂರು ತುಂಬಾ ಉಚಿತ ವೈ-ಫೈ

ರಾಜ್ಯ ಸರ್ಕಾರವು 5938 ಸ್ಥಳಗಳಲ್ಲಿ ಹಾಟ್‌ಸ್ಪಾಟ್‌ ಅಳವಡಿಸಿ ವೈ-ಫೈ ಸೌಲಭ್ಯ ಕಲ್ಪಿಸಲು ಅನುಮೋದನೆ ನೀಡಿತ್ತು. ಇದೀಗ ಸಧ್ಯಕ್ಕೆ 200 ಸ್ಥಳಗಳಲ್ಲಿ ಉಚಿತ ವೈ-ಫೈ ಸೌಲಭ್ಯ ಸಿಗಲಿದೆ.

Bengaluru city will become wifi city soon

ಟೆಲಿಕಾಂ ಕಂಪನಿಗಳ ಜೊತೆಗೆ ಚರ್ಚಿಸಿ, ಸ್ಮಾರ್ಟ್ ಪೋಲ್‌ಗಳನ್ನು ಹಾಕಲು ಅವಕಾಶ ಮಾಡಿಕೊಟ್ಟಿದೆ. ಇಂಡಸ್ ಟವರ್ಸ್ ಹನಿಕಾಂಬ್, ಡಿ-ವೋಯ್ಸ್ ಮತ್ತು ಎಸಿಟಿ ಟೆಲಿಕಾಂ ಕಂಪನಿಗಳು ವೈಫೈ ಸೌಲಭ್ಯ ಕಲ್ಪಿಸಲು ಭರದ ಸಿದ್ಧತೆ ನಡೆಸಿವೆ.

ದಕ್ಷಿಣ ಕನ್ನಡದ ಕೆಲವು ಗ್ರಾಮಗಳಲ್ಲಿ ಸಿಗಲಿದೆ ಉಚಿತ ವೈಫೈ ಸೇವೆ ದಕ್ಷಿಣ ಕನ್ನಡದ ಕೆಲವು ಗ್ರಾಮಗಳಲ್ಲಿ ಸಿಗಲಿದೆ ಉಚಿತ ವೈಫೈ ಸೇವೆ

ಇಂಡಸ್ ಟವರ್ಸ್ ಕಂಪನಿಯು ಬಿಬಿಎಂಪಿ ಕೇಂದ್ರ ಕಚೇರಿ , ರಾಜಭವನ, ಕಸ್ತೂರ ಬಾ ರಸ್ತೆ ಸೇರಿದಂತೆ 5 ಕಡೆ ಸ್ಮಾರ್ಟ್ ಪೋಲ್‌ಗಳನ್ನು ಹಾಕಿದೆ. ಹನಿಕಾಂಬ್ ಮತ್ತು ಡಿ-ವೋಡ್ಸ್ ಕಂಪನಿಗಳು ಚಿಕ್ಕಲಸಂದ್ರ, ಕೊತ್ತನೂರು ಮುಖ್ಯರಸ್ತೆ, ಅಗರ, ಎಚ್‌ಎಸ್‌ಆರ್ 1ನೇ ಸೆಕ್ಟರ್, ಜಯನಗರ ನಾಲ್ಕನೇ ಬ್ಲಾಕ್, ಜೆಪಿನಗರ, ಆರ್‌ಟಿ ನಗರ, ಇಂದಿರಾನಗರ ಡಿಫೆನ್ಸ್ ಕಾಲೊನಿ, ವಿವಿಪುರಂ, ಆರ್‌ಟಿನಗರ, ಆಂಜನೇಯ ದೇವಸ್ಥಾನ ಬೀದಿ ಗಳಲ್ಲಿ ಹಾಟ್‌ಸ್ಪಾಟ್‌ಗಳನ್ನು ಅಳವಡಿಸಿದೆ.

English summary
Bengaluru will get minimum 200 free Wi-Fi hotspot with in a month . So city will become Wi-Fi city soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X